Lunar Eclipse 2023: ಕೇತುಗ್ರಸ್ತ ಚಂದ್ರಗ್ರಹಣ: ಯಾವ ರಾಶಿಗೆ ಶುಭ? ಯಾವುದಕ್ಕೆ ಅಶುಭ? ಪರಿಹಾರಕ್ಕೆ ಏನು‌ ಮಾಡಬೇಕು?

ಚಂದ್ರ ಗ್ರಹಣ 2023: ಈ ಗ್ರಹಣವು ತುಲಾರಾಶಿಯಲ್ಲಿ ಮತ್ತು ಸ್ವಾತಿ ನಕ್ಷತ್ರದಲ್ಲಿ ಸ್ಪರ್ಶವಾಗಿ ವಿಶಾಖಾ‌ ನಕ್ಷತ್ರದಲ್ಲಿ ಮೋಕ್ಷವಾಗಲಿದೆ. ಹಾಗಾಗಿ ಎರಡೂ ನಕ್ಷತ್ರಗಳು ಇರಲಿವೆ.

Lunar Eclipse 2023: ಕೇತುಗ್ರಸ್ತ ಚಂದ್ರಗ್ರಹಣ: ಯಾವ ರಾಶಿಗೆ ಶುಭ? ಯಾವುದಕ್ಕೆ ಅಶುಭ? ಪರಿಹಾರಕ್ಕೆ ಏನು‌ ಮಾಡಬೇಕು?
Lunar Eclipse 2023
Follow us
TV9 Web
| Updated By: Digi Tech Desk

Updated on:May 03, 2023 | 2:10 PM

ಇದೇ ತಿಂಗಳು (ಮೇ 5) 5ನೇ ತಾರೀಕು, ಶುಕ್ರವಾರ ಕೇತುಗ್ರಸ್ತ ಚಂದ್ರಗ್ರಹಣವು ಖಗೋಲದಲ್ಲಿ ಸಂಭವಿಸಲಿದೆ. ಇದು ಈ ವರ್ಷದ ಮೊದಲ ಚಂದ್ರಗ್ರಹಣ (Chandr Grahan 2023) ಹಾಗೂ ೨ನೇ ಗ್ರಹಣ. ಕಳೆದ ಚೈತ್ರ ಬಹುಳ ಅಮಾವಾಸ್ಯೆಯಂದು ರಾಹುಗ್ರಸ್ತ ಸೂರ್ಯಗ್ರಹಣವಾಗಿತ್ತು. ಆಗಿ ಕೇವಲ ಹದಿನೈದೇ ದಿನಕ್ಕೆ ಕೇತುಗ್ರಸ್ತ ಚಂದ್ರಗ್ರಹಣವು (Lunar Eclipse) ವೈಶಾಖ ಶುದ್ಧ ಪೂರ್ಣಿಮೆಯಂದು ಆಗಲಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಯುರೋಪ್, ಮಧ್ಯೋತ್ರ ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಕ್ ಖಂಡಗಳಲ್ಲಿ ಕಾಣುವುದು.

ಈ ಗ್ರಹಣವು ತುಲಾರಾಶಿಯಲ್ಲಿ ಮತ್ತು ಸ್ವಾತಿ ನಕ್ಷತ್ರದಲ್ಲಿ ಸ್ಪರ್ಶವಾಗಿ ವಿಶಾಖಾ‌ ನಕ್ಷತ್ರದಲ್ಲಿ ಮೋಕ್ಷವಾಗಲಿದೆ. ಹಾಗಾಗಿ ಎರಡೂ ನಕ್ಷತ್ರಗಳು ಇರಲಿವೆ.

ಇದರ ವಿಶೇಷತೆ ಕೇತುವು ಚಂದ್ರನನ್ನು ಆಚ್ಛಾದಿಸಿ, ಕಪ್ಪಗಾಗಿಸುವುದಿಲ್ಲ. ಬದಲಿಗೆ ಚಂದ್ರನ ಬಿಂಬವು ಸ್ವಲ್ಪ ಮಟ್ಟಿಗೆ ವಿವರ್ಣವಾಗುವುದು. ಅಂದರೆ ಕೆಂಬಣ್ಣವಾಗುವುದು. ಭೂಮಿಯ ನೆರಳು ಚಂದ್ರನ ಮೇಲೆ ಪೂರ್ಣವಾಗಿ ಬೀಳದೇ ಅದರ ಮೇಲ್ಮೈಯ್ಯನ್ನು ಹಾದು ಹೋಗುವ ಕಾರರ ಇದರ ಆಚರಣೆ ಅಷ್ಟಾಗಿ ಇರಲಾರದು. ಅದರೂ ಈ ಗ್ರಹಣದ ಪ್ರಭಾವವು ಇದ್ದೇ ಇರುತ್ತದೆ. ಯಾವ ರಾಶಿಯವರಿಗೆ ಏನು ಫಲ ಎಂಬುದನ್ನು ನೋಡೋಣ.

