ರಾಯಚೂರಲ್ಲಿ ಹಾಡಹಗಲೇ ಹರಿದ ನೆತ್ತರು; ರಸ್ತೆಯಲ್ಲಿ ಅಟ್ಟಾಡಿಸಿ ಕಂಟ್ರ್ಯಾಕ್ಟರ್ ಕೊಲೆ ಮಾಡಿದ ಹಂತಕರು
BSNL ಕಚೇರಿ ಬಳಿ ಗುತ್ತಿಗೆದಾರ ಮೆಹಬೂಬ್ ಅಲಿ(30) ಯನ್ನು ಮಚ್ಚಿನಿಂದ ಕೊಚ್ಚಿ ಹಂತಕರು ಭೀಕರವಾಗಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಸದರ್ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಯಚೂರು: ಹಾಡಹಗಲೇ ಕಂಟ್ರ್ಯಾಕ್ಟರ್ ಅಟ್ಟಾಡಿಸಿ ಕೊಲೆ ಮಾಡಿರುವ ಘಟನೆ ರಾಯಚೂರು ನಗರದ ಅಂದ್ರೂನ್ ಖಿಲ್ಲಾದಲ್ಲಿ ನಡೆದಿದೆ. BSNL ಕಚೇರಿ ಬಳಿ ಗುತ್ತಿಗೆದಾರ ಮೆಹಬೂಬ್ ಅಲಿ(30) ಯನ್ನು ಮಚ್ಚಿನಿಂದ ಕೊಚ್ಚಿ ಹಂತಕರು ಭೀಕರವಾಗಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಸದರ್ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮೆಹಬೂಬ್ ಬಿಎಸ್ಎನ್ಎಲ್ ಕಚೇರಿ ಬಳಿ ಬಂದಿದ್ದ. ಈ ವೇಳೆ ಅಡ್ಡಗಟ್ಟಿ ಮೆಹಬೂಬ್ ನನ್ನ ಕೊಲೆ ಮಾಡಿದ್ದಾರೆ. ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಂದಿದ್ದಾರೆ.
ಮಹಿಳಾ ಸಿವಿಲ್ ಇಂಜಿನಿಯರ್ ನೇಣಿಗೆ ಶರಣು
ಬೆಂಗಳೂರಿನ ನಾಗರಬಾವಿಯ ಕಲ್ಯಾಣನಗರದಲ್ಲಿ ಮಹಿಳಾ ಸಿವಿಲ್ ಇಂಜಿನಿಯರ್ ಸ್ಫೂರ್ತಿ(28) ನೇಣಿಗೆ ಶರಣಾಗಿದ್ದಾರೆ. ಗಂಡನ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಆರೋಪಿಸಲಾಗಿದ್ದು ನಿಖರ ಕಾರಣ ತಿಳಿದು ಬಂದಿಲ್ಲ. ಸ್ಫೂರ್ತಿ ಪತಿ ತಿಂಗಳ ಹಿಂದೆ ಮೊಬೈಲ್ ಫೋನ್ ಕಿತ್ತುಕೊಂಡಿದ್ದ. ಕೌಟುಂಬಿಕ ಕಲಹದಿಂದ, ಗಂಡನ ಕಿರುಕುಳದಿಂದಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಪೋಷಕರು ಆರೋಪಿಸಿದ್ದಾರೆ. ಪೋಷಕರು ತರೀಕೆರೆಯಿಂದ ಬಂದ ನಂತರ ಶವ ಇಳಿಸಲು ಸೂಚನೆ ನೀಡಲಾಗಿದ್ದು ಸ್ಥಳಕ್ಕೆ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವಿದ್ಯುತ್ ದುರಸ್ತಿ ವೇಳೆ ಕಂಬದಲ್ಲಿ ಸಿಲುಕಿ ನರಳಾಡಿದ ಯುವಕ
ವಿದ್ಯುತ್ ದುರಸ್ತಿ ಮಾಡಲು ಕಂಬ ಏರಿ ಕಂಬದಲ್ಲಿ ಸಿಕ್ಕಿ ಯುವಕ ರಮೇಶ್ ವಾಲೀಕಾರ (22) ನರಳಾಡಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹನುಮರಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಂಬದಲ್ಲಿ ಸಿಲುಕಿ ನರಳಾಡುತ್ತಿದ್ದ ಯುವಕನನ್ನು ಗ್ರಾಮಸ್ಥರು ಏಣಿ ಇಟ್ಟು ಕಂಬ ಏರಿ ಕಂಬದಿಂದ ಕೆಳಗಿಳಿಸಿದ್ದಾರೆ. ಕಂಬದಲ್ಲಿ ವಿದ್ಯುತ್ ದುರಸ್ತಿ ಮಾಡಲು ಕಂಬ ಏರಿದ್ದ ವೇಳೆ ಕಂಬದಲ್ಲಿ ವಿದ್ಯುತ್ ಹರಿಯುತ್ತಿದ್ದರಿಂದ ದುರ್ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿರುವ ಯುವಕ ರಮೇಶ್ನನ್ನು ಶಿಗ್ಗಾಂವಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಲಾರಿ ಬೈಕ್ ಡಿಕ್ಕಿ ಸವಾರ ಸಾವು
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹುಚ್ಚನಹಳ್ಳಿ ಬೈಪಾಸ್ ರಸ್ತೆಯ ಬ್ರಿಡ್ಜ್ ನ ಹತ್ತಿರ ಕಾಂಟ್ರಿಟ್ ತುಂಬಿದ ಲಾರಿ ಡಿಕ್ಕಿಯಾಗಿ ಬೈಕ್ ಹಿಂಬದಿ ಸವಾರ ಮೃತಪಟ್ಟ ಘಟನೆ ನಡೆದಿದೆ. ಹಳೆ ಪಾಳ್ಯದ ತಮ್ಮಯ್ಯ (56)ಮೃತ ವ್ಯಕ್ತಿ. ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಎಎಸ್ಪಿ ಉದೇಶ್ ಹಾಗೂ ತಿಪಟೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ.