MBA ವಿದ್ಯಾರ್ಥಿನಿಗೆ ಕಾರು ಚಾಲಕನ​ ಮೇಲೆ ಲವ್: ಮದ್ವೆಯಾದ ಒಂದೇ ವರ್ಷದಲ್ಲಿ ದುರಂತ ಸಾವು!

ಇವರಿಬ್ಬರು ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದರು. ಕಾಲೇಜು ಓದುವಾಗಲೇ ಇನ್ಸ್ಟಾಗ್ರಾಂ ಪ್ರೀತಿಗೆ ಸಿಲುಕಿ ಮನೆಯವರನ್ನ ಧಿಕ್ಕರಿಸಿ ಮದುವೆಯಾಗಿದ್ದಳು. ಆದ್ರೆ, ಅವರಿಬ್ಬರ ನಡುವಿನ ಸಂಸಾರ ಕೇವಲ ಒಂದುವರೆ ವರ್ಷದ ಬದುಕಿನ ಬಂಡಿಯ ಗಾಲಿ ಮುರಿದುಬಿದ್ದಿದೆ. ಭೀಮನ ಅಮಾವಾಸ್ಯೆ ಪೂಜೆ ಮುಗಿಸಿದ ಅವರಿಬ್ಬ ನಡುವೆ ಅದೊಂದ ಫೊನ್ ಕಾಲ್ ಆಕೆಯ ಸಾವಿನ ಕೂಪಕ್ಕೆ ತಳ್ಳಿದೆ.

MBA ವಿದ್ಯಾರ್ಥಿನಿಗೆ ಕಾರು ಚಾಲಕನ​ ಮೇಲೆ ಲವ್: ಮದ್ವೆಯಾದ ಒಂದೇ ವರ್ಷದಲ್ಲಿ ದುರಂತ ಸಾವು!
ಸ್ಪಂದನಾ-ಅಭಿಷೇಕ್
Updated By: ರಮೇಶ್ ಬಿ. ಜವಳಗೇರಾ

Updated on: Jul 25, 2025 | 11:10 PM

ಬೆಂಗಳೂರು, (ಜುಲೈ 25): ಒಂದು ವರ್ಷದ ಹಿಂದೆ ಪ್ರೀತಿಸಿ (Love) ಮದುವೆಯಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಜೀವಬಿಟ್ಟಿರೋ ಘಟನೆ ಬೆಂಗಳೂರು (Bengaluru) ಹೊರವಲಯದ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಪಂದನಾ (24) ಮೃತ ಮಹಿಳೆ. ಯಲಹಂಕದ ಖಾಸಗಿ ಕಾಲೇಜಿನಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದ ಕನಕಪುರದ ನಿವಾಸಿ ಸ್ಪಂದನಾ ಇನ್ಸ್ಟಾಗ್ರಾಂ ನಲ್ಲಿ ಅಭಿಷೇಕ್ ಪರಿಚಯವಾಗಿದ್ದ. ಬಳಿಕ ಕಾಡಿಬೇಡಿ ಮನೆಯವರ ವಿರೋಧದ ನಡುವೆಯೂ ಸ್ಪಂದನಾಳನ್ನ ಮದುವೆಯಾಗಿದ್ದ. ಮಾದನಾಯಕನಹಳ್ಳಿಯ ಅಂಚೆ ಪಾಳ್ಯದಲ್ಲಿ ಅಭಿಷೇಕ್-ಸ್ಪಂದನ ವಾಸವಾಗಿದ್ದರು. ಆದ್ರೆ, ಮದುವೆಯಾದ ಒಂದು ವರೆ ವರ್ಷದಲ್ಲಿದಲ್ಲೇ ಸ್ಪಂದನ ದುರಂತ ಸಾವು ಕಂಡಿದ್ದಾಳೆ.

