ಬೆಂಗಳೂರು ಅ.29: ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ (Accident) ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರ ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ (ಅ.28) ರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಬಿಎಸ್ಎಫ್ (BSF) ಉದ್ಯೋಗಿ ಸುಧಾಕರ್ ಮತ್ತು ಯೂಟ್ಯೂಬರ್ ಗಣಿ ಮೃತ ದುರ್ದೈವಿಗಳು. ಸುಧಾಕರ್ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ವೇಗವಾಗಿ ಬಿಎಸ್ಎಫ್ ಕಾಂಪೌಂಡ್ನಿಂದ ಹೊರಗೆ ಬರುತ್ತಿದ್ದರು. ಈ ವೇಳೆ ಎದುರಿಗೆ ಬರುತ್ತಿದ್ದ ಗಣಿ ಎಂಬುವರು ಬೈಕ್ನಿಂದ ಸುಧಾಕರ್ ಅವರ ಬೈಕ್ಗೆ ಗುದ್ದಿದ್ದಾರೆ.
ಅಪಘಾತದಲ್ಲಿ ಸುಧಾಕರ್ ಸ್ಥಳದಲ್ಲೇ ಮೃಪಟ್ಟಿದ್ದಾರೆ. ಅವಘಡದಲ್ಲಿ ಗಾಯಗೊಂಡಿದ್ದ ಗಣಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೃತ ಸುಧಾಕರ್ ನಿವೃತ್ತ ಯೋಧ ನಾಗಪ್ಪನ್ ಅವರ ಪುತ್ರರಾಗಿದ್ದು, ಬಿಎಸ್ಎಫ್ ಕಚೇರಿಯಲ್ಲಿ ಹೆಡ್ಕುಕ್ ಆಗಿ ಕರ್ತವ್ಯ ನಿರ್ವಹಿಸುತಿದ್ದರು. ಬಿಎಸ್ಎಫ್ನಲ್ಲಿ ಕಳೆದ 22 ವರ್ಷಗಳಿಂದ ಕರ್ತವ್ಯ ನಿರ್ವಹಿಸುತಿದ್ದರು. ಸುಧಾಕರ್
ಮೂಲತಃ ತಮಿಳುನಾಡಿನ ವೆಲ್ಲೂರಿನವರಾಗಿದ್ದಾರೆ. ಸುಧಾಕರ್ ಪತ್ನಿ, ಮಕ್ಕಳು ಹಾಗೂ ತಂದೆ ವೆಲ್ಲೂರಿನಲ್ಲಿ ವಾಸವಾಗಿದ್ದಾರೆ. ಸುಧಾಕರ್ ರೂಂ ಮಾಡಿಕೊಂಡು ವಿನಾಯಕ ನಗರದಲ್ಲಿ ವಾಸವಾಗಿದ್ದರು.
ಪ್ರಕರಣ ಸಂಬಂಧ ಗಣಿ ಅಲಿಯಾಸ್ ಗಿರೀಶ್ ವಿರುದ್ಧ ಯಲಹಂಕ ಸಂಚಾರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ದೂರು ದಾಖಲಾಗಿದೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:10 am, Sun, 29 October 23