ನರಸಿಂಹ ಜಯಂತಿ ಯಾವಾಗ? ಮಹತ್ವ, ಪೂಜಾ ವಿಧಾನ, ಶುಭ ಮುಹೂರ್ತ ಮತ್ತು ಆಚರಣೆಯ ಬಗ್ಗೆ ಇಲ್ಲಿದೆ ಮಾಹಿತಿ

Narasimha Jayanti 2023: ಈ ಬಾರಿಯ ನರಸಿಂಹ ಜಯಂತಿಯ ಶುಭ ಮುಹೂರ್ತ, ಯಾವ ರೀತಿಯಲ್ಲಿ ಪೂಜೆ ಮಾಡಬೇಕು? ವಿಧಿ - ವಿಧಾನಗಳಾವುವು? ಯಾವ ನರಸಿಂಹ ಮಂತ್ರವನ್ನು ಪಠಿಸಬೇಕು..? ಈ ಬಗ್ಗೆ ಇಲ್ಲಿದೆ ಮಾಹಿತಿ.

ನರಸಿಂಹ ಜಯಂತಿ ಯಾವಾಗ? ಮಹತ್ವ, ಪೂಜಾ ವಿಧಾನ, ಶುಭ ಮುಹೂರ್ತ ಮತ್ತು ಆಚರಣೆಯ ಬಗ್ಗೆ ಇಲ್ಲಿದೆ ಮಾಹಿತಿ
Narasimha Swamy
Follow us
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk

Updated on: May 02, 2023 | 2:25 PM

ಹಿಂದೂ ಕ್ಯಾಲೆಂಡರ್ ಪ್ರಕಾರ, ನರಸಿಂಹ ಜಯಂತಿಯನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ಬಾರಿ ಮೇ 4ರಂದು ಗುರುವಾರ ಆಚರಿಸಲಾಗುತ್ತದೆ. ಈ ದಿನವನ್ನು ಭಗವಾನ್ ನರಸಿಂಹನ ಜನ್ಮದಿನವೆಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆ ಮತ್ತು ಪುರಾಣಗಳ ಪ್ರಕಾರ, ಈ ದಿನದಂದು ಭಗವಾನ್ ಶ್ರೀ ಹರಿ ವಿಷ್ಣುವು ಭಕ್ತ ಪ್ರಹ್ಲಾದನನ್ನು ರಕ್ಷಿಸಲು ಉಗ್ರ ನರಸಿಂಹನ ರೂಪ ತಾಳಿ ತನ್ನ ಪರಮ ಭಕ್ತ ಪ್ರಹ್ಲಾದನನ್ನು ರಕ್ಷಿಸಿದನು. ಅದಕ್ಕಾಗಿಯೇ ಈ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಅಲ್ಲದೆ ನರಸಿಂಹ ಭಗವಾನ್ ವಿಷ್ಣುವಿನ ದಶಾವತಾರದ 4 ನೇ ಅವತಾರವಾಗಿದ್ದು ಅರ್ಧ ಮನುಷ್ಯ ಮತ್ತು ಅರ್ಧ ಸಿಂಹದ ರೂಪದಲ್ಲಿದ್ದಾನೆ.

ನರಸಿಂಹ ಜಯಂತಿ ಇತಿಹಾಸ:

ನಂಬಿಕೆಗಳ ಪ್ರಕಾರ, ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ದೇವಾಲಯವಿದ್ದು, ಇಲ್ಲಿ ನರಸಿಂಹನ ಅವತಾರ ಪ್ರಕಟಗೊಂಡಿದೆ ಎಂದು ನಂಬಲಾಗಿದೆ. ಇಲ್ಲಿ ನರಸಿಂಹ ದೇವರ ದರ್ಶನವಾದ ಕಂಬ ಇಂದಿಗೂ ಇದೆ. ಭಗವಾನ್ ನರಸಿಂಹನು ಬನ್ಮಂಖಿಯ ಸಿಕ್ಲಿಗಢ ಧರಹರಾದಲ್ಲಿ ಹಿರಣ್ಯಕಶ್ಯಪುವನ್ನು ಕೊಂದನೆಂದು ನಂಬಲಾಗಿದೆ. ಪ್ರತಿ ವರ್ಷವೂ ಇಲ್ಲಿ ಹೋಲಿಕಾ ದಹನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇನ್ನೊಂದು ಕಥೆಯ ಪ್ರಕಾರ, ಭಗವಾನ್ ನರಸಿಂಹನ ಅವತಾರ ಸ್ಥಳವು ಉತ್ತರ ಪ್ರದೇಶದ ಪ್ರಸಿದ್ಧ ಹರದೋಯಿ ಜಿಲ್ಲೆಯಾಗಿದೆ. ಪೌರಾಣಿಕ ಕಾಲದಲ್ಲಿ, ಹಿರಣ್ಯಕಶಿಪು ಇಲ್ಲಿ ಆಳ್ವಿಕೆ ನಡೆಸುತ್ತಿದ್ದನು ಅಲ್ಲದೆ ತನ್ನ ನಗರದಲ್ಲಿ ವಿಷ್ಣುವಿನ ನಾಮವನ್ನು ಪಠಿಸಲು ಯಾರಿಗೂ ಅವಕಾಶ ನೀಡಲಿಲ್ಲ. ಅದಕ್ಕಾಗಿಯೇ ಈ ಸ್ಥಳಕ್ಕೆ ಮೊದಲು ಹರಿದ್ರೋಹಿ ಎಂದು ಕರೆಯಲಾಗುತ್ತಿತ್ತು. ಇದು ನರಸಿಂಹ ದೇವರ ದರ್ಶನವಾದ ಬಳಿಕ ಈ ಸ್ಥಳವು ಪ್ರಹ್ಲಾದ ಕುಂಡ ಎಂದು ಜನಪ್ರಿಯವಾಗಿದೆ.

