AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭೀಕರ ಅಪಘಾತ: ಓರ್ವ ಸಾವು, ಇಬ್ಬರಿಗೆ ಗಾಯ

Electronic City Flyover Accident: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ರಾತ್ರಿ 11.20ರ ಸಮಯದಲ್ಲಿ ಬೊಲೆರೊ ಪಿಕಪ್ ವಾಹನಕ್ಕೆ ಹಿಂಬದಿಯಿಂದ ಕ್ಯಾಂಟರ್ ಗುದ್ದಿದ್ದು ಅಪಘಾತ ಸಂಭವಿಸಿದೆ. ಬೊಲೆರೊ ಪಿಕಪ್ ವಾಹನದಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಬೊಲೆರೊ ಚಾಲಕ ಹರೀಶ್, ಕ್ಯಾಂಟರ್ ಚಾಲಕ ಮನ್ಸೂರ್​​ಗೆ ಗಾಯಗಳಾಗಿವೆ.

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭೀಕರ ಅಪಘಾತ: ಓರ್ವ ಸಾವು, ಇಬ್ಬರಿಗೆ ಗಾಯ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭೀಕರ ಅಪಘಾತ
ರಾಚಪ್ಪಾಜಿ ನಾಯ್ಕ್
| Edited By: |

Updated on: Aug 22, 2023 | 6:47 AM

Share

ಬೆಂಗಳೂರು, ಆ.22: ನಗರದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್(Electronic City Flyover) ಮೇಲೆ ಭೀಕರ ಅಪಘಾತ(Accident) ಸಂಭವಿಸಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ರಾತ್ರಿ 11.20ರ ಸಮಯದಲ್ಲಿ ಬೊಲೆರೊ ಪಿಕಪ್ ವಾಹನಕ್ಕೆ ಹಿಂಬದಿಯಿಂದ ಕ್ಯಾಂಟರ್ ಗುದ್ದಿದ್ದು ಅಪಘಾತ ಸಂಭವಿಸಿದೆ. ಬೊಲೆರೊ ಪಿಕಪ್ ವಾಹನದಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಬೊಲೆರೊ ಚಾಲಕ ಹರೀಶ್, ಕ್ಯಾಂಟರ್ ಚಾಲಕ ಮನ್ಸೂರ್​​ಗೆ ಗಾಯಗಳಾಗಿವೆ. ಇಬ್ಬರು ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೊಲೆರೊ ಪಿಕಪ್ ವಾಹನ ಕೆಟ್ಟು ನಿಂತಿತ್ತು. ಹೀಗಾಗಿ ಟೋಯಿಂಗ್ ವಾಹನ ಅದನ್ನು ಟೋ ಮಾಡಿಕೊಂಡು ತೆರಳ್ತಿತ್ತು. ಈ ವೇಳೆ ಕ್ಯಾಂಟರ್ ಹಿಂಬದಿಯಿಂದ ಬಂದು ಗುದ್ದಿದೆ. ಕ್ಯಾಂಟರ್​ನಲ್ಲೇ ಸಿಲುಕಿ ಚಾಲಕ ಮನ್ಸೂರ್ ಒದ್ದಾಡಿದ್ದಾರೆ. ಸದ್ಯ ಕ್ರೇನ್ ಸಹಾಯದಿಂದ ಗಾಯಾಳು ರಕ್ಷಣೆ ಮಾಡಲಾಗಿದೆ. ಇನ್ನು ರಾತ್ರಿ ನಡೆದ ಈ ಘಟನೆಯಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪೊಲೀಸರು ಅಪಘಾತ ವಾಹನ ತೆರವು ಮಾಡಿ ಅನುವು ಮಾಡಿಕೊಡಲಾಯಿತು. ಸುಮಾರು ಒಂದೂವರೆ ಗಂಟೆ ವಾಹನಗಳು ನಿಂತಲ್ಲೇ ನಿಂತಿದ್ದವು.

ಇದನ್ನೂ ಓದಿ:ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ದಾನ: ದುಃಖದ ನಡುವೆ ಕುಟುಂಬಸ್ಥರ ಮಾನವೀಯತೆ