ಬೆಂಗಳೂರು; ಪಬ್, ಹುಕ್ಕಾ ಬಾರ್​ಗಳ ಮೇಲೆ ಸಿಸಿಬಿ ಪೊಲೀಸರ ದಾಳಿ, ಡ್ರಗ್ಸ್ ಗುಂಗಲ್ಲಿ ಅಪ್ರಾಪ್ತರು

ನಿನ್ನೆ ಸಂಜೆಯಿಂದ ತಡರಾತ್ರಿವರೆಗೆ ನಗರದ ಒಟ್ಟು ಐನೂರಕ್ಕೂ ಹೆಚ್ಚು ಕಡೆ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸಿಸಿಬಿಯ ಎಲ್ಲಾ ಸಿಬ್ಬಂದಿ ಭಾಗಿಯಾಗಿದ್ದರು. ಪಬ್, ಹುಕ್ಕಾ ಬಾರ್​ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಹಲವಾರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು; ಪಬ್, ಹುಕ್ಕಾ ಬಾರ್​ಗಳ ಮೇಲೆ ಸಿಸಿಬಿ ಪೊಲೀಸರ ದಾಳಿ, ಡ್ರಗ್ಸ್ ಗುಂಗಲ್ಲಿ ಅಪ್ರಾಪ್ತರು
ಪಬ್, ಹುಕ್ಕಾ ಬಾರ್​ಗಳ ಮೇಲೆ ಸಿಸಿಬಿ ಪೊಲೀಸರ ದಾಳಿ
Follow us
| Updated By: ಆಯೇಷಾ ಬಾನು

Updated on:Sep 09, 2023 | 12:34 PM

ಬೆಂಗಳೂರು, ಸೆ.09: ಅಪ್ರಾಪ್ತ ಮಕ್ಕಳಿಗೆ ಮದ್ಯ(Alcohol) ನೀಡುವುದು, ಡ್ರಗ್ಸ್(Drugs) ಸರಬರಾಜು ಸೇರಿ ವಿವಿಧ ಕಾರಣಗಳಿಗೆ ಬೆಂಗಳೂರಿನಾದ್ಯಂತ ತಡರಾತ್ರಿ ಸಿಸಿಬಿ ಪೊಲೀಸರು(CCB Police) ಪಬ್​ಗಳ ಮೇಲೆ ದಾಳಿ ನಡೆಸಿದ್ದಾರೆ. ನಿನ್ನೆ ಸಂಜೆಯಿಂದ ತಡರಾತ್ರಿವರೆಗೆ ನಗರದ ಒಟ್ಟು ಐನೂರಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸಿಸಿಬಿಯ ಎಲ್ಲಾ ಸಿಬ್ಬಂದಿ ಭಾಗಿಯಾಗಿದ್ದರು. ಪಬ್, ಹುಕ್ಕಾ ಬಾರ್​ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಹಲವಾರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಪ್ರಾಪ್ತರು ನಕಲಿ ಆಧಾರ್ ಕಾರ್ಡ್ ಬಳಕೆ ಮಾಡಿಕೊಂಡು ಪಬ್ ಹೋಗಿರುವುದು ಪತ್ತೆಯಾಗಿದೆ. ಡಿಜಿಟಲ್ ನಕಲಿ ಆಧಾರ್ ಕಾರ್ಡ್​ಗಳನ್ನು ಸಿಸಿಬಿ ಪತ್ತೆ ಮಾಡಿದೆ. ಇನ್ನು ಅಪ್ರಾಪ್ತರು ಡ್ರಗ್ಸ್ ಸೇವನೆ ಮಾಡಿರುವುದು ಸಹ ಪತ್ತೆಯಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಮಂಕಿ ಕ್ಯಾಪ್ ಕಳ್ಳರ ಹಾವಳಿ

