ಆಟೋ, ಓಲಾ- ಉಬರ್ಗೆ ಸೆಡ್ಡು ಹೊಡೆದ ಬಿಎಂಟಿಸಿ: ಇನ್ಟ್ರಾ ಲೇಔಟ್ ಬಸ್ ಸರ್ವಿಸ್ ಪ್ಲ್ಯಾನ್ ಸಕ್ಸಸ್
ಬಿಎಂಟಿಸಿ -ಡಲ್ಟ್ ಜಂಟಿಯಾಗಿ ಹೆಚ್ಎಸ್ಆರ್ ಲೇಔಟ್ಗೆ ಇನ್ಟ್ರಾ ಲೇಔಟ್ ಬಸ್ ಸರ್ವಿಸ್ ಆರಂಭಿಸಿದರು. ಆ ಮೂಲಕ ರಾಜಧಾನಿ ಬೆಂಗಳೂರಲ್ಲಿ ಮೊದಲ ಬಾರಿಗೆ ಹೆಚ್ಎಸ್ಆರ್ ಲೇಔಟ್ನಲ್ಲಿ ಈ ಸರ್ವಿಸ್ ಅನ್ನು ಆರಂಭ ಮಾಡಲಾಯಿತು. ಹೆಚ್ಎಸ್ಆರ್ ಲೇಔಟ್ ಇನ್ ಟ್ರಾ ಸರ್ವಿಸ್ಗಾಗಿ ಹತ್ತು ಬಿಎಂಟಿಸಿ ಬಸ್ಗಳನ್ನು ನಿಯೋಜನೆ ಮಾಡಲಾಗಿತ್ತು.
ಬೆಂಗಳೂರು, ಆಗಸ್ಟ್ 11: ಅದು ಸಿಲಿಕಾನ್ ಸಿಟಿ ಬೆಂಗಳೂರಲ್ಲೇ (bangaluru) ಮೊಟ್ಟಮೊದಲ ಬಾರಿಗೆ ಬಿಎಂಟಿಸಿ ಮತ್ತು ಡಲ್ಟ್ ಜಂಟಿಯಾಗಿ ಆರಂಭಿಸಿದ ಇನ್ಟ್ರಾ ಲೇಔಟ್ ಬಸ್ ಸರ್ವಿಸ್ (Intra Layout Bus Service). ಈ ಏರಿಯಾದಲ್ಲಿ ಜನರು ಇತ್ತೀಚಿಗೆ ಯಾರು ಆಟೋ, ಕ್ಯಾಬ್ಗಳನ್ನು ಬುಕ್ ಮಾಡ್ತಾನೆ ಇಲ್ವಂತೆ. ಕಾರಣ ಮನೆ ಮುಂಭಾಗಕ್ಕೆ ಐದೋ ಹತ್ತು ನಿಮಿಷಕ್ಕೆ ಬಸ್ಗಳು ಸಂಚಾರ ಮಾಡುತ್ತಿದ್ದು, ಪಿಕ್ ಅಪ್ ಡ್ರಾಪ್ ಮಾಡಲಾಗುತ್ತಿದೆ.
ಇನ್ಟ್ರಾ ಲೇಔಟ್ ಬಸ್ ಸರ್ವಿಸ್
ಬಿಎಂಟಿಸಿ -ಡಲ್ಟ್ ಜಂಟಿಯಾಗಿ ಹೆಚ್ಎಸ್ಆರ್ ಲೇಔಟ್ಗೆ ಇನ್ಟ್ರಾ ಲೇಔಟ್ ಬಸ್ ಸರ್ವಿಸ್ ಆರಂಭಿಸಿದರು. ಆ ಮೂಲಕ ರಾಜಧಾನಿ ಬೆಂಗಳೂರಲ್ಲಿ ಮೊದಲ ಬಾರಿಗೆ ಹೆಚ್ಎಸ್ಆರ್ ಲೇಔಟ್ನಲ್ಲಿ ಈ ಸರ್ವಿಸ್ ಅನ್ನು ಆರಂಭ ಮಾಡಲಾಯಿತು. ಹೆಚ್ಎಸ್ಆರ್ ಲೇಔಟ್ ಇನ್ ಟ್ರಾ ಸರ್ವಿಸ್ಗಾಗಿ ಹತ್ತು ಬಿಎಂಟಿಸಿ ಬಸ್ಗಳನ್ನು ನಿಯೋಜನೆ ಮಾಡಲಾಗಿತ್ತು.
