ಬೆಂಗಳೂರು: ಅಪಘಾತಕ್ಕೀಡಾದ ಆಟೋ ಚಾಲಕ ಚಿಕಿತ್ಸೆ ಪಡೆದು ಸ್ಥಳಕ್ಕೆ ಬರುವಷ್ಟರಲ್ಲಿ ಆಟೋ ಮಾಯ, ಸಹಾಯ ಪಡೆದವರೇ ಕದ್ದರು
ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ ಆಟೋ ಚಾಲಕ ನಿಖಿಲ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆ ಬಳಿಕ ಚಾಲಕ ಅಪಘಾತಕ್ಕೀಡಾದ ಜಾಗಕ್ಕೆ ಬಂದು ನೋಡಿದಾಗ ಆಟೋ ಮಾಯವಾಗಿತ್ತು. ಹೀಗಾಗಿ ನಿಖಿಲ್, ತನ್ನ ರಕ್ಷಣೆಗೆ ಬಂದವರಲ್ಲಿ ಒಬ್ಬರು ತಮ್ಮ ವಾಹನದೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು, ಸೆ.09: ಸೆಪ್ಟೆಂಬರ್ 3 ರಂದು ಅಪಘಾತಕ್ಕೀಡಾಗಿದ್ದ 38 ವರ್ಷದ ಆಟೋ ಚಾಲಕ(Auto Driver) ತನ್ನ ಆಟೋ ಕಳೆದೋಗಿದೆ ಎಂದು ಕಂಗಾಲಾಗಿದ್ದಾರೆ. ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ ಆಟೋ ಚಾಲಕ ನಿಖಿಲ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆ ಬಳಿಕ ಚಾಲಕ ಅಪಘಾತಕ್ಕೀಡಾದ ಜಾಗಕ್ಕೆ ಬಂದು ನೋಡಿದಾಗ ಆಟೋ ಮಾಯವಾಗಿತ್ತು. ಹೀಗಾಗಿ ನಿಖಿಲ್, ತನ್ನ ರಕ್ಷಣೆಗೆ ಬಂದವರಲ್ಲಿ ಒಬ್ಬರು ತಮ್ಮ ವಾಹನದೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ(Auto Theft).
ಹೈಗ್ರೌಂಡ್ಸ್ ಜಂಕ್ಷನ್ ಬಳಿ ನಡೆದ ಅಪಘಾತದಲ್ಲಿ ನನ್ನ ಆಟೋರಿಕ್ಷಾ ಪಲ್ಟಿಯಾಗಿತ್ತು. ಮತ್ತು ತಾನು ಅದರ ಅಡಿಯಲ್ಲಿ ಸಿಲುಕಿಕೊಂಡಿದ್ದೆ. ಕೆಲವು ಜನರು ನನ್ನನ್ನು ಕಾಪಾಡಲು ಮುಂದಾದರು ವಾಹನವನ್ನು ಎತ್ತಿ, ನನ್ನನ್ನು ಹೊರತೆಗೆದು ಮತ್ತೊಂದು ಆಟೋರಿಕ್ಷಾದಲ್ಲಿ ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೂರು ಗಂಟೆಗಳ ನಂತರ ಅಪಘಾತ ಸ್ಥಳಕ್ಕೆ ಹೋದಾಗ ಆಟೋ ಕಣ್ಮರೆಯಾಗಿತ್ತು ಎಂದು ವರ್ತೂರಿನ ಚಾಲಕ ನಿಖಿಲ್ ಅವರು ಪೊಲೀಸರ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ನಾನು ಎರಡು ತಿಂಗಳ ಹಿಂದೆ ಸುಮಾರು 3.5 ಲಕ್ಷ ರೂಪಾಯಿ ಪಾವತಿಸಿ ಆಟೋವನ್ನು ಖರೀದಿಸಿದ್ದೆ. ನಾನು ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲವನ್ನು ಪಡೆದಿದ್ದೇನೆ ಮತ್ತು ಇಎಂಐ ರೂ 10,000 ಆಗಿದೆ. ನಾನು ಪೊಲೀಸ್ ಠಾಣೆಗೆ ಹೋದೆ ಮತ್ತು ಪೊಲೀಸರು ಆಟೋವನ್ನು ಪತ್ತೆಹಚ್ಚಲು ಸಮಯ ಬೇಕು ಎಂದು ಹೇಳಿದರು ಎಂದು ನಿಖಿಲ್ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು; ಪಬ್, ಹುಕ್ಕಾ ಬಾರ್ಗಳ ಮೇಲೆ ಸಿಸಿಬಿ ಪೊಲೀಸರ ದಾಳಿ
ಕಬ್ಬು ತುಂಬಿದ್ದ ಲಾರಿಗೆ ಹೈಟೆನ್ಷನ್ ವೈರ್ ತಗುಲಿ ಇಬ್ಬರು ಸಾವು
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಗುಂಡಾಲ್ನಲ್ಲಿ ಕಬ್ಬು ತುಂಬಿದ್ದ ಲಾರಿಗೆ ಹೈಟೆನ್ಷನ್ ವೈರ್ ತಗುಲಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಲಾರಿ ಚಾಲಕ ಚಿನ್ನು, ಲಾರಿ ಮಾಲೀಕ ಪ್ರಕಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿಗೆ ಅತಿ ಹೆಚ್ಚು ಎತ್ತರಕ್ಕೆ ಕಬ್ಬು ತುಂಬಿದ ಪರಿಣಾಮ ಘಟನೆ ನಡೆದಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