ಬೆಂಗಳೂರು: ಇತ್ತಿಚೀನ ದಿನಗಳಲ್ಲಿ ಶೋಕಿ ಜೀವನದ ಹಿಂದೆ ಹೋಗುವವರ ಸಂಖ್ಯೆ ಜಾಸ್ತಿಯಾಗಿದೆ. ಅದಕ್ಕೊಸ್ಕರ ಎಂತಹ ಕೆಲಸಕ್ಕಾದರೂ ಇಳಿಯಲು ಸಿದ್ಧರಿದ್ದಾರೆ. ಅದರಂತೆ ಇಲ್ಲೊಬ್ಬಳು ಹೈ ಪೈ ಜೀವನದ ಆಸೆಗೆ ಬಿದ್ದು ಇದೀಗ ಅಂದರ್ ಆಗಿದ್ದಾಳೆ. ಹೌದು ಆಕೆ ವೃತ್ತಿಯಲ್ಲಿ ನರ್ಸ್(Nurse), ಕೈತುಂಬಾ ಒಳ್ಳೆ ಸಂಬಳ ಕೂಡ ಬರುತ್ತಿತ್ತು. ಇದರ ಮಧ್ಯೆ ಶೋಕಿ ಜೀವನದ ಜೊತೆಗೆ ಹಣದ ವ್ಯಾಮೋಹ ಕೂಡ ಜಾಸ್ತಿಯಾಗಿತ್ತು. ಇದಕ್ಕೊಸ್ಕರ ಕಳ್ಳತನ(Theft)ದ ಹಾದಿ ಹಿಡಿದಿದ್ದಳು. ಇದರಿಂದ ತನ್ನ ಇಷ್ಟದ ಕೆಲಸವನ್ನ ಕಳೆದುಕೊಂಡಳು. ಇನ್ನು ಕೆಲಸ ಹೋದ ಬಳಿಕ ಆಕೆ ಆಯ್ಕೆ ಮಾಡಿಕೊಂಡಿದ್ದೇ ಡೇಂಜರಸ್ ದಾರಿ. ಹೌದು ಬಾಡಿಗೆ ಕೇಳುವ ನೆಪದಲ್ಲಿ ಮನೆಗಳಿಗೆ ಹೋಗಿ ಒಬ್ಬರೆ ಇದ್ದದ್ದನ್ನು ನೋಡಿ, ಅವರ ತಲೆಗೆ ಹೊಡೆದು ಕತ್ತಿನಲ್ಲಿದ್ದ ಸರವನ್ನ ದೋಚಲು ಶುರು ಮಾಡಿದ್ದಳು. ಇದೀಗ ಆಕೆಯನ್ನ ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೌದು ಹೀಗೆ ಅಡ್ಡದಾರಿ ಹಿಡಿದ ಲಕ್ಷ್ಮೀ ಅಲಿಯಾಸ್ ಗಂಗಾ ಕಳೆದ ತಿಂಗಳು ಮೇ.26 ರಂದು ಲಗ್ಗೆರೆಯ ಪಾರ್ವತಿನಗರದಲ್ಲಿ ಡ್ರೈ ಪ್ರೂಟ್ಸ್ ಮಾರುವ ನೆಪದಲ್ಲಿ ಹೋಗಿದ್ದಳು. ಮನೆ ಕೇಳಲು ಹೋಗಿ, ಒಂಟಿಯಾಗಿ ಮನೆಯಲ್ಲಿ ಇರುವವರನ್ನ ಟಾರ್ಗೆಟ್ ಮಾಡಿದ್ದ ಆಕೆ, ಅದರಂತೆ ಮೊದಲ ಪ್ರಯತ್ನದಲ್ಲೇ ಆರೋಪಿ ಗಂಗಾ ಸಿಕ್ಕಿಬಿದ್ದಿದ್ದಾಳೆ. ಜೊತೆಗೆ ಆಕೆಯ ಹಿಂದಿನ ಘಟನೆಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ:ಅರೆಸ್ಟ್ ಮಾಡಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಫೈರಿಂಗ್ ಮಾಡಿ ಆರೋಪಿಯ ಬಂಧನ
ಇನ್ನು ಆರೋಪಿ ಗಂಗಾ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡೋಕು ಮುನ್ನ ಖತರ್ನಾಕ್ ಫ್ಲ್ಯಾನ್ ಮಾಡುತ್ತಿದ್ದಳು. ಈಕೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗ ದೋಚಿದ್ದ ಒಡವೆಗಳು ಒಂದೆರಡಲ್ಲ. ವಾರ್ಡ್ಗೆ ಹೋಗಿ ಪೇಷಂಟ್ ಕಡೆಯವರನ್ನು ಹೊರಗೆ ಕಳುಹಿಸಿ, ರೋಗಿಗೆ ಮದ್ದು ಬರುವ ಇಂಜೆಕ್ಷನ್ ಕೊಟ್ಟು, ನಂತರ ಅವರ ಮೈ ಮೇಲಿದ್ದ ಚಿನ್ನಾಭರಣ ದೋಚಿ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದಳು. ಇಂತಹ ಹಲವು ಘಟನೆಗಳ ಬಳಿಕ ಆಸ್ಪತ್ರೆಯವರು ಆಕೆಯನ್ನ ಕೆಲಸದಿಂದ ತೆಗೆದು ಹಾಕಿದ್ದರು.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