ಇದನ್ನೂ ಓದಿ: ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ; 50 ಮಂದಿಯ 21 ಕೋಟಿ ರೂ. ನಿವೃತ್ತಿ ವೇತನ ಬಾಕಿ
ಹತ್ತು ಬಸ್ಗಳಿಂದ ಪ್ರತಿದಿನ ಐದು ಸಾವಿರ ಪ್ರಯಾಣಿಕರು ಸಂಚಾರ ಮಾಡ್ತಿದ್ರೆ, ಪ್ರತಿ ತಿಂಗಳು ಹದಿನೈದು ಲಕ್ಷ ರೂ. ಆದಾಯ ಗಳಿಸುತ್ತಿದೆ. ಅಗರ ಜಂಕ್ಷನ್ನಿಂದ ಹೆಚ್ಎಸ್ಆರ್ ಲೇಔಟ್ನಿಂದ ಮತ್ತೆ ಅಗರ ಜಂಕ್ಷನ್ವರೆಗೆ ಸಂಚಾರ ಮಾಡುತ್ತಿರುವ ಹತ್ತು ಬಿಎಂಟಿಸಿ ಬಸ್ಗಳು. ಈ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಾರೆ.
ಇನ್ನೂ ಈ ಇನ್ಟ್ರಾ ಬಸ್ ಸರ್ವಿಸ್ ಬೆಳಿಗ್ಗೆ 5 ರಿಂದ ರಾತ್ರಿ 10 ಗಂಟೆಯವರೆಗೆ ಸಂಚಾರ ಮಾಡುತ್ತದೆ. ಅಗರ ಜಂಕ್ಷನ್ ನಿಂದ ಹೆಚ್ಎಸ್ಆರ್ ಲೇಔಟ್ವರೆಗೆ 28 ಸ್ಟಾಪ್ಗಳನ್ನು ನೀಡಲಾಗುತ್ತದೆ. ಇದರಿಂದ ಹೆಚ್ಎಸ್ಆರ್ ಲೇಔಟ್ನಲ್ಲಿ ಸದ್ಯ ಆಟೋ ಕ್ಯಾಬ್ಗಳ ಸಂಖ್ಯೆ ತುಂಬಾ ಕಡಿಮೆ ಆಗಿದೆಯಂತೆ.
ನಮ್ಮ ಏರಿಯಾಗೂ ಇನ್ ಟ್ರಾ ಸರ್ವಿಸ್ ಆರಂಭಿಸಿ ಎಂದು ರಾಜಧಾನಿಯ ಬೇರೆಬೇರೆ ಏರಿಯಾ ನಿವಾಸಿಗಳ ಅಸೋಸಿಯೇಷನ್ಗಳು ಬಿಎಂಟಿಸಿಗೆ ಮನವಿ ಮಾಡುತ್ತಿದ್ದಾರಂತೆ. ನಮಗೆ ಇದರಿಂದ ತುಂಬಾ ಸಹಾಯ ಆಗಿದೆ ಎಂದು ಸ್ಥಳೀಯ ನಿವಾಸಿ ಶ್ರೀ ರಾಮ್ ಹೇಳುತ್ತಾರೆ.
ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಗೇಟ್ ಕಟ್ಗೆ ಸ್ಫೋಟಕ ಕಾರಣ ಕೊಟ್ಟ ಎಚ್ಡಿಕೆ, ಜತೆಗೊಂದು ಸಲಹೆ
ಕ್ಯಾಬ್, ಆಟೋ ಬುಕ್ ಮಾಡ್ಕೊಂಡು ಮಳೆಯಲ್ಲಿ ನಾವು ಬರೋದಿಲ್ಲ ಅಂತ ಕ್ಯಾನ್ಸಲ್ ಮಾಡೋದು, ಗಂಟೆಗಟ್ಟಲೆ ಅವರಿಗೆ ವೈಟ್ ಮಾಡ್ಕೊಂಡು ನೂರು ಇನ್ನೂರು ರೂ. ನೀಡುವ ಬದಲು ನಮ್ಮ ಬಿಎಂಟಿಸಿಯೇ ನಮಗೆ ಬೆಸ್ಟ್ ಅಂತ ಪ್ರಯಾಣಿಕರು ಪ್ರತಿದಿನ ಇನ್ಟ್ರಾ ಲೇಔಟ್ ಬಸ್ನಲ್ಲಿ ಹ್ಯಾಪಿ ಪ್ರಯಾಣ ಮಾಡ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:27 pm, Sun, 11 August 24