ಬೆಂಗಳೂರು: ದೂರು ನೀಡಲು ಹೋದ ವಕೀಲರನ್ನೇ ಸೆಲ್ ಒಳಗೆ ಹಾಕಿ ಪೊಲೀಸರಿಂದ ದೌರ್ಜನ್ಯ!
ಸರ್ಕಾರಿ ಜಮೀನು ಕಬಳಿಕೆ ವಿಚಾರವಾಗಿ ದೂರು ನೀಡಲು ಹೋಗಿದ್ದ ವಕೀಲರನ್ನೇ ಸೆಲ್ ಒಳಗೆ ಹಾಕಿ ದೌರ್ಜನ್ಯ ಎಸಗಿದ ಆರೋಪ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ರಾಜಾನುಕುಂಟೆ ಠಾಣಾ ಪೊಲೀಸರು ವಿರುದ್ಧ ಕೇಳಿಬಂದಿದೆ. ಅಲ್ಲದೆ, ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ.
ದೇವನಹಳ್ಳಿ, ಸೆ.9: ಸರ್ಕಾರಿ ಜಮೀನು ಕಬಳಿಕೆ ವಿಚಾರವಾಗಿ ದೂರು ನೀಡಲು ಹೋಗಿದ್ದ ವಕೀಲರನ್ನೇ ಸೆಲ್ ಒಳಗೆ ಹಾಕಿ ದೌರ್ಜನ್ಯ ಎಸಗಿದ ಆರೋಪ ಬೆಂಗಳೂರು (Bengaluru) ನಗರ ಜಿಲ್ಲೆಯ ಯಲಹಂಕ ತಾಲೂಕಿನ ರಾಜಾನುಕುಂಟೆ ಠಾಣಾ ಪೊಲೀಸರು ವಿರುದ್ಧ ಕೇಳಿಬಂದಿದೆ. ಅಲ್ಲದೆ, ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ.
ಯಲಹಂಕ ತಾಲೂಕಿನ ಶ್ಯಾನಬೋಗನಹಳ್ಳಿಯ ಸರ್ಕಾರಿ ಜಮೀನು ವಿಚಾರವಾಗಿ ಪಂಚಾಯತ್ನಲ್ಲಿ ಜಗಳ ನಡೆದಿದೆ. ನಖಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಮಾಡಿದ್ದಾಗಿ ಆರೋಪಿಸಿದಾಗ ಎರಡು ಗುಂಪಿನ ನಡುವೆ ಗಲಾಟೆ ನಡೆದಿದೆ. ಈ ವಿಚಾರವಾಗಿ ವಕೀಲ ಚಂದ್ರಶೇಖರ ಮತ್ತು ಸಹೋದರನಿಂದ ರಾಜನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು, ಎರಡು ಕಡೆಯವರ ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಎದುರು ಪಾರ್ಟಿ ಅವರ ಮುಂದೆ ವಕೀಲ ಚಂದ್ರಶೇಖರ ಅವರನ್ನ ಸೆಲ್ ಒಳಗಡೆ ಹಾಕಿ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಕಳೆದ ಗುರುವಾರ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬೆಂಗಳೂರು; ಪಬ್, ಹುಕ್ಕಾ ಬಾರ್ಗಳ ಮೇಲೆ ಸಿಸಿಬಿ ಪೊಲೀಸರ ದಾಳಿ, ಡ್ರಗ್ಸ್ ಗುಂಗಲ್ಲಿ ಅಪ್ರಾಪ್ತರು
ಸದ್ಯ ಸೆಲ್ ಒಳಗಡೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿ ಪೊಲೀಸ್ ಠಾಣೆಯಲ್ಲಿ ನೊಂದವರಿಗೆ ನ್ಯಾಯ ಸಿಗುತ್ತಿಲ್ಲ ಅಂತ ಆಕ್ರೋಶ ಹೊರಹಾಕಲಾಗಿದೆ. ಘಟನೆ ಸಂಬಂಧ ಠಾಣೆಯ ಸಿಬ್ಬಂದಿ ಕಿರಣ್ ಮತ್ತು ಮೋಹನ್ ಎಂಬವರನ್ನು ಎಸ್ಪಿ ಅಮಾನತ್ತು ಮಾಡಿದ್ದಾರೆ.
ಆದರೆ, ಪ್ರಕರಣ ಸಂಬಂಧ ಎಸ್ಪಿ ಅವರು ಅಮಾಯಕ ಸಿಬ್ಬಂದಿಯನ್ನ ಅಮಾನತ್ತು ಮಾಡಿದ್ದಾರೆ ಅಂತ ದೂರುದಾರ ಚಂದ್ರಶೇಖರ್ ಆಕ್ರೋಶ ಹೊರಹಾಕಿದ್ದು, ದೌರ್ಜನ್ಯ ಎಸಗಿದ ಇನ್ಸ್ಪೆಕ್ಟರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Sat, 9 September 23