ದ್ವಾದಶ ರಾಶಿ ಭವಿಷ್ಯ ಇಲ್ಲಿದೆ

ಮೇಷ ತುಲಾದಿಂದ ಏಳನೇ ರಾಶಿಯಾಗಿದ್ದು ಶುಭಫಲವೆಂದೇ ಹೇಳಬಹುದು. ಚಿಂತಿತವಿಷಯಗಳು ಪೂರ್ಣವಾಗುವುದು. ವಿವಾಹಕ್ಕೆ ಸಂಬಂಧಿಸಿದ ತೊಂದರೆಗಳು ದೂರವಾಗಲಿದೆ.‌ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಆಗಲಿದೆ. ಗ್ರಹಣದ ಅನಂತರ ಯಂತ್ರಕ್ಕೆ ಸಂಬಂಧಿಸಿದ ಉದ್ಯಮಗಳು ಈ ರಾಶಿಯವರಿಗೆ ಕೈಗೂಡಲಿದೆ.

ವೃಷಭ ಇದು ಚಂದ್ರನಿಗೆ ಅಷ್ಟಮರಾಶಿಯಾಗಲಿದೆ. ಚಂದ್ರನಿಗೆ ಬಹಳ‌ ಪ್ರಿಯವಾದ ಹಾಗೂ ಹೆಚ್ಚು ಬಲಿಷ್ಠನಾಗಿ ಶುಭಫಲವನ್ನು ನೀಡು ರಾಶಿಯಾದರೂ ಷಷ್ಠಾಷ್ಟಮಸ್ಥಾನವಾಗಿರುವುದರಿಂದ‌ ಕಫಕ್ಕೆ ಸಂಬಂಧಿಸಿದ ರೋಗಗಳನ್ನು ಕೊಟ್ಟಾನು. ಅಪಮಾನಗಳು ಹೆಚ್ಚಾದಾವು. ಮನಃಕಾರಕನಾದ ಚಂದ್ರೆನೇ ತನ್ನ ಮನೆಯವರಿಗೆ ತೊಂದರೆ ಕೊಡುವ ಸ್ಥಿತಿ ಬಂದಿದೆ. ನಿಮ್ಮಂದ ಕುಟುಂಬಕ್ಕೆ ತೊಂದರೆಯಾಗಬಹುದು. ಗೋವಿಗೆ ಹುರುಳಿ ಮತ್ತು ಅಕ್ಕಿಯನ್ನು ಗೋಗ್ರಾಸವಾಗಿ ಕೊಟ್ಟುಬಿಡಿ. ಒಂದಿಷ್ಟು ದೋಷಗಳು ನಿವಾರಣೆಯಾದೀತು.

ಮಿಥುನ ಇದು ಚಂದ್ರನಿಗೆ ಒಂಭತ್ತನೆಯ ರಾಶಿ. ಶುಭವೆಂದೇ ಹೇಳಬೇಕು. ಭಾಗ್ಯಸ್ಥಾನವಾಗಿದ್ದು ಪೂರ್ವಪುಣ್ಯವನ್ನು ನೀಡುವನು. ಸತ್ಕರ್ಮದ ಫಲವನ್ನು ನೀವು ಉಣ್ಣುವಿರಿ. ಗುರು – ಹಿರಿಯರಲ್ಲಿ ಗೌರವವು ಹೆಚ್ಚಾಗಲಿದೆ. ಅಂದುಕೊಂಡಿದ್ದು ಆಗುವಂತಹ ಸ್ಥಿತಿ‌ ಬರಲಿದೆ. ದೈವಸಹಾಯ ನಿಮಗೆ ಸದಾ ಸಿಗಿವುದು. ಒಳ್ಳೆಯ ಕರ್ಮವನ್ನೇ ಮಾಡಲು ಪ್ರಯತ್ನಿಸಿ ಮತ್ತು ಯಶಸ್ವಿಯಾಗಿ.

