AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನೈತಿಕ ಸಂಬಂಧ: ಅಕ್ಕನ ಜತೆ ರೆಡ್​ ಹ್ಯಾಂಡ್​​ ಆಗಿ ಸಿಕ್ಕಿಬಿದ್ದವನನ್ನು ತಮ್ಮ ಮಾಡಿದ್ದೇನು ಗೊತ್ತಾ?

ಅಕ್ಕನ ಜೊತೆಗೆ ಪಲ್ಲಂಗ ಹತ್ತಲು ಬಂದವನಿಗೆ ಸಿಕ್ಕ ಸಿಕ್ಕ ವಸ್ತುವಿನಿಂದ ಹೊಡೆದು ಹಲ್ಲೆ ಮಾಡಿದ್ದ ತಮ್ಮ. ನಡುರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದ ಪ್ರಿಯಕರನ ಉಳಿಸಲು ಗೋಗರಿಯುತ್ತಿದ್ದಳು ಅಕ್ಕ. ಅಕ್ಕಪಕ್ಕದವರು ಬಂದು ಆಸ್ಪತ್ರೆ ಸೇರಿಸುವಷ್ಟರಲ್ಲಿ ಹೆಣವಾಗಿದ್ದ. ಏನಿದು ಪ್ರೇಮ ಕಹಾನಿ? ಈ ಘಟನೆ ನಡೆದಿದ್ದು ಎಲ್ಲಿ ಅಂತಿರಾ ಈ ಸ್ಟೋರಿ ನೋಡಿ.

ಅನೈತಿಕ ಸಂಬಂಧ: ಅಕ್ಕನ ಜತೆ ರೆಡ್​ ಹ್ಯಾಂಡ್​​ ಆಗಿ ಸಿಕ್ಕಿಬಿದ್ದವನನ್ನು ತಮ್ಮ ಮಾಡಿದ್ದೇನು ಗೊತ್ತಾ?
Illicit Relationship
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Jul 25, 2025 | 8:58 PM

Share

ಬೆಂಗಳೂರು, (ಜುಲೈ 25): ಅಕ್ಕನ ಜತೆ ಅನೈತಿಕ ಸಂಬಂಧ (Illicit Relationship) ಹೊಂದಿದ್ದ ಯುವಕನನ್ನು ತಮ್ಮ ಬರ್ಬರವಾಗಿ ಹತ್ಯೆ (Murder) ಮಾಡಿದ್ದಾನೆ. ಹಾವೇರಿ (Haveri) ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ. ಅಕ್ಕನ ಜೊತೆ ಚಳಗೇರಿ ಗ್ರಾಮದಲ್ಲಿ ದಿಲೀಪ್ ಹಿತ್ತಲಮನಿ(47) ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ. ಇದನ್ನು ಕಂಡ ಅಕ್ಕನ ತಮ್ಮ ರಾಜಯ್ಯ ಸಿಡಿದೆದ್ದು, ದಿಲೀಪ್ ಹಿತ್ತಲಮನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ. ಬಳಿಕ ನಾನೇ ಕೊಲೆ ಮಾಡಿದ್ದೆನೆ ಎಂದು ರಾಜಯ್ಯ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ.

