ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಕರೆಸಿ ಉದ್ಯಮಿ ಪುತ್ರನ ಸುಲಿಗೆ: 4 ಕೋಟಿ ರೂ. ಡಿಮ್ಯಾಂಡ್​, ಮಹಿಳೆ ಸೇರಿದಂತೆ ನಾಲ್ವರ ಬಂಧನ

ಸರ್ಕಾರದ ಟೆಂಡರ್ ಕೊಡಿಸುವುದಾಗಿ ಕರೆಸಿ ಮಹಿಳೆಯ ಗ್ಯಾಂಗ್​​ನಿಂದ ನಗರದ ಉದ್ಯಮಿ ಪುತ್ರನನ್ನು ಟ್ರಾಪ್ ಮಾಡಲಾಗಿದೆ. ಮಹಿಳೆ ಸೇರಿ ನಾಲ್ವರಿಂದ ಪಿಸ್ತೂಲ್ ತೋರಿಸಿ ಉದ್ಯಮಿ ಪುತ್ರನಿಗೆ ಬ್ಲಾಕ್ ಮೇಲ್ ಮಾಡಲಾಗಿದೆ.

ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಕರೆಸಿ ಉದ್ಯಮಿ ಪುತ್ರನ ಸುಲಿಗೆ: 4 ಕೋಟಿ ರೂ. ಡಿಮ್ಯಾಂಡ್​, ಮಹಿಳೆ ಸೇರಿದಂತೆ ನಾಲ್ವರ ಬಂಧನ
ಉದ್ಯಮಿಯ ಪುತ್ರ ಸೂರಜ್, ಆರೋಪಿ ಮಹಿಳೆ ಪುಷ್ಪಾ.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Aug 24, 2022 | 8:44 AM

ಬೆಂಗಳೂರು: ಸರ್ಕಾರದ ಟೆಂಡರ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಪುತ್ರನಿಂದ 25 ಲಕ್ಷ ರೂ. ಸುಲಿಗೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಉದ್ಯಮಿ ರವಿ ಎಂಬುವವರ ಪುತ್ರ ಸೂರಜ್ ಮೇಲೆ ಪಿಸ್ತೂಲ್ ತೋರಿಸಿ ಖತರ್ನಾಕ್ ಗ್ಯಾಂಗ್​​ನಿಂದ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಉದ್ಯಮಿ ಬ್ಯಾಟರಾಯನಪುರ ಪೊಲೀಸ ಠಾಣೆಗೆ ದೂರು ನೀಡಿದ್ದು, ಸದ್ಯ ಮಹಿಳೆ ಪುಷ್ಪಾ, ಅಯ್ಯಪ್ಪ@ ಅರ್ಜುನ್, ರಾಕೇಶ್ ಹಾಗೂ ಸಂತೋಷ್​ನನ್ನು ಬಂಧಿಸಲಾಗಿದೆ. ಸರ್ಕಾರದ ಟೆಂಡರ್ ಕೊಡಿಸುವುದಾಗಿ ಕರೆಸಿ ಮಹಿಳೆಯ ಗ್ಯಾಂಗ್​​ನಿಂದ ನಗರದ ಉದ್ಯಮಿ ಪುತ್ರನನ್ನು ಟ್ರಾಪ್ ಮಾಡಲಾಗಿದೆ. ಮಹಿಳೆ ಸೇರಿ ನಾಲ್ವರಿಂದ ಪಿಸ್ತೂಲ್ ತೋರಿಸಿ ಉದ್ಯಮಿ ಪುತ್ರನಿಗೆ ಬ್ಲಾಕ್ ಮೇಲ್ ಮಾಡಲಾಗಿದೆ. ಉದ್ಯಮಿ ರವಿ ಇಂಡಸ್ಟ್ರೀಯಲ್ ಸಪ್ಲೈ ನಲ್ಲಿ ಮಾಲೀಕರಾಗಿದ್ದಾರೆ. ಹಾಗಾಗಿ ಆತನ ಮಗನಾದ ಸೂರಜ್​ನನ್ನು ಕಿಡ್ನಾಪ್ ಮಾಡಲಾಗಿದೆ.