ಕರ್ಕ ಇದು ಚಂದ್ರನ‌ ಸ್ವಕ್ಷೇತ್ರವಾಗಿದೆ. ಆದರೆ ಇದು ಚಂದ್ರನಿಗೆ ದಶಮಕ್ಷೇತ್ರವಾದ ಕಾರಣ ಮಿಶ್ರ ಫಲವಿದೆ. ಉದ್ಯೋಗದಲ್ಲಿ ಸ್ಥಾನಭ್ರಷ್ಟತೆ ಅಥವಾ ಕೈಬಿಡುವುದು ಆಗಬಹುದು. ಕೃಷಿಕರಿಗೆ ಒಳ್ಳೆಯ ಲಾಭ ಸಿಗುವಂಥದ್ದು. ನೀರಿನಿಂದ ಬದಕುಕನ್ನು ನಡೆಸುತ್ತಿದ್ದರೆ ನಿಮಗೆ ಅಷ್ಟು ಶುಭವಾಗದು. ಯಥಾಶಕ್ತಿ ದಕ್ಷಿಣೆಯನ್ನು ಸೇರಿಸಿ ಅಕ್ಕಿಯನ್ನು ಸಂಕಲ್ಪ ಮಾಡಿ ಶ್ರೇಷ್ಠರಿಗೆ ದಾನಮಾಡಿ

ಸಿಂಹ ಇದು ಚಂದ್ರನಿಗೆ ಏಕಾದಶಸ್ಥಾನವಾಗಿದೆ. ಅತ್ಯಂತ ಶುಭಸ್ಥಾನವೆಂದು ಇದನ್ನು ಕರೆಯುತ್ತಾರೆ. ಜೊತೆಗೆ ಈ ರಾಶಿಗೆ ಸೂರ್ಯನು ಅಧಿಪತಿಯಾದರಿಂದ ಅನ್ಯೋನ್ಯತೆ ಇದೆ. ಸೂರ್ಯ ಹಾಗೂ ಚಂದ್ರರನ್ನು ಪತಿ‌ ಹಾಗೂ ಪತ್ನಿ ಎಂದು ಕರೆಯುತ್ತಾರೆ. ಹಾಗಾಗಿ ಇಬ್ಬರ ನಡುವೆ ಬಾಂಧವ್ಯವು ಚೆನ್ನಾಗಿ ಇರಲಿದೆ. ಅಧಿಕಾರ ಪ್ರಾಪ್ತಿ, ಧನಾಗಮನವು ಅಧಿಕವಾಗಲಿದೆ. ಮಾಡಬೇಕೆಂದು ಅಂದುಕೊಂಡಿರುವ ಕೆಲಸಕ್ಕೆ ಸಹಾಯವು ತಾನಾಗಿಯೇ ಒದಗಿಬರಲಿದೆ.

ಕನ್ಯಾ ಇದು ಚಂದ್ರನಿಂದ ದ್ವಾದಶದಲ್ಲಿರುವ ರಾಶಿಯಾಗಿದೆ. ಈ ರಾಶಿಗೆ ಗ್ರಹಣದಿಂದ ಅಶುಭಫಲವನ್ನೇ ಹೇಳಿದೆ. ಧನನಷ್ಟವಾಗಬಹದು. ಬಂಧುಗಳ ವಿಯೋಗ, ಅಧಿಕಾರಿಗಳಿಂದ ತಿಂದರೆ, ಮಾನಸಿಕವಾಗಿ ಕುಗ್ಗುವುದು, ವಾಹನದಿಂದ‌ ನಷ್ಟ, ಭೂಮಿಯ ವಿಚಾರದಲ್ಲಿ ಕಲಹ, ಮಿತ್ರರನ್ನು ಶತ್ರುಗಳನ್ನಾಗಿ ಮಾಡಿಕೊಳ್ಳುವುದು, ಎಲ್ಲ‌ ಕಾರ್ಯಗಳಲ್ಲಿಯೂ ಹಿನ್ನಡೆಯಾಗುವ ಸಾಧ್ಯತೆ ಇದೆ. ಹುರಳಿ ಹಾಗೂ ಅಕ್ಕಿಯನ್ನು ಗ್ರಹಣದೋಷವು ನಿವಾರಣೆಯಾಗಲಿ ಎಂಬ ಸಂಕಲ್ಪ ಮಾಡಿ ಸತ್ಪಾತ್ರರಿಗೆ ದಾನ ಮಾಡಿ.

