ಯಾರದ್ದೋ ಆಟೋ ಮತ್ಯಾರದ್ದೋ ಹೆಸರಿಗೆ: ಬೆಂಗಳೂರಿನಲ್ಲಿ ವಿಚಿತ್ರ ಕೇಸ್ ಬೆಳಕಿಗೆ

ತನ್ನ ಸ್ವಂತ ಆಟೋವನ್ನ ಬಾಡಿಗೆಗೆಂದು ಚಾಲಕನಿಗೆ ನೀಡಲಾಗಿತ್ತು. ಆದರೆ, ಆಟೋ ಬಾಡಿಗೆಗೆ ಪಡೆದ ಕಿಲಾಡಿ, ಲಗ್ಗೆರೆಯ ಫೈ‌ನಾನ್ಸಿಯರ್ ಬಳಿ ಹಣ ತೆಗೆದುಕೊಂಡು ಅಡಮಾನ ‌ಇಟ್ಟಿದ್ದಾನೆ. ಆಟೋ ಮಾಲೀಕನ ಸಹಿ ನಕಲಿ ಮಾಡಿ ಫೈನಾನ್ಸಿಯರ್ ಹೆಂಡತಿ ಹೆಸರಿಗೆ ಆಟೋ ವರ್ಗಾವಣೆ ಮಾಡಿರುವ ಆರೋಪ ರಾಜಾಜಿನಗರ ಆರ್​ಟಿಓ ಅಧಿಕಾರಿಗಳ ಮೇಲೆ ಬಂದಿದ್ದು, ಈ ಕೇಸ್ ಬಸವೇಶ್ವರ ನಗರ ಪೋಲಿಸ್ ಠಾಣೆ ಮೆಟ್ಟಿಲು ಹತ್ತಿದೆ.

ಯಾರದ್ದೋ ಆಟೋ ಮತ್ಯಾರದ್ದೋ ಹೆಸರಿಗೆ: ಬೆಂಗಳೂರಿನಲ್ಲಿ ವಿಚಿತ್ರ ಕೇಸ್ ಬೆಳಕಿಗೆ
ರಾಜಾಜಿನಗರ ಆರ್​ಟಿಓ ಅಧಿಕಾರಿ ಶ್ರೀನಿವಾಸ್
Follow us
Kiran Surya
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 28, 2024 | 9:06 PM

ಬೆಂಗಳೂರು, ಆ.28: ಮೋಹನ್ ಎಂಬ ಬಸವೇಶ್ವರ ನಗರದ(Basaveshwar Nagar) ನಿವಾಸಿ, ಸಾಗರ್ ಎನ್ನುವ ಚಾಲಕನಿಗೆ ತನ್ನ ಸ್ವಂತ ಆಟೋವನ್ನು ಪ್ರತಿದಿನ 200 ರೂಪಾಯಿಯಂತೆ ಬಾಡಿಗೆಗೆ ನೀಡಿದ್ದಾನೆ. ಆದರೆ, ಆಟೋ ಬಾಡಿಗೆಗೆ ಪಡೆದ ಸಾಗರ್ ಲಗ್ಗೆರೆಯ ಆಟೋ ಫೈನಾನ್ಸಿಯರ್ ಚಂದ್ರೇಗೌಡ ಎಂಬಾತನ ಬಳಿ ಒಂದು ಲಕ್ಷ ಹಣಕ್ಕೆ ಅಡಮಾನ ಇಟ್ಟಿದ್ದಾನೆ. ನಂತರ ಫೈನಾನ್ಸಿಯರ್ ಚಂದ್ರೇಗೌಡ ರಾಜಾಜಿನಗರ ಆರ್​ಟಿಓ ಕಚೇರಿಯಲ್ಲಿ ಅಡಮಾನ ಇಟ್ಟಿದ್ದ ಆಟೋವನ್ನು, ತನ್ನ ಹೆಂಡತಿ ಸುಜತಾ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಈಗ ಆಟೋ ಬಾಡಿಗೆಗೆ ನೀಡಿದ್ದ ಆಟೋ ಮಾಲೀಕ ಮೋಹನ್, ಬಸವೇಶ್ವರ ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾನೆ.

