ಜಯದೇವ ಆಸ್ಪತ್ರೆ 24 ಗಂಟೆ ಕಾರ್ಯನಿರ್ವಹಣೆ, ಇನ್ಮುಂದೆ ಗೋಲ್ಡನ್ ಟೈಮ್​ನಲ್ಲೂ ಚಿಕಿತ್ಸೆ ಸಿಗುತ್ತೆ

ಜನರ ಜೀವ ಹಿಂಡುವ ಹೆಮ್ಮಾರಿ ಕೊವಿಡ್ ಬಂದಾಗಿನಿಂದ ಜನರಿಗೆ ಒಂದಲ್ಲ ಒಂದು ಖಾಯಿಲೆಗಳು ಶುರುವಾಗಿದ್ದು, ಒಂದಲ್ಲ ಒಂದು ಚಿತ್ರವಿಚಿತ್ರ ಆರೋಗ್ಯ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ಕೆಲವರಿಗೆ ಹೃದಯಘಾತ ಸಂಭವಿಸುತ್ತಿದ್ದರೆ, ಹಲವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ತಿದೆ. ಆದ್ರೆ ಇತ್ತಿಚ್ಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೃದಯಘಾತ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ

ಜಯದೇವ ಆಸ್ಪತ್ರೆ 24 ಗಂಟೆ ಕಾರ್ಯನಿರ್ವಹಣೆ, ಇನ್ಮುಂದೆ ಗೋಲ್ಡನ್ ಟೈಮ್​ನಲ್ಲೂ ಚಿಕಿತ್ಸೆ ಸಿಗುತ್ತೆ
ಜಯದೇವ ಹೃದ್ರೋಗ ಆಸ್ಪತ್ರೆ
Follow us
Vinay Kashappanavar
| Updated By: ರಮೇಶ್ ಬಿ. ಜವಳಗೇರಾ

Updated on: Aug 28, 2024 | 8:28 PM

ಬೆಂಗಳೂರು, (ಆಗಸ್ಟ್ 28): ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಕೆಲಸ ಮಾಡಲು ಸೂಚಿಸಲಾಗಿದ್ದು, ಇದಕ್ಕೆ ಅಗತ್ಯವಿರುವ ಸಿಬ್ಬಂದಿ ಮತ್ತು ಹಣವನ್ನು ರಾಜ್ಯ ಸರಕಾರದಿಂದ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹಲವು ದೂರುಗಳು ಬರುತ್ತಿರುವುದ ಬಗ್ಗೆ ಟಿವಿ9 ಸುದ್ದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಜಯದೇವ ಆಸ್ಪತ್ರೆ ಸೇರಿದ್ದಂತೆ ಜಯದೇವ ಹೃದ್ರೋಗ ಆಸ್ಪತ್ರೆಯ ವಿವಿಧ ಘಟಕಗಳನ್ನ ದಿನದ 24 ಗಂಟೆ ರೋಗಿಗಳ ಸೇವೆ ನೀಡುವಂತೆ ಸಿಎಂ  ಹೇಳದ್ದಾರೆ

ಕೊವಿಡ್ ಬಳಿಕ ಹೃದಯಘಾತ ಪ್ರಕರಣ ಹೆಚ್ಚಳದಿಂದ ಸರ್ಕಾರ ಹಾಗೂ ಜಯದೇವ ಆಸ್ಪತ್ರೆ ಕೆ ಸಿಜನರಲ್ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಜಯದೇವ ಆಸ್ಪತ್ರೆಯ ಘಟಕಗಳನ್ನ ಸ್ಥಾಪನೆ ಮಾಡಿದೆ. ಸದ್ಯ ಮಲ್ಲೇಶ್ವರಂ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ನಿರ್ಮಾಣವಾಗಿರುವ ಜಯದೇವ ಹೃದ್ರೋಗ ಆಸ್ಪತ್ರೆ ಘಟಕಕ್ಕೆ ಭರ್ಜರಿ ಡಿಮ್ಯಾಂಡ್ ಕೇಳಿ ಬರುತ್ತಿದೆ. ಪ್ರತಿ ದಿನ 110 ರಿಂದ 120 ಜನರು ಓಪಿಡಿಗೆ ಬರುತ್ತಿದ್ದಾರೆ. . ಆದ್ರೆ ಸಂಜೆ ಜಯದೇವ ಆಸ್ಪತ್ರೆ ಸೇರಿದ್ದಂತೆ ಅನೇಕ ಜಯದೇವ ಆಸ್ಪತ್ರೆಯ ಘಟಕಗಳಲ್ಲಿ ಸಂಜೆ 4 ಗಂಟೆಯ ಬಳಿಕ ತುರ್ತು ಎಮೆರ್ಜನ್ಸಿ ಚಿಕಿತ್ಸೆಗೆ ಬಂದ್ರೆ ವೈದ್ಯರು ಇಲ್ಲದಾಗಿದೆ. ಇದರಿಂದ ಸಂಜೆ ಬಳಿಕ ಆಸ್ಪತ್ರೆಗೆ ಬರುವ ರೋಗಿಗಳ ಪರದಾಟ ಕಂಡು ಬರ್ತಿದೆ . ಹೀಗಾಗಿ ಸಮಯ ವಿಸ್ತರಣೆಗೆ ಒತ್ತಾಯ ಕೇಳಿ ಬಂದಿದ್ದು, ಈ ಬಗ್ಗೆ ಟಿವಿ9, ಕೂಡಾ ಸುದ್ದಿ ಮಾಡಿತ್ತು. ಈ ಬೆನ್ನಲ್ಲೇ ನಿನ್ನೆ ಸಿಎಂ ಸ್ಪಂದಿಸಿದ್ದು ಜಯದೇವ ಆಸ್ಪತ್ರೆ ಸೇರಿದ್ದಂತೆ ಜಯದೇವ ಹೃದ್ರೋಗ ಆಸ್ಪತ್ರೆಯ ವಿವಿಧ ಘಟಕಗಳನ್ನ ದಿನದ 24 ಗಂಟೆ ರೋಗಿಗಳ ಸೇವೆ ನೀಡುವಂತೆ ಹೇಳದ್ದಾರೆ.

