Kannada News Photo gallery Appreciation for the work of Cubban Park traffic police who cleaned the spilled diesel and oil on the road bengaluru news
ರಸ್ತೆಯಲ್ಲಿ ಹರಿದ ಡೀಸೆಲ್, ಆಯಿಲ್ ಸ್ವಚ್ಛಗೊಳಿಸಿದ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಚಾಲುಕ್ಯ ಸರ್ಕಲ್ ನಲ್ಲಿ ಸುಮಾರು 100 ಮೀಟರ್ ವರೆಗೆ ಡೀಸೆಲ್ ಹಾಗೂ ಆಯಿಲ್ ಹರಿದಿತ್ತು. ಈ ವೇಳೆ ಪೊಲೀಸರು ರಸ್ತೆಯಲ್ಲಿ ಹರಿದಿದ್ದ ಆಯಿಲ್ ಹಾಗೂ ಡೀಸೆಲ್ ಸ್ವಚ್ಛಗೊಳಿಸುವಂತೆ ಬಿಬಿಎಂಪಿಗೆ ಮನವಿ ಮಾಡಲಾಗಿತ್ತು. ಬಿಬಿಎಂಪಿ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗದಿದ್ದ ಹಿನ್ನಲೆ ರಸ್ತೆಯಲ್ಲಿ ಹರಿದಿದ್ದ ಆಯಿಲ್ ಹಾಗೂ ಡೀಸೆಲ್ ಮೇಲೆ ಮಣ್ಣು ಹಾಕಿ ಸಂಚಾರಿ ಪೊಲೀಸರೇ ರಸ್ತೆ ಸ್ವಚ್ಛಗೊಳಿಸಿದ್ದಾರೆ.