ನಿನ್ (ಜುಲೈ 24) ಭೀಮನ ಅಮವಾಸ್ಯೆ ಹಿನ್ನೆಲೆ ಗಂಡನಿಗೆ ಬೆಳಿಗ್ಗೆ 10 ಗಂಟೆಗೆ ಖುಷಿಯಿಂದಲೆ ಪೂಜೆ ಮಾಡಿದ್ದಳು. ಆದರೆ ಅವರಿಬ್ಬರ ಖುಷಿ ಕೇವಲ ಕ್ಷಣಮಾತ್ರವಾಗಿತ್ತು.  ಆದ್ರೆ, 11 ಗಂಟೆಗೆ ಅಭಿಷೇಕ್ ಗೆ ಅವರ ಆಫೀಸ್ ನಲ್ಲಿದ್ದ ಯುವತಿ ಮಾಡಿದ ಅದೊಂದು ಫೋನ್ ಕರೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಮೊದಲೇ ಗಂಡನ ಮೇಲೆ ಅನುಮಾನದಲ್ಲಿದ್ದ ಸ್ಪಂದನಾ ಮಾನಸಿಕವಾಗಿ ಕುಗ್ಗಿದ್ದಳು. ಬಳಿಕ ರಾತ್ರಿ 12:45 ಸ್ಪಂದನಾ ತಂಗಿಗೆ ಮೆಸೇಜ್ ಮಾಡಿ ಬಳಿಕ ಮನೆಯ ಕಿಟಕಿಗೆ ನೇಣುಬಿಗಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದ್ರೆ, ಆತ್ಮಹತ್ಯೆಗೂ ಮುನ್ನ ಸ್ಪಂದನಾ, ತನ್ನ ತಂಗಿಗೆ ಮೆಸೇಜ್ ಮಾಡಿದ್ದು, ನನ್ನ ಸಾವಿಗೆ ನನ್ನ ಗಂಡ ಅವರ ತಂದೆತಾಯಿ ಹಾಗೂ ಅವರ ಕಚೇರಿಯಲ್ಲಿದ್ದವರು ಕಾರಣ ಎಂದು ಮೆಸೇಜ್ ಮಾಡಿ ನೇಣಿಗೆ ಶರಣಾಗಿದ್ದಾಳೆ.

ಇದನ್ನೂ ಓದಿ: ಅನೈತಿಕ ಸಂಬಂಧ: ಅಕ್ಕನ ಜತೆ ರೆಡ್​ ಹ್ಯಾಂಡ್​​ ಆಗಿ ಸಿಕ್ಕಿಬಿದ್ದವನನ್ನು ತಮ್ಮ ಮಾಡಿದ್ದೇನು ಗೊತ್ತಾ?

ವರದಕ್ಷಿಣೆ ಕಿರುಕುಳ ಆರೋಪ

ಮತ್ತೊಂದೆಡೆ ಮದುವೆಯಾದ ಬಳಿಕ ಸ್ಪಂದನಾಗೇ ಅಭಿಷೇಕ್​ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಇದೆ. ಅಭಿಷೇಕ್​ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರ ಬಗ್ಗೆ ಸ್ಪಂದನಾ ತಂದೆಗೆ ಹೇಳಿದ್ದಳಂತೆ. ಬಳಿಕ 5 ಲಕ್ಷ ಹಣವನ್ನು ಕೊಟ್ಟು ರಾಜಿ ಸಂಧಾನ ಮಾಡಿಸಿದ್ದರಂತೆ. ಮತ್ತೆ ನಿನ್ನೆ ತಂದೆಗೆ ಕರೆ ಮಾಡಿ ಅತ್ತೆ ಮಾತನ್ನ ಕೇಳಿ ನನ್ನ ಗಂಡ ಕಿರುಕುಳ ಕೊಡ್ತಿದ್ದಾನೆ ಅಂಥ ಕಣ್ಣೀರಿಟ್ಟಿದ್ದಳಂತೆ ಸ್ಪಂದನಾ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಕರೆ ಮಾಡಿ ನಿಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂಬ ವಿಚಾರ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಆಸ್ಪತ್ರೆಗೆ ಹೋಗಿ ನೋಡಿದಾಗ ಮಗಳು ಪ್ರಾಣ ಬಿಟ್ಟಿದ್ದಳು.

ನೇಣು ಬಿಗಿದ ಸ್ಥಿತಿಯಲ್ಲಿ ಮೃತ ಸ್ಪಂದನಾ ಬಾಡಿ ಇತ್ತಂತೆ. ಬಳಿಕ ಯಾರಿಗೂ ಮಾಹಿತಿ ಕೊಡದೇ ತಾವೇ ಮೃತದೇಹವನ್ನು ಇಳಿಸಿ ಆಸ್ಪತ್ರೆಗೆ ಸಾಗಿಸಿದ್ದಾರಂತೆ. ಅಲ್ಲದೇ, ಸ್ಪಂದನಾ ಮೈ ಮೇಲೆ ಗಾಯದ ಗುರುತುಗಳಿವೆ ಅನ್ನೋ ಆರೋಪ ಕೂಡ ಇದೆ. ಹೀಗಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇದಾದ ಬಳಿಕ ಸ್ಪಂದನಾ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು. ಈ ಘಟನೆ ಸಂಬಂಧ ಪತಿ ಅಭಿಷೇಕ್ ಮತ್ತು ಅತ್ತೆ ಲಕ್ಷ್ಮಮ್ಮ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಬಳಿಕ ಸ್ಪಂದನಾ ಸಾವಿಗೆ ಅಸಲಿ ಕಾರಣ ಏನು ಎನ್ನುವುದು ತಿಳಿದುಬರಲಿದೆ.

ವರದಿ: ಮಂಜುನಾಥ್, ಟಿವಿ9 ನೆಲಮಂಗಲ

Published On - 11:07 pm, Fri, 25 July 25