Bengaluru News: ಬಿಡಿಎ ಮುಖ್ಯ ಕಚೇರಿ ಸೇರಿ ಒಟ್ಟು 5 ಕಡೆ ಎಸಿಬಿ ದಾಳಿ
ಬಿಡಿಎ ಕಚೇರಿಯಲ್ಲಿ ಎಸಿಬಿ ಪರಿಶೀಲನೆ ಮುಂದುವರಿದಿದೆ. ಬೆಂಗಳೂರಿನ ಹೆಚ್ಎಸ್‌ಆರ್ ಲೇಔಟ್‌ನಲ್ಲಿರುವ ಕಚೇರಿಯಲ್ಲಿ ಎಸಿಬಿ ಡಿವೈಎಸ್‌ಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಬೆಂಗಳೂರು: ಇಲ್ಲಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (Bengaluru Development Authority BDA) ಮುಖ್ಯ ಕಚೇರಿ ಸೇರಿ ಒಟ್ಟು 5 ಕಡೆ ಎಸಿಬಿ (ACB) ಇಂದು (ನವೆಂಬರ್ 23) ದಾಳಿ ನಡೆಸಿದೆ. ಬಿಡಿಎ ಕಚೇರಿಗೆ ಮಾತ್ರವಲ್ಲದೆ ಇತರ ನಾಲ್ಕು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬಿಡಿಎ ಕಚೇರಿಯಲ್ಲಿ ಎಸಿಬಿ ಪರಿಶೀಲನೆ ಮುಂದುವರಿದಿದೆ. ಬೆಂಗಳೂರಿನ ಹೆಚ್ಎಸ್‌ಆರ್ ಲೇಔಟ್‌ನಲ್ಲಿರುವ ಕಚೇರಿಯಲ್ಲಿ ಎಸಿಬಿ ಡಿವೈಎಸ್‌ಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಉಪ ಕಾರ್ಯದರ್ಶಿ ಕಚೇರಿ 4ರಲ್ಲಿ ಎಸಿಬಿ ಶೋಧ ಕಾರ್ಯ ನವೆಂಬರ್ 20ರಂದು ಕೂಡ ನಡೆದಿತ್ತು. ಆ ವೇಳೆ, ಕೆಲ ಮಹತ್ವದ ದಾಖಲೆ ವಶಕ್ಕೆ ಪಡೆದು ಎಸಿಬಿ ಅಧಿಕಾರಿಗಳು ತೆರಳಿದ್ದರು. DS-2, DS-4ರ ಕಚೇರಿಯಲ್ಲಿ ಎಸಿಬಿ ದಾಳಿ ಮುಕ್ತಾಯವಾಗಿತ್ತು. ದಾಳಿ ಕುರಿತು ಎಸಿಬಿ ಅಧಿಕಾರಿಗಳಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿತ್ತು. 75 ಕೋಟಿ ಮೌಲ್ಯದ 6 ನಿವೇಶನಗಳ ನಕಲಿ ದಾಖಲೆ ಪತ್ತೆ ಆಗಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು.
ಭ್ರಷ್ಟಾಚಾರ ನಿಗ್ರಹದಳದ ದಾಳಿ ವೇಳೆ ಪತ್ತೆಯಾದ ಅಕ್ರಮಗಳು 1) ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆ 75 ಕೋಟಿ ಬೆಲೆ ಬಾಳುವ 6 ನಿವೇಶನಗಳನ್ನ ಸುಳ್ಳು ಮಾಹಿತಿ ನೀಡಿ ನಕಲಿ ದಾಖಲೆ ಸೃಷ್ಠಿಸಿರುವುದು ಪತ್ತೆ 2) ಕೆಂಗೇರಿ ಹೊಬಳಿಯಲ್ಲಿ ಉಲ್ಲಾಳ ಗ್ರಾಮದಲ್ಲಿ 1.5 ಕೋಟಿ ಮೌಲ್ಯದ ಅಕ್ರಮ ನಿವೇಶನಗಳು ಮಂಜೂರು 3) ಸ್ಯಾಟಲೈಟ್ ಟೌನ್ ಬಳಿ 80 ಲಕ್ಷ ಮೌಲ್ಯದ ನಿವೇಶನ ಅಕ್ರಮವಾಗಿ ಮಂಜೂರು 4) ಚಂದ್ರಾಲೇಔಟ್ ನಲ್ಲಿ2400 ಚದರ ಅಡಿಯ 5 ಕೋಟಿ ಮೌಲ್ಯದ ನಿವೇಶನ ಅಕ್ರಮ ಮಂಜೂರು 5) ಕೆಂಪೇಗೌಡ ಲೇಔಟ್ ನಲ್ಲಿ 30 ಲಕ್ಷ ಮೌಲ್ಯದ ಅಕ್ರಮ ನಿವೇಶನ ಮಂಜೂರು 6) ಒಂದು ನಿವೇಶನವನ್ನ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳಿಗೆ ನೊಂದಣಿ ಈ ಕುರಿತು ತನಿಖೆ 7) ವಿಶ್ವೇಶ್ವರಯ್ಯ ಲೇಔಟ್ ನಲ್ಲಿ 52 ಲಕ್ಷ ಮೌಲ್ಯದ ನಿವೇಶನ ಅಕ್ರಮವಾಗಿ ಮಂಜೂರು 8) ಅರ್ಕಾವತಿ ಲೇಔಟ್ ನಲ್ಲಿ ಪಲಾನುಭವಿಗಳಿಗಲ್ಲದೆ ಬೇರೆಯವರಿಗೆ ನಿವೇಶನ ಮಂಜೂರು 9) ಕೆಂಪೇಗೌಡ ಲೇಔಟ್, ಶಿವರಾಮ ಕಾರಂತ ಲೇಔಟ್, ಮೊದಲಾದ ಕಡೆ ಅಧಿಕಾರಿಗಳು ಮತ್ತು ಮದ್ಯವರ್ತಿಗಳೊಂದಿಗೆ ಅಕ್ರಮವಾಗಿ ಸೈಟ್ ಗಳ ಮಂಜೂರು 10) ಕೋಟ್ಯಾಂತರ ಮೌಲ್ಯದ ಪರಿಹಾರ ಧನ ಸದರಿ ವ್ಯಕ್ತಿಗಳಿಗೆ ನೀಡದೆ ಬೇರೆಯವರಿಗೆ ನೀಡಿರುವುದು ಪತ್ತೆ 11) ಅಂಜನಾಪುರ ಬಡಾವಣೆಯಲ್ಲಿ ಮೂಲ ಮಾಲೀಕನಿಗಲ್ಲದೆ ಬೇರೆಯವರಿಗೆ ನಿವೇಶನ ನೀಡಿರುವ ದಾಖಲೆ ಪತ್ತೆ 12) ಅರ್ಕಾವತಿ ಲೇಔಟ್ ಸೇರಿದಂತೆ ಇತರೆ ಕಡೆ ಅರ್ಜಿದಾರರಿಂದ ಹಣ ಪಡೆದು ನಿವೇಶನ ನೀಡದೆ ತೊಂದರೆ ಕೊಟ್ಟಿರುವ ಅಧಿಕಾರಿಗಳು 13) ಅರ್ಜಿದಾರರಿಗೆ ನಿವೇಶನ ಹಂಚಿಕೆ ಪತ್ರ ನೀಡದೆ ವಿಳಂಬ ಮಾಡಿರುವು ಪತ್ತೆ
ಇದನ್ನೂ ಓದಿ: ಬಿಡಿಎ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ: 75 ಕೋಟಿ ಮೌಲ್ಯದ 6 ನಿವೇಶನಗಳ ನಕಲಿ ದಾಖಲೆ ಪತ್ತೆ
ಇದನ್ನೂ ಓದಿ: ಎಸಿಬಿ ದಾಳಿ ಸ್ವಾಗತಿಸುವೆ, ದಾಖಲೆಗಳ ನೀಡಿ ಸಹಕರಿಸುವೆ, ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ -ಬಿಡಿಎ ಅಧ್ಯಕ್ಷ ವಿಶ್ವನಾಥ್
Published On - 4:12 pm, Tue, 23 November 21