ಮಹಿಳೆ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಮಹಿಳೆಗೆ ಕಳೆದ ನಾಲ್ಕು ವರ್ಷದಿಂದ ಪರಿಚಯವಿದ್ದ ಆರೋಪಿ ಅಹಮದ್

| Updated By: ವಿವೇಕ ಬಿರಾದಾರ

Updated on: Jun 10, 2022 | 4:26 PM

ಮಹಿಳೆ ಮೇಲೆ ಆಸ್ಯಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಳೆದ ಒಂದೂವರೆ ವರ್ಷದ ಹಿಂದೆ ಮಹಿಳೆಗೆ ಡಿವೋರ್ಸ್ ಆಗಿತ್ತು. ಆರೋಪಿ ಅಹಮದ್ ಮತ್ತು ಮಹಿಳೆ  ಕಳೆದ ನಾಲ್ಕು ವರ್ಷಗಳಿಂದ ಪರಿಚಯಸ್ತರು.

ಮಹಿಳೆ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಮಹಿಳೆಗೆ ಕಳೆದ ನಾಲ್ಕು ವರ್ಷದಿಂದ ಪರಿಚಯವಿದ್ದ ಆರೋಪಿ ಅಹಮದ್
ಆ್ಯಸಿಡ್ ದಾಳಿ ನಡೆಸಿದ ಆರೋಪಿ ಅಹ್ಮದ್​, ಆ್ಯಸಿಡ್ ದಾಳಿ ನಡೆದ ಜಾಗ
Follow us on

ಬೆಂಗಳೂರು: ಮಹಿಳೆ ಮೇಲೆ ಆ್ಯಸಿಡ್ (Acid) ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಳೆದ ಒಂದೂವರೆ ವರ್ಷದ ಹಿಂದೆ ಮಹಿಳೆಗೆ ಡಿವೋರ್ಸ್ ಆಗಿತ್ತು. ಸಂತ್ರಸ್ತೆ ಮೂವರು ಮಕ್ಕಳ ತಾಯಿ‌‌ಯಾಗಿದ್ದಾರೆ. ಆರೋಪಿ ಅಹಮದ್ ಆಕೆಯನ್ನು ಮದುವೆಯಾಗು ಎಂದು ಪಿಡಿಸುತ್ತಿದ್ದನು. ಆದರೆ ಸಂತ್ರಸ್ತೆ ಮದುವೆಗೆ ನಿರಾಕರಿಸಿದ್ದಳು. ಆರೋಪಿ ಅಹಮದ್ ಮತ್ತು ಮಹಿಳೆ  ಕಳೆದ ನಾಲ್ಕು ವರ್ಷಗಳಿಂದ ಪರಿಚಯಸ್ತರು. ಮಹಿಳೆಗೆ ಸುಮಾರು 32 ವರ್ಷ ಇದ್ದು, ಆರೋಪಿ ಅಹಮದ್ ಗೆ 36 ವರ್ಷ ವಯಸ್ಸಾಗಿದೆ. ಸದ್ಯ ವಿಕ್ಟೋರಿಯಾ (Victoria Hospital) ಆಸ್ಪತ್ರೆಯ ಸುಟ್ಟಗಾಯಗಳ ಕೇಂದ್ರದಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತದೆ.

ಈ ಇಬ್ಬರು ಊದು ಬತ್ತಿ ಫ್ಯಾಕ್ಟರಿ ಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಮಹಿಳೆ ಮೇಲೆ ಬಾತ್ ರೂಮ್ ಕ್ಲೀನ್ ಮಾಡೋ ಆಸ್ಯಿಡ್ ಹಾಕಿರೋ ಶಂಕೆ ವ್ಯಕ್ತವಾಗಿದೆ. ಸದ್ಯ ಆಸ್ಯಿಡ್​ನಿಂದ ಕಣ್ಣು ಮತ್ತು ