ಚಾಮುಂಡಿ ಆಸ್ತಿಗೆ ಕೈಹಾಕಿ ಮೂರೇ ತಿಂಗಳಲ್ಲಿ ಸಿಎಂಗೆ ಮುಡಾ ಉರುಳು! ಸರ್ಕಾರದ ನಡೆಗೆ ಹೈಕೋರ್ಟ್ ತಾತ್ಕಾಲಿಕ ಬ್ರೇಕ್

ಮೈಸೂರು ಚಾಮುಂಡಿ ಬೆಟ್ಟದ ಮೇಲೆ ಕಾಂಗ್ರೆಸ್ ಸರ್ಕಾರದ ಕಣ್ಣು ಬಿದ್ದಿದೆ ಎಂದು ಅನುಮಾನಗಳು ಹುಟ್ಟಿಕೊಂಡಿವೆ. 2024ರ ಮಾ.7ರಂದು ಹೊಸ ಕಾಯ್ದೆ ಜಾರಿ ಮೂಲಕ ರಾಜಮನೆತನದ ಸಂಪೂರ್ಣ ಅಧಿಕಾರವನ್ನೇ ಮೊಟಕುಗೊಳಿಸಿ ನಿಯಮ ತರಲಾಗಿದೆ. ಹೀಗಾಗಿ ಇದನ್ನು ಪ್ರಶ್ನಿಸಿ ಪ್ರಮೋದಾದೇವಿ ಒಡೆಯರ್​​ ರಿಟ್ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿ ಹೈಕೋರ್ಟ್ ಏಕಸದಸ್ಯ ಪೀಠದಿಂದ ತಡೆ ನೀಡಲಾಗಿದೆ.

ಚಾಮುಂಡಿ ಆಸ್ತಿಗೆ ಕೈಹಾಕಿ ಮೂರೇ ತಿಂಗಳಲ್ಲಿ ಸಿಎಂಗೆ ಮುಡಾ ಉರುಳು! ಸರ್ಕಾರದ ನಡೆಗೆ ಹೈಕೋರ್ಟ್ ತಾತ್ಕಾಲಿಕ ಬ್ರೇಕ್
ಚಾಮುಂಡಿ ಆಸ್ತಿಗೆ ಕೈಹಾಕಿ ಮೂರೇ ತಿಂಗಳಲ್ಲಿ ಸಿಎಂಗೆ ಮುಡಾ ಉರುಳು! ಸರ್ಕಾರದ ನಡೆಗೆ ಹೈಕೋರ್ಟ್ ತಾತ್ಕಾಲಿಕ ಬ್ರೇಕ್
Follow us
Shivaprasad
| Updated By: ಗಂಗಾಧರ​ ಬ. ಸಾಬೋಜಿ

Updated on: Aug 11, 2024 | 4:04 PM

ಬೆಂಗಳೂರು, ಆಗಸ್ಟ್​ 11: ಸಿಎಂ ಸಿದ್ದರಾಮಯ್ಯ (Siddaramaiah) ಸರ್ಕಾರ ಇತ್ತೀಚೆಗೆ ಅಂದರೆ ಮಾರ್ಚ್​ 7ರಂದು ಚಾಮುಂಡೇಶ್ವರಿ (Chamundi) ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮದ ಹೊಸ ಕಾಯ್ದೆ ಜಾರಿಗೆ ತರಲಾಗಿತ್ತು. ಆ ಮೂಲಕ ಚಾಮುಂಡೇಶ್ವರಿ ದೇವಾಲಯದ ಮೇಲೆ ರಾಜಮನೆತನದ ಸಂಪೂರ್ಣ ಅಧಿಕಾರವನ್ನೇ ಮೊಟುಕುಗೊಳಿಸಲು ಮುಂದಾಗಿತ್ತು. ಹೀಗಾಗಿ ಈ ಕಾಯ್ದೆಯನ್ನು ಪ್ರಶ್ನಿಸಿ ಪ್ರಮೋದಾದೇವಿ ಒಡೆಯರ್​ ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ಮಾಡಲಾಗಿದ್ದು, ಹೈಕೋರ್ಟ್ ಏಕಸದಸ್ಯ ಪೀಠದಿಂದ ರಾಜ್ಯ ಸರ್ಕಾರದ ನಡೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಚಾಮುಂಡೇಶ್ವರಿ ಆಸ್ತಿಗೆ ಕೈಹಾಕಿ ಮೂರೇ ತಿಂಗಳಲ್ಲಿ ಸಿಎಂಗೆ ಮುಡಾ ಹಗರಣ ಉರುಳಾಗಿತ್ತು.

ಕಾಯ್ದೆಯ ಸೆ.2(ಎ), 3,12(1), 14(3), 14(4), 16(1), 17(1), 20(1)(ಒ), 20(2) ಸಂಪೂರ್ಣ ಕಾನೂನು ಬಾಹಿರ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ರಾಜಮನೆತದ ಹೆಸರಲ್ಲಿ ಸಂಕಲ್ಪದಲ್ಲಿ ಮಾಡುತ್ತಿದ್ದ ಪೂಜೆಗೂ ಬ್ರೇಕ್ ಹಾಕಲಾಗಿದೆ.

ಪ್ರಮೋದ ದೇವಿ ಒಡೆಯರ್ ಪ್ರಶ್ನಿಸಿರುವ ಸರ್ಕಾರದ ನಿರ್ಧಾರಗಳು ಹೀಗಿವೆ.

1). ಸೆ. 2(ಎ) ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024 ಬೆಟ್ಟದ ಸಂಪೂರ್ಣ ಸೌಕರ್ಯಗಳ ಬಗ್ಗೆ ಸರ್ಕಾರದಿಂದ ತಿರ್ಮಾನ. ರಸ್ತೆ, ಲೈಟ್ಸ್, ಕ್ಲೀನ್, ಅಂಗಡಿ, ಮಾರ್ಕೆಟ್, ಚರಂಡಿ, ಪೊಲೀಸ್ ಹಾಲಿನ ಅಂಗಡಿ, ಮನೋರಂಜನೆ ಕಾರ್ಯಕ್ರಮಗಳು ಸೇರಿ ಎಲ್ಲಾ ರಾಜ್ಯ ಸರ್ಕಾರದ ಅಧಿಸೂಚನೆ ಮೇಲೆ ನಡೆಸಲು ಅಧಿಕಾರ ನೀಡಲಾಗಿದೆ.

ರಾಜಮನೆತನಕ್ಕೆ ಅಲ್ಲಿ ಯಾವುದೇ ಮಧ್ಯವಸ್ತಿಕೆ ತೆರವು

2). ಸೆ.3 ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024 ಪ್ರಾಧಿಕಾರದ ರಚನೆಯ ಅಧಿಕಾರ ಸರ್ಕಾರಕ್ಕೆ ಸೇರಿದ್ದು, ಅದರ ಅಧ್ಯಕ್ಷ ಸ್ಥಾನ ಸಿಎಂ ಅಂತಾ ಸರ್ಕಾರದ ಕಾಯ್ದೆಯಲ್ಲಿದೆ. ಪ್ರಾಧಿಕಾರದ ಪದಾಧಿಕಾರಿಗಳಲ್ಲಿ ರಾಜಮನೆತನವೇ ಇಲ್ಲ. ಬದಲಾಗಿ ಸ್ಥಳೀಯ, ಮಿನಿಸ್ಟರ್, ಶಾಸಕ, ಎಂಪಿ ಮತ್ತು ಅಧಿಕಾರಿಗಳು.

ರಾಜಮನೆತನದ ಸಂಪೂರ್ಣ ಅಧಿಕಾರವನ್ನೇ ಮೊಟುಕು 

3). ಸೆ. 12(1) ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024 ಪ್ರಾಧಿಕಾರದ ನೌಕರರ ನೇಮಕ ಮಾಡುವ ವಿಚಾರದಲ್ಲಿ ಅರ್ಚಕರು ಸೇರಿ ನೌಕರರ ನೇಮಿಸುವ ಅಧಿಕಾರ ಸರ್ಕಾರಕ್ಕೆ ಇದೆ.  ಪ್ರಾಧಿಕಾರದ ಸಭೆಯ ತಿರ್ಮಾನಗಳ ಬಗ್ಗೆ ಸರ್ಕಾರಕ್ಕೆ ಅಧಿಕಾರವಿದ್ದು, ಯಾವುದೇ ತಿರ್ಮಾನ ಇದ್ದರೂ ಅದು ಸರ್ಕಾರ ಮಾತ್ರ ನಿರ್ಣಯ. ಪ್ರಾಧಿಕಾರದ ತಿರ್ಮಾನಗಳ ಜಾರಿ ಮಾಡುವುದು ಕಾರ್ಯದರ್ಶಿಗೆ ಅಧಿಕಾರ ನೀಡಲಾಗಿದ್ದು, ರಾಜ್ಯ ಸರ್ಕಾರದ ಆದೇಶಗಳನ್ನು ಜಾರಿ ಮಾಡುವ ಅಧಿಕಾರ. ಹಾಗಾಗಿ ರಾಜಮನೆತನದ ಸಂಪೂರ್ಣ ಅಧಿಕಾರವನ್ನೇ ಮೊಟುಕು ಆಗಿದೆ.

ರಾಜಮನೆತನಕ್ಕೆ ಪ್ರಾಧಿಕಾರದ ಮಾಹಿತಿಯ ಅವಕಾಶವೇ ವಂಚನೆ

4). ಸಿಎಂಗೆ ತುರ್ತು ಯಾವುದೇ ನಿರ್ಧಾರ ತೆಗದುಕೊಳ್ಳುವ ಅಧಿಕಾರ. ಅಧ್ಯಕ್ಷರಾದ ಸಿಎಂ ತಾವು ಭಾವಿಸಿದ ತಿರ್ಮಾನ ಮಾಡುವ ಅಧಿಕಾರ. ರಾಜಮನೆತನಕ್ಕೂ ದೇವಾಲಯದ ಪ್ರಾಧಿಕಾರಕ್ಕೆ ಅಧಿಕಾರವೇ ಕಟ್ ಮಾಡಲಾಗಿದೆ.

ಇದನ್ನೂ ಓದಿ: ಆಷಾಢ ಮಾಸದ ಕೊನೆ ಶುಕ್ರವಾರ, ಬೆಟ್ಟಕ್ಕೆ ಹರಿದು ಬಂದ ಜನಸಾಗರ: ಇಲ್ಲಿದೆ ನೋಡಿ ನಾಡದೇವತೆ ಅಲಂಕಾರ

5). ಚಾಮುಂಡಿ ಪ್ರಾಧಿಕಾರದ ಸ್ವತ್ತನ್ನು ಮಾರಾಟದ ಅಧಿಕಾರ ನಿಗಮದ್ದು. ಯಾವುದೇ ಆಸ್ತಿಯನ್ನು ಮಾರಾಟ ಮಾಡುವ ಅಧಿಕಾರ, ಯಾವುದೇ ಆಸ್ತಿಯನ್ನು ಬಾಡಿಗೆಗೆ ನೀಡುವ ಅಧಿಕಾರ, ಬೇಕಾದ್ರೆ ಎಕ್ಸಚೆಂಜ್ ಮಾಡಿಕೊಳ್ಳುವ ಅಧಿಕಾರ ನಿಗಮಕ್ಕೆ ಇದೆ.

ರಾಜಮನೆತನದ ಚಾಮುಂಡಿ ಬೆಟ್ಟವನ್ನು ಕಸಿದುಕೊಂಡಿರುವ ಆರೋಪ

6). ಬೆಟ್ಟದ ಆಸ್ತಿಯ ಮಾರಾಟ ಮಾಡುವ ಸಂಪೂರ್ಣ ಅಧಿಕಾರ ಸರ್ಕಾರಕ್ಕೆ. ಸರ್ಕಾರ ಪ್ರಾಧಿಕಾರದ ನಿರ್ಧಾರದ ಮೇಲೆ ಅನುಮೋದನೆ ಮತ್ತು ತಿದ್ದುಪಡಿ ಅಧಿಕಾರ. ರಾಜಮನೆತನದ ಚಾಮುಂಡಿ ಬೆಟ್ಟದ ಬಗ್ಗೆ ಅವರಿಗೆ ಅಧಿಕಾರವೇ ಇಲ್ಲ. ಚಾಮುಂಡಿ ಬೆಟ್ಟದ ನಿಧಿಯ ಅಧಿಕಾರ ಸಂಪೂರ್ಣ ಸರ್ಕಾರದ್ದು. ಬರುವ ದೇಣಿಗೆ, ಕಾಣಿಕೆ, ಸೇವಾಶುಲ್ಕ, ಹುಂಡಿ ಎಲ್ಲಾ ಸರ್ಕಾರಕ್ಕೆ. ನಿಧಿಯ ಬಳಕೆಯ ಅಧಿಕಾರವೂ ಸಹ ಪ್ರಾಧಿಕಾರ & ಸರ್ಕಾರಕ್ಕೆ.

ತಾವೇ ನಿರ್ಮಿಸಿದ ದೇವಾಲಯದಲ್ಲಿ ರಾಜಮನೆತನಕ್ಕೆ ಏನು ಇಲ್ಲ

7). ಚಾಮುಂಡಿ ಬೆಟ್ಟದ ಸಂಪೂರ್ಣ ಆಸ್ತಿಯ ಅಧಿಕಾರ ಸರ್ಕಾಕ್ಕೆ ಸೇರಿದ್ದು ಸ್ಥಿರ, ಚರ ಎಲ್ಲಾ ಆಸ್ತಿಗಳ ಮೇಲೆ ಸರ್ಕಾರದಿಂದ ಅಧಿಕಾರ. ಎಲ್ಲವನ್ನು ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಲು ಸರ್ಕಾರದ ನಿರ್ಧಾರ. ರಾಜಮನೆತನದ ಪುರಾತನ ಆಸ್ತಿ ಸದ್ಯ ಎಲ್ಲಾ ಸರ್ಕಾರಕ್ಕೆ ಸೇರ್ಪಡೆ. ಪ್ರಾಧಿಕಾರ ವಿಸರ್ಜನೆಯ ಅಧಿಕಾರ ವಿಧಾನಸಭೆಗೆ ಸೇರುತ್ತದೆ. ವಿಧಾನಸಭೆಯಲ್ಲಿ ಮಂಡಿಸಿ ವಿಘಟನೆ ಮಾಡಲು ನಿರ್ಧರಿಸಲಾಗಿದೆ. ದೇವಾಲಯದ ಆಚರಣೆಗಳು ಎಲ್ಲವೂ ಬದಲಾವಣೆ ಬಗ್ಗೆ ಕೋರ್ಟ್ ಆದೇಶ, ಸಾಂಪ್ರದಾಯ, ನಿಯಮ ಏನೇ ಪಾಲನೆ ಆಗ್ತಿದ್ದರೂ ಮುಂದೆ ಹಿಂದೂ ಧಾರ್ಮಿಕ ಸಂಸ್ಥೆಗಳ ನಿಯಮದಂತೆ ಮಾಡುವ ತಿರ್ಮಾನ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್