ಈಗಾಗಲೇ ಬಸವೇಶ್ವರ ನಗರ ಪೋಲಿಸ್ ಠಾಣೆಯಲ್ಲಿ ಈ ವಿಚಾರವಾಗಿ ಎಫ್ಐಆರ್ ದಾಖಲಾಗಿದ್ದು, ಪೋಲಿಸರು ಮೋಹನ್ ದಾಖಲೆಗಳೇ ಇಲ್ಲದೆ, ನಿನ್ನ ಹೆಂಡತಿ ಹೆಸರಿಗೆ ಹೇಗೆ ಆರ್​ಸಿ ವರ್ಗಾವಣೆ ಮಾಡಿಸಿಕೊಂಡೆ ಎಂದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಚಂದ್ರೇಗೌಡ ಮೋಹನ್ ಹೆಸರಲ್ಲಿದ್ದ ಆರ್​ಸಿ ಕಾರ್ಡ್​ನ್ನು ಈಗಾಗಲೇ ಸಾಗರ್ ನನಗೆ ನೀಡಿದ್ದ. ಆ ದಾಖಲೆಗಳನ್ನು ಮತ್ತು ನನ್ನ ಹೆಂಡತಿಯ ದಾಖಲೆಗಳನ್ನು ಬ್ರೋಕರ್​​ಗೆ ನೀಡಿದ್ವಿ, ನಂತರ ನನ್ನ ಹೆಂಡತಿ ಸುಜಾತ ಹೆಸರಿಗೆ ಆಟೋ ವರ್ಗಾವಣೆ ಮಾಡಿಸಿದರು ಎಂದು ಹೇಳಿದ್ದಾನೆ.

ಇದನ್ನೂ ಓದಿ: ಆಟೋ ಹತ್ತಿದ ನರ್ಸಿಂಗ್ ವಿದ್ಯಾರ್ಥಿನಿಗೆ ಅಮಲು ಬರುವ ನೀರು ಕುಡಿಸಿ ಅತ್ಯಾಚಾರವೆಸಗಿದ ಚಾಲಕ

ಸದ್ಯ ಪೋಲಿಸರು ಆಟೋವನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ರಾಜಾಜಿನಗರ ಆರ್​ಟಿಓ ಅಧಿಕಾರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜಾಜಿನಗರ ಆರ್​ಟಿಓ ಅಧಿಕಾರಿ ಶ್ರೀನಿವಾಸ್, ‘ನಾನು ಈ ಕೂಡಲೇ ಕಡತಗಳನ್ನು ಪರಿಶೀಲಿಸಿ ದೂರುದಾರರಿಗೆ ನ್ಯಾಯವನ್ನು ಒದಗಿಸುತ್ತೇನೆ ಎಂದಿದ್ದಾರೆ.

ಒಟ್ಟಿನಲ್ಲಿ ಯಾರದ್ದೋ ಆಟೋವನ್ನು ಮತ್ಯಾರದ್ದೋ ಹೆಸರಿಗೆ, ಆಟೋ ಮಾಲೀಕನ ದಾಖಲೆಗಳೇ ಇಲ್ಲದೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಆಟೋ ವರ್ಗಾವಣೆ ಮಾಡಿಸುತ್ತಿದ್ದು, ಈ ಬ್ರೋಕರ್​ಗಳ ಕಳ್ಳಾಟ ಎಷ್ಟಿರ ಮಟ್ಟಿಗೆ ನಡೆಯುತ್ತಿದೆ ಮತ್ತು ಇದನ್ನು ಪರಿಶೀಲನೆ ಮಾಡದೆ ವರ್ಗಾವಣೆ ಮಾಡಿದ ಆರ್​ಟಿಓ ಸಿಬ್ಬಂದಿಗಳ ಮೇಲೂ ಸೂಕ್ತವಾದ ಕಾನೂನು ಕ್ರಮ ಜರುಗಿಸಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