ಎಸಿಬಿ ದಾಳಿ ವೇಳೆ ಸೀರೆಯಲ್ಲಿ ಬಚ್ಚಿಟ್ಟ ಹಣ ಪತ್ತೆ; ನೋಟು ಎಣಿಸಲು ಮಷೀನ್ ತಂದ ಅಧಿಕಾರಿಗಳು

ACB Raid: ಪೈಪ್‌ನಲ್ಲಿ ₹13.50 ಲಕ್ಷ, ಸೀಲಿಂಗ್‌ನಲ್ಲಿ 15 ಲಕ್ಷ ಹಣ ಪತ್ತೆ ಆಗಿದೆ. ಬಳಿಕ, ಲಾಕರ್‌ವೊಂದರ ಕೀ ಕೊಡದೆ ಶಾಂತಗೌಡ ಸತಾಯಿಸುತ್ತಿದ್ದಾರೆ. ಲಾಕರ್ ಒಡೆಯಲು ಎಸಿಬಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಎಸಿಬಿ ದಾಳಿ ವೇಳೆ ಸೀರೆಯಲ್ಲಿ ಬಚ್ಚಿಟ್ಟ ಹಣ ಪತ್ತೆ; ನೋಟು ಎಣಿಸಲು ಮಷೀನ್ ತಂದ ಅಧಿಕಾರಿಗಳು
ಎಸಿಬಿ ದಾಳಿ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: ganapathi bhat

Updated on:Nov 24, 2021 | 3:34 PM

ಬೆಂಗಳೂರು: ಸಕಾಲ, ಬೆಂಗಳೂರು ಇದರ ಆಡಳಿತಾಧಿಕಾರಿ ಎಲ್‌.ಸಿ. ನಾಗರಾಜ್ ನಿವಾಸದಲ್ಲಿ 43 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ನೆಲಮಂಗಲದಲ್ಲಿರುವ ಮನೆಯಲ್ಲಿ 43 ಲಕ್ಷ ರೂಪಾಯಿ ನಗದು ಪತ್ತೆ ಆಗಿದೆ. ವಿಚಿತ್ರ ಎಂಬಂತೆ ಮನೆಯಲ್ಲಿ ಇಟ್ಟಿದ್ದ ಸೀರೆ ಸೀರೆಯಲ್ಲೂ ಹಣ ಪತ್ತೆ ಆಗಿದೆ. ಸೀರೆಗಳಲ್ಲಿ ಹಣವನ್ನು ಬಚ್ಚಿಟ್ಟಿರುವ ಬಗ್ಗೆ ಮಾಹಿತಿ ದೊರಕಿದೆ. ಸೀರೆ ಕೊಡುವುತ್ತಿದ್ದರೆ ದುಡ್ಡು ಬೀಳುತ್ತಿರುವ ಬಗ್ಗೆ ತಿಳಿದುಬಂದಿದೆ. ಹಣ ಎಣಿಸಲು ಅಧಿಕಾರಿಗಳು ಮಷೀನ್ ತಂದಿದ್ದಾರೆ. ರಾಜ್ಯದ ವಿವಿಧೆಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ

ಪಿಡಬ್ಲ್ಯುಡಿ ಜೆಇ ಶಾಂತಗೌಡ ಮನೆಯಲ್ಲಿ ಲಕ್ಷ ಲಕ್ಷ ಹಣ ಪತ್ತೆ ಪಿಡಬ್ಲ್ಯುಡಿ ಜೆಇ ಶಾಂತಗೌಡ ಮನೆಯಲ್ಲಿ ಲಕ್ಷ ಲಕ್ಷ ಹಣ ಪತ್ತೆ ಆಗಿದೆ. ಈವರೆಗೆ ಶಾಂತಗೌಡ ಮನೆಯಲ್ಲಿ 55 ಲಕ್ಷಕ್ಕೂ ಹೆಚ್ಚು ಹಣ ಪತ್ತೆ ಆಗಿದೆ. ಕಲಬುರಗಿಯ ಗುಬ್ಬಿ ಕಾಲೋನಿಯ ಮನೆಯಲ್ಲಿ ಹಣ ಪತ್ತೆ ಆಗಿದೆ. ಪೈಪ್‌ನಲ್ಲಿ ₹13.50 ಲಕ್ಷ, ಸೀಲಿಂಗ್‌ನಲ್ಲಿ 15 ಲಕ್ಷ ಹಣ ಪತ್ತೆ ಆಗಿದೆ. ಬಳಿಕ, ಲಾಕರ್‌ವೊಂದರ ಕೀ ಕೊಡದೆ ಶಾಂತಗೌಡ ಸತಾಯಿಸುತ್ತಿದ್ದಾರೆ. ಲಾಕರ್ ಒಡೆಯಲು ಎಸಿಬಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಶಾಂತಗೌಡ ಬಿರಾದರ್ ಹೆಸರಿನಲ್ಲಿ 35 ಎಕರೆ ಜಮೀನು ಇರುವ ಬಗ್ಗೆ ತಿಳಿದುಬಂದಿದೆ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಗ್ರಾಮ ಹಂಗರಗಾ ಬಿ.ಗ್ರಾಮದಲ್ಲಿ 35 ಎಕರೆ ಭೂಮಿ ಇದೆ. ಇದರಲ್ಲಿ ಕೇವಲ 2 ಎಕರೆ ಮಾತ್ರ ಪಿತ್ರಾರ್ಜಿತ ಆಸ್ತಿ ಇದೆ. ಶಾಂತಗೌಡ ಕೆಲಸಕ್ಕೆ ಸೇರಿದ ಬಳಿಕ ಜಮೀನು ಖರೀದಿ ಮಾಡಲಾಗಿದೆ. ಪಿಡಬ್ಲ್ಯುಡಿ ಜೆಇ ಶಾಂತಗೌಡ ಮನೆಯಲ್ಲಿ ಹಣ ಪತ್ತೆ ಆಗಿದೆ.

ಶಾಂತಗೌಡ ಬಿರಾದರ್ ಮನೆ ಮೇಲೆ ಎಸಿಬಿ ದಾಳಿ ಕೇಸ್​ ಸಂಬಂಧಿಸಿ ಎಸಿಬಿ ಎಸ್​​ಪಿ ಮಹೇಶ್ ಮೇಘಣ್ಣವರ್​ ಮಾಹಿತಿ ನೀಡಿದ್ದಾರೆ. ದಾಳಿಯ ವೇಳೆ ಒಟ್ಟು ₹54 ಲಕ್ಷ ನಗದು ಪತ್ತೆಯಾಗಿದೆ. ಬೇನಾಮಿ ಆಸ್ತಿ ಬಗ್ಗೆ ಪರಿಶೀಲನೆಯನ್ನು ನಡೆಸುತ್ತಿದ್ದೇವೆ. ಬೆಂಗಳೂರಿನಲ್ಲಿ ಬಾಡಿಗೆ ಮನೆ ಜತೆ ಖಾಲಿ ನಿವೇಶನ ಬಗ್ಗೆ ಮಾಹಿತಿ ಇದೆ, ಪರಿಶೀಲಿಸ್ತಿದ್ದೇವೆ ಎಂದು ಎಸಿಬಿ ಎಸ್​​ಪಿ ಮಹೇಶ್ ಮೇಘಣ್ಣವರ್​ ಮಾಹಿತಿ ನೀಡಿದ್ದಾರೆ.

ಡಾ. ರಾಜಶೇಖರ್ ಮನೆ ಮೇಲೆ ಎಸಿಬಿ ದಾಳಿ ಫಿಜಿಯೋ ಥೆರಪಿ ಡಾ ರಾಜಶೇಖರ್ ‌ನಿವಾಸದ ಮೇಲೆ ಎಸಿಬಿ ದಾಳಿ ಮುಂದುವರಿದಿದೆ. ಸತತ 8 ಗಂಟೆಗಳಿಂದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. 15 ಜನರ ತಂಡದಿಂದ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಹೊರಗಿನಿಂದ ‌ಮಧ್ಯಾಹ್ನದ ಊಟ ತರಿಸಿಕೊಂಡ ಅಧಿಕಾರಿಗಳು, ಸಂಜೆವರೆಗೂ ದಾಖಲೆ ಪರಿಶೀಲನೆ ಮುಂದುವರಿಸುವ ಸಾಧ್ಯತೆ ಇದೆ.