ನರಸಿಂಹ ಜಯಂತಿ 2023 ದಿನಾಂಕ ಮತ್ತು ತಿಥಿ

ವೈಶಾಖ ಚತುರ್ದಶಿ ಎಂದು ಕರೆಯಲ್ಪಡುವ ಶುಕ್ಲ ಪಕ್ಷದ 14 ನೇ ದಿನದಂದು ಅಂದರೆ ಹಬ್ಬವನ್ನು ಮೇ 4 ರಂದು ಆಚರಿಸಲಾಗುತ್ತದೆ. ನರಸಿಂಹ ಜಯಂತಿಯನ್ನು ಆಚರಿಸುವ ಸಮಯ ಈ ಕೆಳಗಿನಂತಿದೆ:

ನರಸಿಂಹ ಜಯಂತಿ ಸಂಕಲ್ಪ ಸಮಯ: 12:04 PM ರಿಂದ 03:03 PM

ಚತುರ್ದಶಿ ತಿಥಿ ಆರಂಭ: ಮೇ 3, 2023 ರಂದು ಮಧ್ಯಾಹ್ನ 12:19 ಚತುರ್ದಶಿ ತಿಥಿ ಕೊನೆಗೊಳ್ಳುವುದು: ಮೇ 4, 2023 ರಂದು ಮಧ್ಯಾಹ್ನ 12:14 (ಕೆಲವು ಕಡೆಗಳಲ್ಲಿ ತಿಥಿ ಆರಂಭವಾಗುವ ಸಮಯ ಇಟ್ಟುಕೊಂಡು ಮೇ 3ರಂದು ಹಬ್ಬವನ್ನು ಆಚರಿಸುತ್ತಾರೆ.)

ನರಸಿಂಹ ಜಯಂತಿ ಪೂಜೆ ವಿಧಾನ ಹೇಗೆ?

ನರಸಿಂಹ ಜಯಂತಿಯ ಉದ್ದೇಶ ಅಧರ್ಮವನ್ನು ತಿರಸ್ಕರಿಸಿ ಧರ್ಮವನ್ನು ಅನುಸರಿಸುವುದಾಗಿದೆ. ಈ ದಿನದಂದು, ಉಪವಾಸವನ್ನು ಅನುಸರಿಸುವ ಮತ್ತು ಭಗವಂತನಿಗೆ ಪ್ರಾಮಾಣಿಕವಾಗಿ ಪ್ರಾರ್ಥನೆ ಸಲ್ಲಿಸುವವರಿಗೆ ಅವರ ಇಷ್ಟಾರ್ಥಗಳು ಈಡೇರುತ್ತವೆ. ಈ ದಿನ ಬೆಳಗ್ಗೆ ಬೇಗನೇ ಬ್ರಹ್ಮ ಮುಹೂರ್ತದಲ್ಲಿ ಎದ್ದು ಮನೆಯನ್ನು ಸ್ವಚ್ಛಗೊಳಿಸಬೇಕು. ಮನೆಯಲ್ಲಿಯೇ ನರಸಿಂಹ ದೇವರ ಫೋಟೋ ಅಥವಾ ವಿಗ್ರಹಗಳಿಗೆ ಪೂಜೆ ಮಾಡಬಹುದು. ಇಲ್ಲವಾದಲ್ಲಿ ಹತ್ತಿರದ ನರಸಿಂಹ ದೇವಾಲಯಗಳಿಗೆ ಭೇಟಿ ನೀಡಬಹುದು. ನರಸಿಂಹ ಜಯಂತಿ ದಿನದಂದು ಉಪವಾಸ ವ್ರತವನ್ನು ಆಚರಿಸುವ ವ್ಯಕ್ತಿಯು ತನ್ನೆಲ್ಲಾ ಲೌಕಿಕ ದುಃಖಗಳಿಂದ ಮುಕ್ತನಾಗಿ ಆರ್ಥಿಕ ಸ್ಥಿತಿಯಲ್ಲಿ ಏರುಗತಿ ಹೊಂದುತ್ತಾನೆ ಎನ್ನುವ ನಂಬಿಕೆಯಿದೆ.

