Lunar Eclipse 2023: ವರ್ಷದ ಕೊನೆಯ ಚಂದ್ರಗ್ರಹಣ; ಬೆಂಗಳೂರು ಸೇರಿ ರಾಜ್ಯದ ಬಹುತೇಕ ದೇಗುಲಗಳು ಬಂದ್

ಇಂದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಇದ್ದು, ಭಾರತದ ಎಲ್ಲಾ ಸ್ಥಳಗಳಲ್ಲಿ ಈ ರಾಹುಗ್ರಸ್ತ ಚಂದ್ರಗ್ರಹಣ ಗೋಚರಿಸಲಿದೆ. ಇನ್ನು ಬರಿಗಣ್ಣಿನಿಂದ ಚಂದ್ರಗ್ರಹಣವನ್ನು ವೀಕ್ಷಣೆ ಮಾಡಬಹುದಾಗಿದ್ದು, ಇದರಿಂದ ಯಾವುದೇ ಹಾನಿಯಿಲ್ಲ. ಈ ಹಿನ್ನಲೆ ಬೆಂಗಳೂರಿನ ನೆಹರು ತಾರಾಲಯ ಚಂದ್ರಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

Lunar Eclipse 2023: ವರ್ಷದ ಕೊನೆಯ ಚಂದ್ರಗ್ರಹಣ; ಬೆಂಗಳೂರು ಸೇರಿ ರಾಜ್ಯದ ಬಹುತೇಕ ದೇಗುಲಗಳು ಬಂದ್
ದೇವಸ್ಥಾನ ಬಂದ್​
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 28, 2023 | 7:59 PM

ಬೆಂಗಳೂರು, ಅ.28: ಇಂದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಇದ್ದು, ಭಾರತದ ಎಲ್ಲಾ ಸ್ಥಳಗಳಲ್ಲಿ ಈ ರಾಹುಗ್ರಸ್ತ ಚಂದ್ರಗ್ರಹಣ(Lunar Eclipse)ಗೋಚರಿಸಲಿದೆ. ಇನ್ನು ಬರಿಗಣ್ಣಿನಿಂದ ಚಂದ್ರಗ್ರಹಣವನ್ನು ವೀಕ್ಷಣೆ ಮಾಡಬಹುದಾಗಿದ್ದು, ಇದರಿಂದ ಯಾವುದೇ ಹಾನಿಯಿಲ್ಲ. ಈ ಹಿನ್ನಲೆ ಬೆಂಗಳೂರಿನ ನೆಹರು ತಾರಾಲಯ ಚಂದ್ರಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಿದ್ದು, ಜೊತೆಗೆ ನೆಹರು ತಾರಾಲಯದ ಯುಟ್ಯೂಬ್ ಮೂಲಕ ಲೈವ್‌ನಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಇನ್ನು ಗ್ರಹಣ ಹಿನ್ನಲೆ ರಾಜ್ಯದ ಪ್ರಮುಖ ದೇವಸ್ಥಾಗಳು ಬಂದ್​ ಆಗಿದ್ದು, ಇಲ್ಲಿದೆ ವಿವರ.

ಮಹಾ ಮಂಗಳಾರತಿ ಮಾಡಿ ದೇವಾಲಯಕ್ಕೆ ಬೀಗ

ಬೆಂಗಳೂರು ಗ್ರಾಮಾಂತರ: ಇಂದು ರಾತ್ರಿ ಚಂದ್ರ ಗ್ರಹಣ ಹಿನ್ನೆಲೆ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ‌ ಸುಬ್ರಮಣ್ಯ ದೇವಾಲಯವನ್ನು ಮಹಾ ಮಂಗಳಾರತಿ ಮಾಡಿ ದೇವಾಲಯಕ್ಕೆ ಬೀಗ ಹಾಕಲಾಗಿದೆ. ಹೌದು, ಸಂಜೆ 7 ಗಂಟೆಗೆ ದೇವಸ್ಥಾನದ ಪ್ರಧಾನ ಅರ್ಚಕ ನಾಗೇಂದ್ರ ಶರ್ಮಾ ಅವರು ಬೀಗ ಹಾಕಿದ್ದು, ನಾಳೆ ಬೆಳಗ್ಗೆ 07:30 ಕ್ಕೆ ಅಭಿಷೇಕ ಮಾಡಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿನಿತ್ಯ ರಾತ್ರಿ 08:30 ಕ್ಕೆ‌ ನಡೆಯುತ್ತಿದ್ದ ಮಹಾ ಮಂಗಳಾರತಿ, ಇಂದು ಚಂದ್ರ ಗ್ರಹಣ ಹಿನ್ನೆಲೆ 07 ಗಂಟೆಗೆ ನಡೆಸಿ, ಬೀಗ ಹಾಕಲಾಗಿದೆ.

ಇದನ್ನೂ ಓದಿ:Lunar Eclipse: ಚಂದ್ರಗ್ರಹಣ ಏಕೆ ಉಂಟಾಗುತ್ತೆ? ಈ ವರ್ಷದ ಗ್ರಹಣ ಯಾವಾಗ? ಪೂರ್ತಿ ಮಾಹಿತಿ ಇಲ್ಲಿದೆ

ಕದ್ರಿಯಲ್ಲಿ ಮುಂಚಿತವಾಗಿ ಮಹಾಪೂಜೆ

ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವರಿಗೆ ಅವಧಿಗೆ ಮೊದಲು ಮಹಾಪೂಜೆ ನಡೆದಿದ್ದು, ಪ್ರತೀ ನಿತ್ಯ ರಾತ್ರಿ 8 ಗಂಟೆಗೆ ನೆರವೇರುತ್ತಿದ್ದ ಮಹಾಪೂಜೆ, ಇಂದು 7 ರಿಂದ 7.30ರ ಅವಧಿಯಲ್ಲಿ ಮುಕ್ತಾಯವಾಗಿದೆ. ಮಹಾಪೂಜೆ ಮುಗಿದ ಬೆನ್ನಲ್ಲೇ ದೇವರ ದರ್ಶನ ಕೂಡ ಬಂದ್ ಮಾಡಲಾಗಿದ್ದು, ದೇವಸ್ಥಾನದ ಹೊರ ಆವರಣದಲ್ಲಿ ಮಾತ್ರ ಪ್ರದಕ್ಷಿಣೆಗೆ ಬರಲು ಅವಕಾಶ ಕಲ್ಪಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಂದ್

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಕೂಡ ಬಂದ್ ಮಾಡಲಾಗಿದೆ. ರಾತ್ರಿಯ ಮಹಾಪೂಜೆಯನ್ನು ಬೇಗ ಮಾಡಿ ಬಂದ್ ಮಾಡಲಾಗಿದ್ದು, ನಾಳೆ ಬೆಳಿಗ್ಗೆವರೆಗೂ ದೇವರ ದರ್ಶನಕ್ಕೆ ನಿರ್ಬಂಧಿಸಲಾಗಿದೆ. ಸಂಜೆಯ ಆಶ್ಲೇಷಾ ಬಲಿ ಹಾಗೂ ರಾತ್ರಿಯ ಅನ್ನದಾನ ಸೇವೆಯೂ ಬಂದ್ ಮಾಡಲಾಗಿದೆ.

ಇದನ್ನೂ ಓದಿ:Chandra Grahan 2023: ಚಂದ್ರಗ್ರಹಣದ ಸಮಯದಲ್ಲಿ ಎಂದಿಗೂ ಈ ತಪ್ಪು ಮಾಡದಿರಿ

ದೇವಸ್ಥಾನಗಳ ಗರ್ಭಗುಡಿಗೆ ಪರದೆ ಹಾಕುವ ಮೂಲಕ ದೇವಸ್ಥಾನಗಳ ಬಂದ್

ಹುಬ್ಬಳ್ಳಿ: ಇಂದು ರಾತ್ರಿ ಚಂದ್ರ ಗ್ರಹಣ ವಿಚಾರ ‘ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದೇವಸ್ಥಾನಗಳ ಗರ್ಭಗುಡಿಗೆ ಪರದೆ ಹಾಕುವ ಮೂಲಕ ದೇವಸ್ಥಾನಗಳ ಬಂದ್ ಮಾಡಿದ್ದಾರೆ. ಬೆಳಿಗ್ಗೆ ಎಂದಿನಂತೆ ಪೂಜಾ ಕಾರ್ಯಕ್ರಮಗಳನ್ನ ನೆರವೇರಿಸಲಾಗುವುದು ಎಂದು ದೇವಸ್ಥಾನಗಳ ಅರ್ಚಕರು ಹೇಳಿದ್ದಾರೆ. ರಾತ್ರಿ ಸಂಭವಿಸೋ ಚಂದ್ರ ಗ್ರಹಣದ ಹಿನ್ನೆಲೆ ಗರ್ಬಗುಡಿ ಕ್ಲೋಸ್ ಮಾಡಲಾಗಿದೆ.

ಮಂಡ್ಯ ಜಿಲ್ಲೆಯ ಪುರಾಣ ಪ್ರಸಿದ್ದ ದೇವಸ್ಥಾನಗಳು ಬಂದ್

ಚಂದ್ರಗ್ರಹಣ ಹಿನ್ನೆಲೆ ಮಂಡ್ಯದ ಪುರಾಣ ಪ್ರಸಿದ್ಧ ದೇವಸ್ಥಾನಗಳು ಬಂದ್​​ ಆಗಿವೆ, ಮೇಲುಕೋಟೆ ಚೆಲುವನಾರಾಯಣಸ್ವಾಮಿ, ನಿಮಿಷಾಂಬ ದೇವಿ, ಶ್ರೀರಂಗಪಟ್ಟಣದ ರಂಗನಾಥ, ಲಕ್ಷ್ಮೀಜನಾರ್ದನ ದೇವಸ್ಥಾನ ಸೇರಿ ಜಿಲ್ಲೆಯ ಹಲವು ದೇವಸ್ಥಾನಗಳ ಬಾಗಿಲು ಮುಚ್ಚಲಾಗಿದೆ.​ ನಾಳೆ ಬೆಳಗ್ಗೆ ಎಂದಿನಂತೆ  ದೇಗುಲ ಶುದ್ಧೀಕರಣ ಮಾಡಿ ಪೂಜೆ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್