ಇದನ್ನು ಓದಿ: ಕೆ.ಸಿ ಜನರೆಲ್ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ; ಹಳೇ ಆಸ್ಪತ್ರೆಯಲ್ಲಿ ಹೊಸ ಫೆಸಿಲಿಟಿ ಏನೇನು?

ತುರ್ತು ಚಿಕಿತ್ಸೆಗೆ ಸಾವಿರಾರು ಜನರು ಬರ್ತಿದ್ದಾರೆ. ಆದ್ರೆ ಸಂಜೆ 4 ಗಂಟೆಯ ಬಳಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಇರೋದರಿಂದ ಪರದಾಡವಂತಾಗಿದೆ. ಗೋಲ್ಡನ್ ಟೈಮ್ನಲ್ಲಿ ಜೀವ ಉಳಸಿಕೋಳ್ಳಲು ಬರುವ ರೋಗಿಗಳಿಗೆ ಚಿಕಿತ್ಸೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಆಸ್ಪತ್ರೆ ಪ್ರತಿ ನಿತ್ಯ ಮುಂಜಾನೆ 9 ರಿಂದ ಸಂಜೆ 4 ಗಂಟೆಯವರೆಗೂ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು 4 ಗಂಟೆಯ ಬಳಿಕ ಓಪಿಡಿ ಇರೋದಿಲ್ಲ. ವೈದ್ಯರು ಇರೋದಿಲ್ಲ. ಹೀಗಾಗಿ ರೋಗಿಗಳು ಸಮಯ ಹಚ್ಚಿಸುವಂತೆ ಸಂಜೆ ಬಳಿಕವೂ ಚಿಕಿತ್ಸೆ ನೀಡುವಂತೆ ಒತ್ತಾಯ ಮಾಡ್ತೀದ್ದಾರೆ. ಇನ್ನು ಸಂಜೆ ಬಳಿಕ ಹಾಗೂ ರಾತ್ರಿಯ ವೇಳೆ ಹೃದಯಘಾತ ಅಥವಾ ತುರ್ತು ಸಮಸ್ಯೆ ಕಾಣಿಸಿಕೊಂಡ್ರೆ ಜಯದೇವ ಆಸ್ಪತ್ತೆಗೆ ಹೋಗಬೇಕಾದ ಸ್ಥಿತಿ ಎದುರಾಗಿದ್ದು, ಕೆಲವು ಸಮಯದಲ್ಲಿ ಗೋಲ್ಡ್ ನ ಅವರ ಚಿಕಿತ್ಸೆ ಸಿಗ್ದೆ ಸಾವಿಗೆ ಕಾರಣವಾಗಬೇಕಾದ ಸ್ಥಿತಿ ಎದುರಾಗಿದೆ .ಹೀಗಾಗಿ ಜಯದೇವ ಸೇರಿದ್ದಂತೆ ಇತರೆ ಘಟಕಗಳ ಆಸ್ಪತ್ರೆಯನ್ನ 24 ಗಂಟೆ ರಾತ್ರಿ ವೇಳಯ ಅವಧಿಯಲ್ಲಿ ಚಿಕಿತ್ಸೆ ನೀಡುವಂತೆ ಸಿಎಂ ಸೂಚಿಸಿದ್ದಾರೆ

24 ಗಂಟೆ ಸೇವಗೆ ವೈದ್ಯರ ಕೊರತೆ..!

ಇನ್ನು ಸಿಎಂ ತಾಕೀತು ಮಾಡಿ ಜಯದೇವ ಸೇರಿದ್ದಂತೆ ಇತರೆ ಘಟಕಗಳು ದಿನದ 24 ಗಂಟೆ ಸೇವೆ ನೀಡುವಂತೆ ಹೇಳಿದ್ದಾರೆ. ಆದ್ರೆ ಸದ್ಯ ವೈದ್ಯಕೀಯ ಸಿಬ್ಬಂದಿಯ ಕೊರತೆಯೂ ಇದೆ. ಹೀಗಾಗಿ ವೈದ್ಯರ ನೇಮಕ ಹಾಗೂ ವೆವಸ್ಥೆ ಮಾಡಿಕೊಂಡು ಮುಂದಿನ ತಿಂಗಳಿನಿಂದ ಈ ಆಸ್ಪತ್ರೆಗಳನ್ನ ದಿನದ ಎಲ್ಲ ಸಮಯ ಚಿಕಿತ್ಸಗೆ ಲಭ್ಯ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ

ಓಟ್ಟಿನಲ್ಲಿ ಸರ್ಕಾರದ ಈ ನಿರ್ಧಾರ ರೋಗಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ಈ ಯೋಜನೆಯಿಂದ ಸಾರ್ವಜನಿಕರಿಗೆ ಸಾಕಷ್ಟು ಉಪಯೋಗವಾಗೋದರಲ್ಲಿ ಡೌಟಿಲ್ಲ. ಆದ್ರೆ ಇದು ಕೇವಲ ಆದೇಶವಾಗುತ್ತಾ ಅಥವಾ ಜಾರಿಗೆ ಬರುತ್ತಾ ಎಂದು ಕಾದು ನೋಡಬೇಕಿದೆ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್