ನರಸಿಂಹನ ಕೃಪೆಗೆ ಯಾವ ಮಂತ್ರವನ್ನು ಪಠಿಸಬೇಕು?

ನಿಮಗೆ ತಿಳಿದಿರುವ ಯಾವುದಾದರೂ ವಿಷ್ಣುವಿನ ಮಂತ್ರವನ್ನು ಜಪಿಸಬಹುದು. ಇಲ್ಲವಾದಲ್ಲಿ ಕೆಳಗೆ ನೀಡಿರುವ ಮಂತ್ರವನ್ನು ಪಠಿಸಬಹುದು. – ‘ಓಂ ಶ್ರೀ ಲಕ್ಷ್ಮೀನರಸಿಂಹಾಯ ನಮಃ’ – ‘ಓಂ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ| ನರಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ||’

– ನರಸಿಂಹ ಬೀಜ ಮಂತ್ರ: ‘ಶ್ರೌಂ’ ಅಥವಾ ಕ್ಷ್ರೌಂ

– ‘ಧ್ಯಾಯೇ ನರಸಿಂಹಂ ತರುಣಾರ್ಕನೇತ್ರಂ ಸೀತಾಂಬುಜಾತಂ ಜ್ವಲಿತಾಗ್ರಿವಕ್ತ್ರಂ|’ ಅನಾದಿಮಧ್ಯಾಂತಮಜಂ ಪುರಾಣಂ ಪರಾತ್ಪರೇಶಂ ಜಗತಾಂ ನಿಧಾನಂ||’

– ‘ನೃಮ ನೃಮ ನೃಮ ನರ ಸಿಂಹಾಯ ನಮಃ|

ಮತ್ತಷ್ಟು ಅಧ್ಯಾತ್ಮ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Video: ಮಹಿಳೆಯ ಜಡೆ ಹಿಡಿದು ಎಳೆದೊಯ್ದ ಪೊಲೀಸ್​ ಅಧಿಕಾರಿ
Video: ಮಹಿಳೆಯ ಜಡೆ ಹಿಡಿದು ಎಳೆದೊಯ್ದ ಪೊಲೀಸ್​ ಅಧಿಕಾರಿ
ಬೇರೆ ಖಾತೆ ನೀಡಿದರೂ ಚಿಂತೆಯಿಲ್ಲ, ನಿಷ್ಠೆಯಿಂದ ಕೆಲಸ ಮಾಡುವೆ: ಪರಮೇಶ್ವರ್
ಬೇರೆ ಖಾತೆ ನೀಡಿದರೂ ಚಿಂತೆಯಿಲ್ಲ, ನಿಷ್ಠೆಯಿಂದ ಕೆಲಸ ಮಾಡುವೆ: ಪರಮೇಶ್ವರ್
ಕೇರಳದ ಸೀರೆ ತೊಟ್ಟು, ಸಂವಿಧಾನದ ಪುಸ್ತಕ ಹಿಡಿದು ಪ್ರಿಯಾಂಕಾ ಪ್ರಮಾಣವಚನ
ಕೇರಳದ ಸೀರೆ ತೊಟ್ಟು, ಸಂವಿಧಾನದ ಪುಸ್ತಕ ಹಿಡಿದು ಪ್ರಿಯಾಂಕಾ ಪ್ರಮಾಣವಚನ
ಅರಣ್ಯ ಇಲಾಖೆ ಸಿಬ್ಬಂದಿಯ ನಿಷ್ಕ್ರಿಯತೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಅರಣ್ಯ ಇಲಾಖೆ ಸಿಬ್ಬಂದಿಯ ನಿಷ್ಕ್ರಿಯತೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಖಾಲಿಯಿದ್ದಾಗೆಲ್ಲ ಇಬ್ರಾಹಿಂ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ: ಮಂಜುನಾಥ
ಖಾಲಿಯಿದ್ದಾಗೆಲ್ಲ ಇಬ್ರಾಹಿಂ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ: ಮಂಜುನಾಥ
‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ
‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