ತುಲಾ ಇದೇ ರಾಶಿಯಲ್ಲಿ ಗ್ರಹಣವು ಆಗುವುದರಿಂದ ಮತ್ತು ಸ್ಪರ್ಶ ಹಾಗು ಮೋಕ್ಷಗಳೂ ಇದೇ ರಾಶಿಯ ಎರಡು ನಕ್ಷತ್ರದಲ್ಲಿ ಆಗುಲಿದ್ದು ಅಶುಭವು ಅಧಿಕಾಗಿ ಇರಲಿದೆ. ಮನಸ್ಸು ಹಾಗೂ ದೇಹಕ್ಕೂ ತೊಂದರೆಗಳು ಆಗಬಹುದು. ಕೈಗೆ ಸಿಕ್ಕಿದ್ದು ಅನುಭವಿಸಲಾಗದೇ ತಪ್ಪಿ ಹೋದೀತು. ವ್ಯರ್ಥ ಅಲೆದಾಟವನ್ನು ಮಾಡುವಿರಿ. ಎಲ್ಲವೂ ನಿನಗೆ‌ ಮರಳುಗಾಡಿನ ಮರೀಚಿಕೆಯಂತೆ ಅನ್ನಿಸಬಹುದು. ಸ್ತ್ರೀಯರಿಗೆ ಅಧಿಕ ತೊಂದರೆಗಳು ಆಗಲಿವೆ. ಗ್ರಹಣದೋಷದ ಶಾಂತಿ, ಪೂಜೆ, ದಾನಗಳನ್ನು ಕೊಡುವುದು ಉತ್ತಮ. ಗ್ರಹಣ ಕಾಲದಲ್ಲಿ ಇಷ್ಟ ದೇವರ, ಕುಲದೇವರ ಸ್ಮರಣೆಯನ್ನು ಮಾಡಿ.

ವೃಶ್ಚಿಕ ಇದು ಚಂದ್ರನಿಗೆ ದ್ವಿತೀಯರಾಶಿಯಾಗಿದ್ದು ಶುಭವಲ್ಲ. ಪೂರ್ವಾರ್ಜಿತ ಸಂಪತ್ತು ನಾಶವಾಶವಾಗುವ ಸಾಧ್ಯತೆ ಇದೆ. ಮಾತುಗಾರಿಕೆಯನ್ನೇ ವೃತ್ತಿ ಮಾಡಿಕೊಂಡವರಿಗೆ ಅಥವಾ ಶಿಕ್ಷಕರೂ ಮೊದಲಾದವರಿಗೆ ತೊಂದರೆಯಾದೀತು. ನಿಮ್ಮ ಮಾತಗಳನ್ನು ಯಾರೂ ಪಾಲಿಸರು. ಕುಟುಂಬದಲ್ಲಿ ಕಲಹಗಳು, ವಿವಾದಗಳು ಉಂಟಾಗಬಹುದು. ಮಾತನಲ್ಲಿ ಜಾಗರೂಕರಾಗಿರಿ. ಕೇತು ಹಾಗೂ ಚಂದ್ರರಿಗೆ ಹೇಳಿದ ಹುರುಳಿ ಹಾಗೂ ಅಕ್ಕಿಯನ್ನು ದೋಷನಿವಾರಣೆ ದಾನ‌ ಮಾಡಿ.

ಧನು ಇದು ಚಂದ್ರನಿಂದ ತೃತೀಯರಾಶಿಯಾಗಲಿದೆ. ಇದು ಮಿಶ್ರಫಲವನ್ನು ಕೊಡುತ್ತದೆ. ಮಾಡಬೇಕಾದ ಕೆಲಸಕ್ಕೆ ಅನುಕೂಲತೆಗಳು ಇದ್ದರೂ ನಿಮಗೆ ಧೈರ್ಯದ ಕೊರತೆ ಇರಲಿದೆ. ಪಾಲುದಾರಿಕೆಯಲ್ಲಿ ನಂಬಿಕೆ ಕಡಿಮೆಯಾಗಲಿದೆ. ಹೆಚ್ಚು ಶ್ರಮವನ್ನು ವಹಿಸಬೇಕಾಗಬಹುದು. ಸ್ವತಂತ್ರವಾಗಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗದು.