ಡಾ. ರಾಜಶೇಖರ್ ಮನೆಯ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ. ಡಿವೈಎಸ್​ಪಿ ಪ್ರತಾಪ್ ರೆಡ್ಡಿ ಮತ್ತು ಇನ್ಸ್ಪೆಕ್ಟರ್ ದಯಾನಂದ್ ನೇತೃತ್ವದಲ್ಲಿ ಪರೀಶೀಲನೆ ನಡೆಯುತ್ತಿದೆ. ಬೆಳಗಿನ ಜಾವ 5-30 ಕ್ಕೆ ಮನೆಗೆ ಆಗಿಮಿಸಿರುವ ಎಸಿಬಿ ಪೊಲೀಸರು ಡಾ. ರಾಜಶೇಖರ್ ನಿವಾಸ ಮತ್ತು ಆತನ ಕ್ಲಿನಿಕ್ ಮೇಲೆ ದಾಳಿ ಮಾಡಿದ್ದಾರೆ. ಸದ್ಯ ಮನೆಯಲ್ಲಿ ದೊರೆತಿರೋ ದಾಖಲೆ ಪತ್ರಗಳ ಪರೀಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿ ಆದಾಯಕ್ಕೂ ಮೀರಿ ಚಿನ್ನಾಭರಣ ದೊರೆತಿರುವ ಮಾಹಿತಿ ಲಭ್ಯವಾಗಿದೆ.

ಕಲ್ಲೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಗೆ ಕರೆತಂದು ನೇತಾಜಿ ಪಾಟೀಲ್ ವಿಚಾರಣೆ ಹೆಸ್ಕಾಂ ಸಿ ದರ್ಜೆ ನೌಕರ ನಾತಾಜಿ ಪಾಟೀಲ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ನಾತಾಜಿ ಪಾಟೀಲ್‌ನನ್ನು ಕಲ್ಲೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಗೆ ಕರೆತಂದ ಎಸಿಬಿ ಅಧಿಕಾರಿಗಳು, ಶ್ರೀ ಕಲ್ಲೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಠೇವಣಿ ಇಟ್ಟಿರುವ ಹಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ.ಗ್ರಾಮದಲ್ಲಿ ಇರುವ ಸೊಸೈಟಿಯಲ್ಲಿ ಮಾಹಿತಿ ಪಡೆಯುತ್ತಿದ್ದಾರೆ. ನೇತಾಜಿ ಪಾಟೀಲ್‌ರನ್ನು ಸೊಸೈಟಿಯಲ್ಲಿ ಎಷ್ಟು ಪ್ರಮಾಣದ ಹಣ ಠೇವಣಿ ಇಟ್ಟಿದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.

ನಾತಾಜಿ ಪಾಟೀಲ್ ಮನೆಯಲ್ಲಿ ಎಸಿಬಿ ಶೋಧ ಕಾರ್ಯ ಮುಂದುವರಿದಿದೆ. ಕಲ್ಲೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಗೆ ಕರೆತಂದು ಎಸಿಬಿ ವಿಚಾರಣೆ ನಡೆಸುತ್ತಿದೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ.ಗ್ರಾಮದಲ್ಲಿರುವ ಸೊಸೈಟಿಯಲ್ಲಿ ನಾತಾಜಿಯನ್ನು ಕರೆತಂದು ಎಸಿಬಿ ಪರಿಶೀಲನೆ ನಡೆಸುತ್ತಿದೆ. ಬೆಳಗಾವಿ ಹೆಸ್ಕಾಂ ವಿಭಾಗದ ಗ್ರೂಪ್ ಸಿ ನೌಕರ ನಾತಾಜಿ ಹೀರಾಜಿ ಪಾಟೀಲ್ ವಿಚಾರಣೆ ನಡೆಸುತ್ತಿದೆ.