ಇದನ್ನೂ ಓದಿ:ಅನೈತಿಕ ಸಂಬಂಧದ ಅನುಮಾನದಡಿ ಪತ್ನಿಯನ್ನೇ ಕೊಲೆಗೈದ ಪತಿಯ ಬಂಧನ

4 ಕೋಟಿ ಹಣಕ್ಕೆ ಡಿಮ್ಯಾಂಡ್:

ಸರ್ಕಾರದ ಟೆಂಡರ್ ಕೊಡುಸ್ತಿನಿ ಎಂದು ನಾಲ್ಕೈದು ಬಾರಿ ಮಹಿಳೆ ಪುಷ್ಪಾ ಭೇಟಿಯಾಗಿದ್ದು, ಹೀಗಾಗಿ ಸಂತೋಷ್ ಎಂಬುವವರನ್ನ ಭೇಟಿ ಮಾಡಿಸಿದ್ದಳು. ಸಂತೋಷ್ ಐಎಎಸ್ ಅಧಿಕಾರಿಯ ಪಿಎ ಎಂದಿದ್ದಳು. ಬಳಿಕ ಟೆಂಡರ್ ಕೊಡುಸ್ತಾರೆ ಎಂದು ಹೇಳಿ ಮಾತನಾಡುವ ವೇಳೆ ಗ್ಯಾಂಗಿನ ಇನ್ನಿಬ್ಬರೂ ನುಗ್ಗಿದ್ದು, 4 ಕೋಟಿ ಹಣ ಕೊಡದಿದ್ದರೆ ಬಿಡೊದಿಲ್ಲ ಎಂದು ಡಿಮ್ಯಾಂಡ್ ಮಾಡಿದ್ದಾರೆ. ನನ್ನ ಬಳಿ‌ ಅಷ್ಟು ದುಡ್ಡಿಲ್ಲ, ಮನೆ ಮಾರಿದರೂ ಅಷ್ಟು ದುಡ್ಡು ಸಿಗಲ್ಲ, ಬಿಟ್ಟು ಬಿಡಿ ಎಂದು ಸೂರಜ್ ಕೇಳಿಕೊಂಡಿದ್ದಾನೆ. ನಂತರ ಸೂರಜ್ ತನ್ನ ಸ್ನೇಹಿತ ಗುರುಮೂರ್ತಿಗೆ ಹೇಳಿ ಐದು ಗಂಟೆಯ ವೇಳೆ 25 ಲಕ್ಷ ತರುವಂತೆ ಹೇಳಿದ್ದಾನೆ. ಅಬ್ದುಲ್ ಕಲಾಂ ಚಾರಿಟೇಬಲ್ ಟ್ರಸ್ಟ್ ಬಳಿ 25 ಲಕ್ಷ ಹಣ ತಂದಿದ್ದ ಗುರುಮೂರ್ತಿ, ಸೂರಜ್ ಇಲ್ಲದ ಕಾರಣ ಪುಷ್ಪಾಳ ಕಡೆಯವರಿಗೆ ಹಣ ನೀಡದೆ ವಾಪಾಸಾಗಿದ್ದಾನೆ.

ರೇಪ್​ ಕೇಸ್​ ಹಾಕುವುದಾಗಿ ಬೆದರಿಕೆ:

ಆದರೆ ಈ ವೇಳೆ ಸೂರಜ್ ನನ್ನು ತನ್ನ ಮನೆಗೆ ಕರೆದೊಯ್ದಿದ್ದ ಪುಷ್ಟ, ನಂತರ ಹಣ ಕೊಡಬೇಕು ಇಲ್ಲ ನನ್ನನ್ನ ರೇಪ್ ಮಾಡಿದ್ದೀಯಾ ಎಂದು ಹೇಳಿ ಕೇಸು ಹಾಕಿಸ್ತಿನಿ‌ ಎಂದು ಬೆದರಿಕೆ ಹಾಕಲಾಗಿದೆ. ಈ ವೇಳೆ ಮತ್ತೆ ಗುರುಮೂರ್ತಿಯನ್ನು ಆಕೆಯ ಮನೆಗೆ ಕರೆಸಿಕೊಂಡು ಹಣ ನೀಡಲಾಗಿತ್ತು. 25 ಲಕ್ಷ ಹಣ ಪುಷ್ಪಳಿಗೆ ನೀಡಿದ ಗುರುಮೂರ್ತಿ ಹೊರಟು ಹೊಗಿದ್ದ. ನಂತರ ರಾತ್ರಿ 9 ಗಂಟೆಗೆ ಸೂರಜ್ ಬಿಟ್ಟು ಕಳುಹಿಸಲಾಗಿತ್ತು. ಹೊರಗೆ ಹೇಳಿದರೆ ರೇಪ್ ಕೇಸ್ ಹಾಕುವುದಲ್ಲದೆ ಇಡೀ‌ ಕುಟುಂಬವನ್ನ ಹತ್ಯೆ ಮಾಡುತ್ತೆನೆಂದು ಮಹಿಳೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:38 am, Wed, 24 August 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