ರಾಜಾಜಿನಗರದ ಪರೀಕ್ಷಾ ಕೊಠಡಿಗೆ ಹಿಜಾಬ್ ಧರಿಸಿ ಬಂದ ಮೇಲ್ವಿಚಾರಕಿ ಅಮಾನತು!
ಹಿಜಾಬ್ ತೆಗಿಯಬೇಕು ಎನ್ನುವ ಆದೇಶ ವಿದ್ಯಾರ್ಥಿಗಳಿಗೆ ಮಾತ್ರ. ಶಿಕ್ಷಕರಿಗೆ ಅನ್ವಯಿಸಲ್ಲ ಅಂತ ಅಧೀಕ್ಷಕರ ಜೊತೆ ವಾದ ಶಿಕ್ಷಕಿ ನೂರ್ ಫಾತಿಮಾ ವಾಗ್ವಾದ ನಡೆಸಿದರು.
ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ (SSLC Exam) ಆರಂಭವಾಗಿದೆ. ಸುಮಾರು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ಪರೀಕ್ಷೆ ಬರೆಯಲಿದ್ದಾರೆ. ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಮತಿ ನೀಡಲ್ಲ ಅಂತ ಸರ್ಕಾರ ಈಗಾಗಲೇ ತಿಳಿಸಿದೆ. ಹೀಗಿದ್ದೂ, ರಾಜಾಜಿನಗರದ ಕೆಟಿಎಸ್ವಿ ಹೈಸ್ಕೂಲ್ ಶಿಕ್ಷಕಿ ಪರೀಕ್ಷಾ ಕೊಠಡಿಗೆ ಹಿಜಾಬ್ ಧರಿಸಿ ಬಂದಿದ್ದರು. ಹೀಗೆ ಹಿಜಾಬ್ ಧರಿಸಿ ಬಂದ ಪರೀಕ್ಷಾ ಮೇಲ್ವಿಚಾರಕಿ ಫಾತಿಮಾ ಅವರನ್ನು ಅಮಾನತು ಮಾಡಲಾಗಿದೆ. ಪರೀಕ್ಷಾ ಕೆಲಸದಿಂದ ಮುಖ್ಯ ಅಧೀಕ್ಷಕರು ವಜಾಗೊಳಿಸಿದ್ದಾರೆ.
ಶಿಕ್ಷಕಿ ನೂರ್ ಫಾತಿಮಾ ಅವರನ್ನು ಪರೀಕ್ಷಾ ಮೇಲ್ವಿಚಾರಕರಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ಹಿಜಾಬ್ ಧರಿಸಿ ಬಂದ ಹಿನ್ನೆಲೆ ಕೂಡಲೇ ಪರೀಕ್ಷಾ ಕೆಲಸದಿಂದ ವಜಾಗೊಳಿಸಿದ ರಾಜಾಜಿನಗರದ ಸಿದ್ದಗಂಗಾ ಶಾಲೆಯ ಪರೀಕ್ಷಾ ಕೇಂದ್ರದ ಅಧೀಕ್ಷಕಿ ಮಾಲಿನಿ, ಇವರ ಜಾಗಕ್ಕೆ ಮತ್ತೋರ್ವ ಪರೀಕ್ಷಾ ಮೇಲ್ವಿಚಾರಕರನ್ನು ನಿಯೋಜನೆ ಮಾಡಿದ್ದಾರೆ. ಹಿಜಾಬ್ ತೆಗಿಯಬೇಕು ಎನ್ನುವ ಆದೇಶ ವಿದ್ಯಾರ್ಥಿಗಳಿಗೆ ಮಾತ್ರ. ಶಿಕ್ಷಕರಿಗೆ ಅನ್ವಯಿಸಲ್ಲ ಅಂತ ಅಧೀಕ್ಷಕರ ಜೊತೆ ವಾದ ಶಿಕ್ಷಕಿ ನೂರ್ ಫಾತಿಮಾ ವಾಗ್ವಾದ ನಡೆಸಿದರು.
ಹಿಜಾಬ್ ತೆಗೆಯುವಂತೆ ಸೂಚಿಸಿದರು ಶಿಕ್ಷಕಿ ಫಾತಿಮಾ ನಿರಾಕಸಿದ್ದಾರೆ. ಹೀಗಾಗಿ ಪರೀಕ್ಷಾ ಕೆಲಸದಿಂದ ಅಮಾನತುಗೊಳಿಸಲಾಗಿದೆ.
ಹಿಜಾಬ್ ಧರಿಸಿ ಬಂದರೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಅಂತ ಸರ್ಕಾರ ಈಗಾಗಲೇ ತಿಳಿಸಿದೆ. ಆದರೆ ಶಿವಮೊಗ್ಗದ ಕಸ್ತೂರಬಾ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿ ಹಿಬಾಜ್‌ಗೆ ಅನುಮತಿ ನೀಡದ ಹಿನ್ನೆಲೆ ಮನೆಗೆ ವಾಪಸ್ ಆಗಿದ್ದಳು. ನಂತರ ಪೋಷಕರು ಮನೆಗೆ ವಾಪಸಾಗಿದ್ದ ವಿದ್ಯಾರ್ಥಿನಿಯನ್ನ ಕರೆತಂದು ಬುದ್ಧಿವಾದ ಹೇಳಿದ್ದಾರೆ.
ಇದನ್ನೂ ಓದಿ
ವಾಗೀಶ್ ಸ್ವಾಮಿಗೆ ಟಿಕೆಟ್ ಇಲ್ಲ ಎಂದ ಸಿದ್ದೇಶ್ವರ: ರೇಣುಕಾಚಾರ್ಯ ಆಪ್ತರಿಗೆ ಹಿನ್ನಡೆ
ಇಂದಿನಿಂದ ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ; ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿ
Published On - 11:42 am, Mon, 28 March 22