ಮಕರ ಈ ರಾಶಿಯು ಚಂದ್ರನಿಂದ ತೃತೀಯದಲ್ಲಿದ್ದು ಮಿಶ್ರಫಲವು ಗ್ರಹದಿಂದ ಸಿಗಲಿದೆ. ಈಗಾಗಲೇ ಆಯ್ದುಕೊಂಡ ವೃತ್ತಿಜೀವನದಲ್ಲಿ ಅವಕಾಶಗಳು ಬರಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಇದು ನಿಮ್ಮ ಚರವಾದ ಸಂಪತ್ತನ್ನು ಹೆಚ್ಚಿಸುವುದು. ಬರಬೇಕಾದ ಹಣವನ್ನು ಪಡೆಯುವಿರಿ. ಗೃಹನಿರ್ಮಾಣವು ವೇಗ ಪಡೆದುಕೊಳ್ಳುವುದು. ಬಂಧುಗಳ ಸಹಕಾರವು ನಿಮಗೆ ಸಿಗುವುದು.

ಕುಂಭ ಗ್ರಹಣರಾಶಿಯಿಂದ ಪಂಚಮಗೃಹವಾಗಿದೆ. ಇದೂ ಶುಭಗೃಹವೇ. ಸದ್ಯ ಇಲ್ಲಿ ಶನಿಯು ಉಪಸ್ಥಿತನಿದ್ದಾನೆ. ಸೇವೆಯನ್ನು ಮಾಡುವವರಿಗೆ ಹೆಚ್ಚು ಲಾಭವಾಗಲಿದೆ. ತೈಲವ್ಯಾಪಾರಿಗಳು ಹೆಚ್ಚು ಸಂಪತ್ತನ್ನು ಗಳಿಸುವರು. ನಿಮ್ಮ ಸಮರ್ಥ್ಯವು ಬೆಳಕಿಗೆ ಬರಲಿದೆ. ಮಕ್ಕಳ ಪ್ರೀತಿ, ಧನಸಹಾಯವನ್ನು ನೀವು ಪಡೆಯಬಹುದದಾಗಿದೆ. ಅಧಿಕ ಸಂಪತ್ತೂ ಬಂದು ಸೇರಬಹುದು ನಿಮ್ಮನ್ನು.

ಮೀನ ಗ್ರಹಣ ರಾಶಿಯಿಂದ ಷಷ್ಠಸ್ಥಾನದ ರಾಶಿಯಾಗಿದೆ. ಇದು ಅಶುಭರಾಶಿಯಾಗಲಿದೆ. ಶತ್ರು ಕಾಟವು ಅಧಿಕವಾಗಬಹುದು. ಅಥವಾ ಹಿತಶತ್ರುಗಳಿಂದ ಕೆಲಸವು ಹಿನ್ನಡೆ ಅಥವಾ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಆರೋಗ್ಯದ ಮೇಲೆ ಹೆಚ್ಚಿನ ಗಮನ ಅವಶ್ಯಕ. ಹುಂಬುತನದಿಂದ ಏನನ್ನಾದರೂ ಮಾಡಲು ಹೋದೀರಿ. ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವಿರಿ. ಜಾಗರೂಕತೆ ಬಹಳ ಮುಖ್ಯವಾಗಿದೆ.

ಇವಿಷ್ಟು ಚಂದ್ರಗ್ರಹಣದಿಂದ ದ್ವಾದಶರಾಶಿಯವರಿಗೆ ಉಂಟಾಗುವ ಶುಭಾಶುಭಫಲಗಳು. ಈ ಎಲ್ಲ ರಾಶಿಯವರೂ ಗ್ರಹಣದ ಆಚರಣೆಯನ್ನು ಮಾಡಬೇಕು. ಶುಭಫಲದವರಿಗೆ ಇಲ್ಲ ಎಂಬ ಮಾತಿಲ್ಲ. ‌ಆಚರಣೆಯ ಶುಭ, ಅಶುಭ, ಮಿಶ್ರ ಈ ಇಲ್ಲರಿಗೂ ಸಮಾನ.

ಲೇಖನ: ಲೋಹಿತ ಶರ್ಮಾ

ಮತ್ತಷ್ಟು ಅಧ್ಯಾತ್ಮ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:09 pm, Wed, 3 May 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್