ಎಣ್ಣೆ ಮತ್ತಿನಲ್ಲಿ ಮನೆಗೆ ಎಂಟ್ರಿ ಕೊಟ್ಟ ವ್ಯಕ್ತಿಯಿಂದ ಯುವಕನ ಮೇಲೆ ಗುಂಡಿನ ದಾಳಿ, ನಿವೃತ್ತ ಮಿಲಿಟರಿ ಅಧಿಕಾರಿ ಅರೆಸ್ಟ್

| Updated By: ಆಯೇಷಾ ಬಾನು

Updated on: Feb 07, 2024 | 7:11 AM

ನಿನ್ನೆ ಮಧ್ಯರಾತ್ರಿ 12ಗಂಟೆ ಸುಮಾರಿಗೆ ಗಂಗಮ್ಮನ ಗುಡಿ ಠಾಣಾ ವ್ಯಾಪ್ತಿಯಲ್ಲಿ ಗುಂಡಿನ ದಾಳಿ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಪರಶುರಾಮ್ ಏಕಾ ಏಕಿ‌ ಪರಿಚಿತರ ಮನೆಗೆ ಎಂಟ್ರಿ ಕೊಟ್ಟಿದ್ದು ಮನೆಯೊಳಗೆ ಬಿಟ್ಟಿಲ್ಲ ಎಂದ ಯುವಕನ ಮೇಲೆ ಗುಂಡು ಹಾರಿಸಿದ್ದಾರೆ. ಸದ್ಯ ಅದೃಷ್ಟವಶಾತ್ ಸೂರಜ್ ತಪ್ಪಿಸಿಕೊಂಡಿದ್ದಾನೆ. ಸ್ಥಳೀಯರ ದೂರಿನ ಮೇರೆಗೆ ಪರಶುರಾಮ್ ‌ನನ್ನ ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳಿಸಿದ್ದಾರೆ. ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಣ್ಣೆ ಮತ್ತಿನಲ್ಲಿ ಮನೆಗೆ ಎಂಟ್ರಿ ಕೊಟ್ಟ ವ್ಯಕ್ತಿಯಿಂದ ಯುವಕನ ಮೇಲೆ ಗುಂಡಿನ ದಾಳಿ, ನಿವೃತ್ತ ಮಿಲಿಟರಿ ಅಧಿಕಾರಿ ಅರೆಸ್ಟ್
ಪರಶುರಾಮ್
Follow us on

ಬೆಂಗಳೂರು, ಫೆ.07: ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರಶುರಾಮ್ ಎಂಬ ವ್ಯಕ್ತಿ ಎಣ್ಣೆ ಮತ್ತಿನಲ್ಲಿ ಪರಿಚಿತರ ಮನೆಗೆ ಹೋಗಿದ್ದು ಮನೆಯಲ್ಲಿದ್ದ ಯುವಕನ ಮೇಲೆ ಗುಂಡು (Firing) ಹಾರಿಸಿದ ಘಟನೆ ಗಂಗಮ್ಮನ ಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿನಿಮಾ‌ ಸ್ಟೈಲ್ ನಲ್ಲಿ‌ ಮನೆಗೆ ಎಂಟ್ರಿ ಕೊಟ್ಟ ಪರಶುರಾಮ್ ಅವರನ್ನು ಮನೆಯೊಳಗೆ ಬರದಂತೆ ಸೂರಜ್ ತಡೆದಿದ್ದು ಕೋಪಗೊಂಡ ಪರಶುರಾಮ್ ತಮ್ಮ ಕೈಯಲ್ಲಿದ್ದ ಗನ್​ನಿಂದ ಸೂರಜ್ ಮೇಲೆ ಗುಂಡು ಹಾರಿಸಿದ್ದಾರೆ. ಸದ್ಯ ಅದೃಷ್ಟವಶಾತ್ ಗುಂಡು ಗೋಡೆಗೆ ತಾಕಿದ್ದು ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ನಿನ್ನೆ ಮಧ್ಯರಾತ್ರಿ 12ಗಂಟೆ ಸುಮಾರಿಗೆ ಗಂಗಮ್ಮನ ಗುಡಿ ಠಾಣಾ ವ್ಯಾಪ್ತಿಯಲ್ಲಿ ಗುಂಡಿನ ದಾಳಿ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಪರಶುರಾಮ್ ಏಕಾ ಏಕಿ‌ ಪರಿಚಿತರ ಮನೆಗೆ ಎಂಟ್ರಿ ಕೊಟ್ಟಿದ್ದು ಮನೆಯೊಳಗೆ ಬಿಟ್ಟಿಲ್ಲ ಎಂದ ಯುವಕನ ಮೇಲೆ ಗುಂಡು ಹಾರಿಸಿದ್ದಾರೆ. ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರಶುರಾಮ್ ಬಳಿ ಲೈಸೆನ್ಸ್ ಇದ್ದ ಗನ್ ಇತ್ತು. ಪರಶುರಾಮ್ ತನ್ನ ಜೊತೆ ಗನ್ ತಂದಿದ್ದರು. ಮಧ್ಯರಾತ್ರಿ ಸೂರಜ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಸೂರಜ್ ಮನೆ ಒಳಗೆ ಬರದಂತೆ ತಡೆದಿದ್ದಾನೆ. ಈ ವೇಳೆ ಪರಶುರಾಮ್ ಹಾಗೂ ಸೂರಜ್ ನಡುವೆ ಜಗಳವಾಗಿದೆ. ಆಗ ಕೂಡಲೇ ಪರಶುರಾಮ್ ತನ್ನ ಬಳಿ ಇದ್ದ ಗನ್ ತೆಗೆದು ಸೂರಜ್ ಮೇಲೆ ಗುಂಡು ಹಾರಿಸಿದ್ದಾರೆ.

ಪಿಸ್ತೂಲ್​ನಿಂದ ಗುಂಡು ಹಾರುತ್ತಿದ್ದಂತೆ ಸೂರಜ್ ತಪ್ಪಿಸಿಕೊಂಡಿದ್ದು ಗುಂಡು ಗೋಡೆಗೆ ಬಿದ್ದಿದೆ. ಸದ್ಯ ಅದೃಷ್ಟವಶಾತ್ ಸೂರಜ್ ತಪ್ಪಿಸಿಕೊಂಡಿದ್ದಾನೆ. ಗುಂಡಿನ ಸದ್ದು ಕೇಳಿ ಅಕ್ಕಪಕ್ಕದ ಮನೆಯವರೆಲ್ಲ ಓಡಿ ಬಂದಿದ್ದು ಪರಶುರಾಮ್​ನನ್ನು ಹಿಡಿದು ಗಂಗಮ್ಮನ ಗುಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ಪರಶುರಾಮ್ ‌ನನ್ನ ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳಿಸಿದ್ದಾರೆ. ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: 16 ಎಕರೆ ಜಮೀನು ಕಬಳಿಕೆ ಪ್ರಕರಣ; ಮಾಜಿ ರೌಡಿಶೀಟರ್ ಜೆಕೆ ಬಂಧನ

ಜೈಲಿನಲ್ಲಿ ಚಾಕು, ನಗದು, ಮೊಬೈಲ್ ಚಾರ್ಜರ್ ಪತ್ತೆ

ಮೈಸೂರು ಕಾರಾಗೃಹದಲ್ಲಿ ಪೊಲೀಸ್ ಅಧಿಕಾರಿಗಳ ದಿಢೀರ್ ದಾಳಿ ನಡೆಸಿದ್ರು. ತಪಾಸಣೆ ವೇಳೆ ಚಾಕು, ನಗದು, ಮೊಬೈಲ್ ಚಾರ್ಜರ್​​ಗಳು ಪತ್ತೆಯಾಗಿವೆ. ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸೂಚನೆ ಮೇರೆಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತುರಾಜು ನೇತೃತ್ವದಲ್ಲಿ ದಾಳಿ ನಡೆಸಲಾಯ್ತು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್.ಜಾಹ್ನವಿ, ಎಸಿಪಿ, ಪಿಐ, ಪಿಎಸ್​ಐಗಳು, ಶ್ವಾನದಳ ಸಹಯೋಗದೊಂದಿಗೆ ಜೈಲಿನಲ್ಲಿ ಶೋಧ ನಡೆಸಲಾಯ್ತು.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:04 am, Wed, 7 February 24