ಇನ್ನೂ ಕೆಲವೆಡೆ ಎಸಿಬಿ ಅಧಿಕಾರಿಗಳ ದಾಳಿ ಸದಾಶಿವ ಮರಲಿಂಗಣ್ಣನವರ್ ಮನೆಯಲ್ಲಿ ಚಿನ್ನಾಭರಣ ಪತ್ತೆ ಆಗಿದೆ. 1.135 ಕೆ.ಜಿ ಚಿನ್ನಾಭರಣ, ನಗದು 8,22,172 ಪತ್ತೆ ಆಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಆರ್‌ಟಿಒ ಮೋಟಾರು ವೆಹಿಕಲ್ ಇನ್ಸ್‌ಪೆಕ್ಟರ್‌ ಸದಾಶಿವ ಮನೆಯಲ್ಲಿ ಬೆಳ್ಳಿ ವಸ್ತುಗಳು, ಜಮೀನು, ಸೈಟ್ ದಾಖಲೆಗಳು ಪತ್ತೆ ಆಗಿದೆ.

ಶಿವಮೊಗ್ಗ ದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ. ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಮನೆ ಮೇಲೆ ದಾಳಿ ಮಾಡಿದ್ದಾರೆ. ಚಾಲುಕ್ಯ ನಗರದ ನಿವಾಸದಲ್ಲಿ ದಾಳಿ ಮುಂದುವರೆದಿದೆ. ಮನೆಯಲ್ಲಿರುವ ಇತರೆ ಲಾಕರ್​ಗಳ ಪರಿಶೀಲನೆ ನಡೆಸಲಾಗಿದೆ. ಇದರ ಜೊತೆಗೆ ಆಸ್ತಿ ಸೇರಿದಂತೆ ಇತರೆ ದಾಖಲೆ ಪರಿಶೀಲನೆ ಮಾಡಲಾಗಿದೆ. ಗೋಪಾಳಗೌಡ ಬಡಾವಣೆಯಲ್ಲಿ ಅಧಿಕಾರಿಯ ಮತ್ತೊಂದು ಮನೆ ಮೇಲೆ ದಾಳಿ ಮಾಡಲಾಗಿದೆ. ಕುಟುಂಬಸ್ಥರ ಸಹಾಯ ಪಡೆದು ಬಾಗಿಲು ಓಪನ್ ಮಾಡಲಾಗಿದೆ. ಎರಡನೇ ಮನೆಯಲ್ಲೂ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ರಾತ್ರಿ ವರೆಗೂ ಎಸಿಬಿ ದಾಳಿ ಮುಂದುವರೆಯುವ ಸಾಧ್ಯತೆ ಇದೆ. ಈಗಾಗಲೇ ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ಅಧಿಕಾರಿ ಮನೆಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯ ತೀವ್ರಗೊಂಡಿದೆ.

ಡಿ ಗ್ರೂಪ್ ನೌಕರ ಜಿ.ವಿ.ಗಿರಿ ಮನೆ ಮೇಲೆ ಎಸಿಬಿ ದಾಳಿ ಅಂತ್ಯವಾಗಿದೆ. ಬಾಗಲಗುಂಟೆಯ ಬಿಟಿಎಸ್ ಲೇಔಟ್‌ನಲ್ಲಿರುವ ಗಿರಿ ನಿವಾಸದಲ್ಲಿ ಎಸಿಬಿ ದಾಳಿ ಮುಕ್ತಾಯವಾಗಿದೆ. ಅಧಿಕಾರಿಗಳು ದಾಳಿ ಬಳಿಕ 3 ಬ್ಯಾಗ್‌ನಲ್ಲಿ ದಾಖಲೆ ಹೊತ್ತೊಯ್ದಿದ್ದಾರೆ.

ಇದನ್ನೂ ಓದಿ: ACB Raids: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ: ಬೆಂಗಳೂರು ಸೇರಿದಂತೆ ಕರ್ನಾಟಕದ 60 ಕಡೆ ಎಸಿಬಿ ದಾಳಿ

ಇದನ್ನೂ ಓದಿ: ಬಾತ್ ರೂಂ ಮತ್ತು ವಾಶ್ ಬೇಶನ್ ಪೈಪ್​ನಲ್ಲಿ ದುಡ್ಡಿನ ಕಂತೆ ಹಾಕಿದ್ದ ಪಿಡಬ್ಲೂಡಿ ಶಾಂತಗೌಡ; ವಿಡಿಯೋ ನೋಡಿ

Published On - 3:32 pm, Wed, 24 November 21