Lunar Eclipse 2023: ಇಂದು ಮಧ್ಯರಾತ್ರಿ ರಾಹುಗ್ರಸ್ತ ಚಂದ್ರಗ್ರಹಣ: ವಿಜ್ಞಾನಿ ಆನಂದ್ ಹೇಳಿದ್ದಿಷ್ಟು
ಸೂರ್ಯಗ್ರಹಣವಾದ 2 ವಾರಗಳ ಬೆನ್ನಲ್ಲೇ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ವರ್ಷದ 2ನೇ ಮತ್ತು ಕೊನೆಯ ಚಂಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದೆ. ನೆಹರು ತಾರಾಲಯದಲ್ಲಿ ಚಂದ್ರಗ್ರಹಣ ವೀಕ್ಷಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕುರಿತಾಗಿ ವಿಜ್ಞಾನಿ ಆನಂದ್ ಪ್ರತಿಕ್ರಿಯಿಸಿದ್ದು, ಕೆಲ ಗಂಟೆಗಳಲ್ಲಿ ಚಂದ್ರಗ್ರಹಣ ಸಂಭವಿಸುತ್ತೆ. ಇದು ಪಾರ್ಶ್ವ ಚಂದ್ರಗ್ರಹಣ. ಹಲವು ಹಂತಗಳು ಇದರಲ್ಲಿವೆ ಎಂದಿದ್ದಾರೆ.
ಬೆಂಗಳೂರು, ಅಕ್ಟೋಬರ್ 28: ಸೂರ್ಯಗ್ರಹಣವಾದ 2 ವಾರಗಳ ಬೆನ್ನಲ್ಲೇ ಚಂದ್ರಗ್ರಹಣ (Lunar Eclipse) ಸಂಭವಿಸುತ್ತಿದೆ. ಈ ವರ್ಷದ 2ನೇ ಮತ್ತು ಕೊನೆಯ ಚಂಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದೆ. ರಾತ್ರಿ 11.30ಕ್ಕೆ ಶುರುವಾಗುವ ಚಂದ್ರಗ್ರಹಣ ನಾಳೆ ಬೆಳಗಿನ ಜಾವ 3.36 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ರಾತ್ರಿ 11.30 ಕ್ಕೆ ಗ್ರಹಣ ಸ್ಪರ್ಶಕಾಲ ಆರಂಭವಾಗುತ್ತದೆ. ಮಧ್ಯರಾತ್ರಿ 1.42ಕ್ಕೆ ಗ್ರಹಣ ಮಧ್ಯಕಾಲ ಹಾಗೂ ಬೆಳಗಿನ ಜಾವ 3.30ಕ್ಕೆ ಗ್ರಹಣ ಮೋಕ್ಷವಾಗಲಿದೆ.
ಗ್ರಹಣ ಹಿನ್ನಲೆ ರಾಜ್ಯದ ಪ್ರಮುಖ ದೇವಸ್ಥಾಗಳು ಬಂದ್ ಮಾಡಲಾಗಿದೆ. ಕೆಲ ಹೊತ್ತಲ್ಲೇ ಚಂದ್ರಗ್ರಹಣ ಹಿನ್ನೆಲೆ ನೆಹರು ತಾರಾಲಯದಲ್ಲಿ ಚಂದ್ರಗ್ರಹಣ ವೀಕ್ಷಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕುರಿತಾಗಿ ವಿಜ್ಞಾನಿ ಆನಂದ್ ಪ್ರತಿಕ್ರಿಯಿಸಿದ್ದು, ಕೆಲ ಗಂಟೆಗಳಲ್ಲಿ ಚಂದ್ರಗ್ರಹಣ ಸಂಭವಿಸುತ್ತೆ. ಇದು ಪಾರ್ಶ್ವ ಚಂದ್ರಗ್ರಹಣ. ಹಲವು ಹಂತಗಳು ಇದರಲ್ಲಿವೆ. ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಬಂದಾಗ ಅದರ ನೆರಳು ಬಿದ್ದಾಗ ಗ್ರಹಣ ಹಡಿಯುತ್ತದೆ.