ನಗರದಲ್ಲಿ ಮೆಡಿಕಲ್ ಸ್ಟೋರ್ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ವಿಜಯನಗರದಲ್ಲಿ ಸುರಕ್ಷಾ ಮೆಡಿಕಲ್ ಸ್ಟೋರ್ ನಲ್ಲಿ ಮಧ್ಯರಾತ್ರಿ ಕಳ್ಳತನ ನಡೆದಿತ್ತು. ಸ್ಟೋರ್​ನಲ್ಲಿ ಸಿಬ್ಬಂದಿ ಒಳಗಿದ್ದಾಗಲೇ ಶೆಟರ್ ಮುರಿದು ಒಳಗೆ ಎಂಟ್ರಿಕೊಟ್ಟಿದ್ದ ಕಳ್ಳನೋರ್ವ ಮಂಕಿ ಕ್ಯಾಪ್ ಧರಿಸಿ ಹಣ ಎಗಿರಿಸಿದ್ದ. ಅಷ್ಟರಲ್ಲೇ ಸಿಬ್ಬಂದಿ ಅಲರ್ಟ್ ಆಗಿ ಓಡಿಬಂದಿದ್ದು, ಕಳ್ಳ ಭಯದಿಂದ ಟೂಲ್ಸ್ ಬಿಟ್ಟು ಓಡಿಹೋಗಿದ್ದ. ಆ ನಂತರವೂ ಟೂಲ್ಸ್ ಗಾಗಿ ಅಂಗಡಿ ಬಳಿ ಬಂದಿದ್ದು, ಮಾಲೀಕನನ್ನ ನೋಡಿ ಎಸ್ಕೇಪ್ ಆಗಿದ್ದ.

ಇನ್ನು ಮತ್ತೊಂದೆಡೆ ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಪ್ರತಿಕ್ರಿಯೆ ನೀಡಿದ್ದು ಅನಧಿಕೃತ ಧೂಮಪಾನಕ್ಕೆ ಅವಕಾಶ ಮಾಹಿತಿ ಸಿಕ್ಕಿದ್ದು ಅಪ್ರಾಪ್ತರಿಗೂ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆ ದಾಳಿಯನ್ನು ಮಾಡಲಾಗಿದೆ. ಧೂಮಪಾನಕ್ಕೆ ಪ್ರತ್ಯೇಕ ಅವಕಾಶ ಮಾಡಿಕೊಡಬೇಕು. ಕೆಲವು ಕಡೆ ನಿಯಮ ಉಲ್ಲಂಘನೆಯಾಗಿದೆ. ಜೂನಿಯರ್ ಜಸ್ಟಿಸ್ ಆಕ್ಟ್ ಅಡಿ ಕ್ರಮ ಕೈಗೊಳ್ಳಲಾಗಿದೆ. ಮದ್ಯಪಾನ ನಿಯಮಗಳ ಉಲ್ಲಂಘನೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಅಬ್ಬಿ ಜಲಪಾತ ಬಳಿ ಗೃಹಿಣಿಯ ಚಪ್ಪಲಿ ಪತ್ತೆ: ಸಾಂಸಾರಿಕ ಸಮಸ್ಯೆ ಹಿನ್ನೆಲೆ ಆತ್ಮಹತ್ಯೆ? NDRF ತಂಡದಿಂದ ಶೋಧ

ಸದ್ಯ ಘಟನೆ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ವಿಜಯನಗರದಲ್ಲಿ ಇದೇ ಮೊದಲಲ್ಲ, ಈ ಹಿಂದೆ ಕೂಡಾ ಸ್ಟೋರ್ ಗಳ ಕಳ್ಳತನ ನಡೆದಿದ್ರೂ ಪೊಲೀಸ್ರು ಕ್ರಮ ಕೈಗೊಳ್ತಿಲ್ಲ ಎನ್ನಲಾಗಿದೆ. ಪೊಲೀಸರು ಆರೋಪಿಗಳನ್ನ ಬಂಧಿಸಿದ ಬಳಿಕ ಮಂಕಿ ಕ್ಯಾಪ್ ಗ್ಯಾಂಗ್ ಯಾರೆಂದು ಗೊತ್ತಾಗಲಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:21 am, Sat, 9 September 23