ಬೆಂಗಳೂರಿನಲ್ಲಿ ಬೈಕ್ ಸವಾರನ ಮೇಲೆ ಕಾರು ಹತ್ತಿಸಿದ ಚಾಲಕಿ; ಭೀಕರ ಅಪಘಾತದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ

ಕಾರು ಟರ್ನ್ ಮಾಡಲು ಹೋಗಿ ಚಾಲಕಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾರೆ. ನಂತರ ಬೈಕ್ ಸವಾರ ಕಾರಿನ ಚಕ್ರದ ಬಳಿ ಬಿದ್ದಿದ್ದರು. ಬಳಿಕ ಸವಾರನ ಮೇಲೆಯೇ ಕಾರನ್ನು ಹತ್ತಿಸಿದ್ದಾರೆ.

ಬೆಂಗಳೂರಿನಲ್ಲಿ ಬೈಕ್ ಸವಾರನ ಮೇಲೆ ಕಾರು ಹತ್ತಿಸಿದ ಚಾಲಕಿ; ಭೀಕರ ಅಪಘಾತದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ
ಕಾರು ಬೈಕ್ ಸವಾರನ ಮೇಲೆ ಹತ್ತಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ
Follow us
TV9 Web
| Updated By: sandhya thejappa

Updated on:May 23, 2022 | 10:33 AM

ಬೆಂಗಳೂರು: ಬೈಕ್ ಸವಾರನ (Bike Rider) ಮೇಲೆ ಚಾಲಕಿ ಕಾರು (Car) ಹತ್ತಿಸಿರುವ ಘಟನೆ ಬೆಂಗಳೂರಿನ ಪಟ್ಟೇಗಾರಪಾಳ್ಯ ರಸ್ತೆಯಲ್ಲಿ ಸಂಭವಿಸಿದೆ. ಹೊಸ ಕಾರು ಚಾಲನೆ ವೇಳೆ ವೈದ್ಯೆ ಡಾ.ಲಕ್ಷ್ಮೀ ಎಂಬುವವರು ಬೇಜವಾಬ್ದಾರಿತನ ಮೆರೆದಿದ್ದಾರೆ. ಕಾರು ಟರ್ನ್ ಮಾಡಲು ಹೋಗಿ ಚಾಲಕಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾರೆ. ನಂತರ ಬೈಕ್ ಸವಾರ ಕಾರಿನ ಚಕ್ರದ ಬಳಿ ಬಿದ್ದಿದ್ದರು. ಬಳಿಕ ಸವಾರನ ಮೇಲೆಯೇ ಕಾರನ್ನು ಹತ್ತಿಸಿದ್ದಾರೆ. ಭೀಕರ ಅಪಘಾತದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಮೇ 21ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ವೈದ್ಯೆ ಡಾ.ಲಕ್ಷ್ಮೀ ವಿರುದ್ಧ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಲ್ಗಾ ತೆಗೆಯಲು ಹೋಗಿದ್ದ ಮಹಿಳೆ ಸಾವು: ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಿದ್ದೇಶ್ವರ ಗಜ್ನಿಯಲ್ಲಿ ಕಲ್ಗಾ ತೆಗೆಯಲು ಹೋಗಿದ್ದ ಮಹಿಳೆ ನದಿಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ದೇವಕಿ ಶಂಕರ ಹರಿಕಂತ್ರ (40) ಸಾವನ್ನಪ್ಪಿದ ಮಹಿಳೆ. ಮಹಿಳೆ ಅಘನಾಶಿನಿ ನದಿಯಲ್ಲಿ ಕಲ್ಗಾ ತೆಗೆಯುತ್ತಿರು. ನಿನ್ನೆ ‌ಸಂಜೆ ನದಿಗೆ ಕಲ್ಗಾ ತೆಗೆಯಲು‌ ಹೋಗಿದ್ದಾಗ ಕಾಲು ಜಾರಿ ನದಿಯಲ್ಲಿ ಮುಳಗಿ ಮೃತಪಟ್ಟಿದ್ದಾರೆ. ಸದ್ಯ ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ
Image
ದೆಹಲಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ವಿಮಾನ ಸಂಚಾರ ವ್ಯತ್ಯಯ
Image
ತೆಪ್ಪದಲ್ಲಿ ತೆರಳುವಾಗ ದಿಕ್ಕು ತಪ್ಪಿ ಪರದಾಡುತ್ತಿದ್ದ ಮೂವರ ರಕ್ಷಣೆ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
Image
IND vs SA: ಟಿ20 ಸರಣಿಗೆ ಆಯ್ಕೆಯಾದ ಬೆನ್ನಲ್ಲೇ ದಿನೇಶ್ ಕಾರ್ತಿಕ್ ಮಾಡಿದ ಟ್ವೀಟ್ ಏನು ನೋಡಿ
Image
ದಿಶಾ ಪಟಾನಿಯ ತಂಟೆಗೆ ಬಂದವರ ಮೈ ಮೂಳೆ ಮುರಿಯೋದು ಗ್ಯಾರಂಟಿ; ಈ​ ವಿಡಿಯೋ ನೋಡಿ

ಇದನ್ನೂ ಓದಿ: ತೆಪ್ಪದಲ್ಲಿ ತೆರಳುವಾಗ ದಿಕ್ಕು ತಪ್ಪಿ ಪರದಾಡುತ್ತಿದ್ದ ಮೂವರ ರಕ್ಷಣೆ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ಎರಡು ಕುಟುಂಬಗಳ ನಡುವೆ ಮಾರಾಮಾರಿ: ಹಾಸನ: ಮನೆಯಲ್ಲಿ ಮಹಿಳೆ ನೇಣು ಬಿಗಿದು ಸಾವಿಗೀಡಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಗಂಡನ ಮನೆಯವರೇ ಹತ್ಯೆ ಮಾಡಿ ನೇಣು ಹಾಕಿರುವುದಾಗಿ ಮಹಿಳೆ ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದೆ. ಮಗಳ ಸಾವಿನಿಂದ ರೊಚ್ಚಿಗೆದ್ದ ಸಂಬಂಧಿಕರು ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರು ಉದ್ರಿಕ್ತರನ್ನ ಚದುರಿಸಿದ್ದಾರೆ. ಹಾಸನ ನಗರದ ವಿದ್ಯಾನಗರದಲ್ಲಿ ಈ ಘಟನೆ ನಡೆದಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:25 am, Mon, 23 May 22