ಇದನ್ನೂ ಓದಿ: Lunar Eclipse 2023: ವರ್ಷದ ಕೊನೆಯ ಚಂದ್ರಗ್ರಹಣ; ಬೆಂಗಳೂರು ಸೇರಿ ರಾಜ್ಯದ ಬಹುತೇಕ ದೇಗುಲಗಳು ಬಂದ್
ಚಂದ್ರನ ಸಂಪೂರ್ಣ ಮರೆ ಮಾಚಲಾಗುತ್ತೆ. ಪ್ರಪಂಚದ ಬಹುತೇಕ ಭಾಗಗಳಲ್ಲಿ ಚಂದ್ರಗ್ರಹಣ ಗೋಚರ ಆಗುತ್ತೆ. ಸೂರ್ಯಗ್ರಹಣ ವೇಳೆ ಎಲ್ಲಾ ಕಡೆ ನೋಡಲು ಸಾಧ್ಯ ಇಲ್ಲ. ಚಂದ್ರಗ್ರಹಣ ಬಹುತೇಕ ಎಲ್ಲಾ ಕಡೆ ಗೋಚರಿಸೋದು ಕಾಣಿಸುತ್ತೆ. ಭೂಮಿಯ ತಿಳಿ ನೆರಳಿನ ಭಾಗದಲ್ಲಿ ಗ್ರಹಣ ಶುರು ಆಗುತ್ತೆ. ಬರಿ ಕಣ್ಣಿನಿಂದ ಚಂದ್ರಗ್ರಹಣ ಕಾಣಿಸೋಲ್ಲ. ಇದರ ಬಗ್ಗೆ ಅಬ್ಯಾಸ ನಡೆಸೋರಿಗೆ ಮಾತ್ರ ಗೊತ್ತಾಗುತ್ತೆ. ದಟ್ಟನೆರಳಿನ ಬಳಿ ಗ್ರಹಣ ಗೋಚರಣೆ ವೇಳೆ ನಮಗೆ ಕಾಣಿಸುತ್ತೆ. ಸುಮಾರು 1.5ನಿಮಿಷಕ್ಕೆ ದಟ್ಟನೆರಳಿನಿಂದ ಗೋಚರಿಸೋದು ಕಾಣಿಸುತ್ತೆ.
1.45ಕ್ಕೆ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಈ ಚಂದ್ರಗ್ರಹಣದಲ್ಲಿ 6%ಮಾತ್ರ ಈ ಚಾಯೆ ಸುತ್ತುವರೆಯುತ್ತೆ. ಸ್ಚಲ್ಪ ಭಾಗ ಮಾತ್ರ ಗಮವಿಟ್ಟು ನೋಡಿದರೆ ಗೊತ್ತಾಗುತ್ತೆ. 2.20ಕ್ಕೆ ದಟ್ಟ ನೆರಳಿನ ಪ್ರದೇಶದಿಂದ ಹೊರ ಬರುತ್ತೆ. ನಂತರ ತಿಳಿ ನೆರಳಿನ ಪ್ರದೇಶ ಹಾದು ಹೋಗುತ್ತೆ. ಹುಣ್ಣುಮೆ ಚಂದ್ರ ರೀತಿ ಸ್ವಲ್ಪ ಮೊಬ್ಬಾಗಿರುತ್ತೆ. 3.55ಕ್ಕೆ ಗ್ರಹಣ ಸಂಪೂರ್ಣ ಮುಕ್ತಾಯ ಆಗುತ್ತೆ.
ಇದನ್ನೂ ಓದಿ: Chandra Grahana: ಚಂದ್ರ ಗ್ರಹಣ ಸಮಯದಲ್ಲಿ ಜಾತಕದಲ್ಲಿ ಚಂದ್ರ ದೋಷ ಮತ್ತು ಶನಿ ದೋಷ ಇರುವವರು ಹೀಗೆ ಮಾಡಿ
ಸೂರ್ಯ ಗ್ರಹಣ ಬರಿಗಣ್ಣಿನಿಂದ ನೋಡೋದು ಬೇಡ ಅಂತೀವಿ. ಕಾರಣ ಸೂರ್ಯನ ಪ್ರಕಾಶದಿಂದ ಕಣ್ಣಿಗೆ ಸಮಸ್ಯೆ ಸಾಧ್ಯತೆ ಇರುತ್ತೆ. ಆದರೆ ಚಂದ್ರಗ್ರಹಣವನ್ನ ಬರಿಗಣ್ಣಿನಿಂದ ಅರಾಮಾಗಿ ನೋಡಬಹುದು. ತುಂಬಾ ಹತ್ರದಿಂದ ನೋಡೋಕೆ ಬಯಸೋರಿಗೆ, ಬೈನಾಕಿಲರ್ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗಿದೆ. ಹುಣ್ಣಿಮೆ ದಿನ ಯಾವ ರೀತಿ ಚಂದ್ರ ಇರುತ್ತೋ ಇವತ್ತೂ ಹಾಗೇ ಇರುತ್ತೆ. ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಹಾದು ಹೋಗುವಾಗ ಚಂದ್ರನ ಮೇಲೆ ಭೂಮಿ ಮೇಲೆ ಬೀಳುತ್ತೆ. ಅದು ಸ್ವಲ್ಪ ಹೊತ್ತಲ್ಲಿಯೇ ಮುಗಿದು ಹೋಗುತ್ತೆ. ಆದ್ದರಿಂದ ಜನರಿಗೆ ಸಮಸ್ಯೆಯಾಗೋದು ವೈಜ್ಞಾನಿಕವಾಗಿ ಎಲ್ಲೂ ಸಾಬೀತಾಗಿಲ್ಲ. ಜನರಿಗೆ ಇದರ ವೀಕ್ಷಣೆ ಬಗ್ಗೆ ತಪ್ಪು ಕಲ್ಪನೆ ಇದೆ. ಅದೇ ಕಾರಣಕ್ಕೆ ಖಗೋಳ ತಜ್ಞರು ರೀಸರ್ಚ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.