ಬೆಂಗಳೂರು: ನಾಗರಬಾವಿ ರಿಂಗ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರದ ದಿಮ್ಮಿಗಳಿದ್ದ ಲಾರಿ (lorry) ಪಲ್ಟಿಯಾಗಿರುವಂತಹ ಘಟನೆ ನಡೆದಿದೆ. ಪಕ್ಕದಲ್ಲಿ ಬರುತ್ತಿದ್ದ 2 ಬೈಕ್ಗಳ ಮೇಲೆ ಮರದ ದಿಮ್ಮಿಗಳು ಬಿದ್ದು ತಮಿಳುನಾಡು ಮೂಲದ ಬೈಕ್ ಸವಾರ ಸುಖೇಶ್(35) ಸಾವನ್ನಪ್ಪಿದ್ದಾನೆ. ಮತ್ತೊಬ್ಬರಿಗೆ ಗಂಭೀರ ಗಾಯವಾಗಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ 20ಕ್ಕೂ ಹೆಚ್ಚು ಮರದ ದಿಮ್ಮಿಗಳು ಬಿದಿದ್ದು, ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ರಾಯಚೂರಲ್ಲಿ ಹಾಡಹಗಲೇ ಹರಿದ ನೆತ್ತರು; ರಸ್ತೆಯಲ್ಲಿ ಅಟ್ಟಾಡಿಸಿ ಕಂಟ್ರ್ಯಾಕ್ಟರ್ ಕೊಲೆ ಮಾಡಿದ ಹಂತಕರು
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಟಿಟಿ ವಾಹನ ಡಿಕ್ಕಿ
ನೆಲಮಂಗಲ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಟಿಟಿ ವಾಹನ ಡಿಕ್ಕಿಯಾಗಿದ್ದು, ನಾಲ್ವರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆಯಲ್ಲಿ ಅಪಘಾತ ಸಂಭವಿಸಿದೆ. ಮೂವರು ಮಹಿಳಾ ಕಾರ್ಮಿಕರು ಹಾಗೂ ಚಾಲಕನಿಗೆ ಗಾಯವಾಗಿದ್ದು, ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ದಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ಗೆ ಕಾರು ಡಿಕ್ಕಿ, ಓರ್ವ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ
ಚಿಕ್ಕಮಗಳೂರು: ಬೈಕ್ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಶಿಡ್ಲೆ ಬಳಿ ಘಟನೆ ನಡೆದಿದೆ. ಕಾರ್ ಗುದ್ದಿದ್ದ ರಭಸಕ್ಕೆ ಇಬ್ಬರು ಬೈಕ್ ಸವಾರರ ಕಾಲು ಕಟ್ ಆಗಿದೆ. ಮಣಿಪಾಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಶೇಖರ್ ಮೃತಪಟ್ಟಿದ್ದಾರೆ. ವಿಜಯೇಂದ್ರ ಎಂಬುವರ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರು ಶೃಂಗೇರಿ ತಾಲೂಕಿನ ಬೇಸೂರು ಗ್ರಾಮದವರು. ಅಪಘಾತದ ಸುದ್ದಿ ಕೇಳಿ ಸ್ಥಳದಲ್ಲಿ ನೂರಾರು ಜನರು ಜಮಾವಣೆಗೊಂಡಿದ್ದರು. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: YouTube ಚಾನಲ್‌ಗೆ ವ್ಯೂಸ್ ಬರಲಿಲ್ಲವೆಂದು ಲೈಫ್ ಎಂಡ್ ಮಾಡಿಕೊಂಡ ಐಐಟಿ ಎಂಜಿನಿಯರಿಂಗ್ ವಿದ್ಯಾರ್ಥಿ!
ಕುಖ್ಯಾತ ಬೈಕ್ ಕಳ್ಳರನ್ನ ಬಂಧನ:
ಬೆಂಗಳೂರು: ಕುಖ್ಯಾತ ಬೈಕ್ ಕಳ್ಳರನ್ನ ಬೊಮ್ಮನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ತನಿಳುನಾಡು ಮೂಲದ ನೆಡುಚೆಲಿಯನ್, ತಿರುಪತಿ, ವಲ್ಲರಸು ಬಂಧಿತ ಆರೋಪಿಗಳು. 26 ಬೈಕ್ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಮಿಳುನಾಡಿನಿಂದ ಬಸ್ನಲ್ಲಿ ಬಂದು ರಸ್ತೆಗಳಲ್ಲಿ ಒಂಟಿಯಾಗಿರುತ್ತಿದ್ದ ಬೈಕ್ಗಳನ್ನ ಕದ್ದೊಯ್ಯುತ್ತಿದ್ದರು. ಡಿಯೋ ಬೈಕ್ಗಳನ್ನೆ ಟಾರ್ಗೆಟ್ ಮಾಡಿ ಕಳ್ಳತನ ಮಾಡಿತ್ತಿದ್ದರು.
Published On - 8:17 am, Fri, 22 July 22