ರಾಣೆಬೆನ್ನೂರು ತಾಲೂಕು ಚಳಕೇರಿ ಗ್ರಾಮದ ಈ ಉಮಾ-ಹಾಗೂ ಕೊಲೆಯಾದ ದಿಳ್ಳೆಪ್ಪನಿಗೆ ಬಹಳ ವರ್ಷದಿಂದ ಪರಿಚಯ ಇತ್ತು .ಕೊಲೆಯಾದ ದಿಳ್ಳೆಪ್ಪ ರೈಲ್ವೆ ಇಲಾಖೆ ನೌಕರ. ಕೈ ತುಂಬಾ ಸಂಬಳ. ಆದರೆ ಉಮಾ ಜೊತೆ ದಿಳ್ಳೆಪ್ಪ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಂದು ಹೇಳಲಾಗುತ್ತಿದೆ. ಇದೇ ವಿಚಾರಕ್ಕೆ ಉಮಾಳ ತಮ್ಮ( ರಾಜು) ಅಲಿಯಾಸ್ ರಾಜಯ್ಯ ಜಗಳವಾಡುತ್ತಾ ಇದ್ದ. ನನ್ನ ಅಕ್ಕನಿಗೆ ಮದುವೆಯಾಗಿದೆ ಬಿಟ್ಟು ಬಿಡು ಎಂದು ಹೇಳುತ್ತಲೇ ಇದ್ದ.ಆದರೆ ದಿಳ್ಳೆಪ್ಪ ಮಾತ್ರ ಕೇಳಿರಲಿಲ್ಲ. ಹೀಗಾಗಿ ನಾನೇ ಇಂದು ಕೊಲೆ ಮಾಡಿದ್ದೆನೆ ಎಂದು ರಾಜಯ್ಯ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ; ಬೆಂಗಳೂರಿನಲ್ಲಿ ಇಬ್ಬರು ಸ್ನೇಹಿತೆಯರಿಗೆ ಡಿಜಿಟಲ್ ಅರೆಸ್ಟ್: ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ

ದಿಳ್ಳೆಪ್ಪನ ಕೊಲೆ ಸುದ್ದಿ ಮನೆಯವರಿಗೆ ತಿಳಿಯುತ್ತಿದ್ದಂತೆ ಕಾಕೋಳ ಗ್ರಾಮದಿಂದ 18 ಕಿಲೋ ಮೀಟರ್ ದೂರ ವಿರುವ ಚಳಗೇರಿ ಗ್ರಾಮಕ್ಕೆ ದಾವಿಸಿ ಬಂದಿದ್ದರು. ಆದರೆ ಅಷ್ಟೋತಿಗಾಗಲೇ ದಿಳ್ಳೆಪ್ಪನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಕೊಲೆಗಾರ ರಾಜಯ್ಯ ಪೊಲೀಸ್ ಅತಿಥಿಯಾಗಿದ್ದ. ದಿಳ್ಳೆಪ್ಪ ಶವಾಗಾರದಲ್ಲಿ ಹೆಣವಾಗಿ ಮಲಗಿದ್ದ. ಆದರೆ ಘಟನೆಯ ಬಗ್ಗೆ ಕುಟುಂಬಸ್ಥರು ಹೇಳುವುದೇ ಬೇರೆ.ನಮ್ಮ ಅಣ್ಣನ ಜೊತೆಗೆ ರಾಜಯ್ಯ ಹಣಕಾಸಿನ ವ್ಯವಹಾರ ಮಾಡಿದ್ದ. ಹಣ ಕೊಡುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಕೊಲೆಯಾಗಿದೆ ಎಂದು ರಾಣೇಬೆನ್ನೂರು ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಾಳಿ ಬದುಕ ಬೇಕಾಗಿದ್ದ ಮಗನನ್ನು ಕಳೆದುಕೊಂಡು ಮುಂದೆ ನಮ್ಮ ಕುಟುಂಬಕ್ಕೆ ಆದಾರ ಯಾರು ಎಂದು ಕಣ್ಣೀರು ಇಡುತ್ತಿದ್ದಾರೆ.

ಹಣಕಾಸಿನ ವಿಚಾರವೋ ಅನೈತಿಕ ಸಂಬಂಧವೋ ಪೊಲೀಸ್ ತನಿಖೆಯಿಂದ ಮಾತ್ರ ಗೋತ್ತಾಗಬೇಕಾಗಿದೆ. ಆದರೆ ಸಿಟ್ಟಿನ ಕೈಯಲ್ಲಿ ಬುದ್ದಿ ಕೊಟ್ಟು ಕೊಲೆ ಮಾಡಿದ್ದು ವಿಪರ್ಯಾಸವೇ ಸರಿ.

 ವರದಿ: ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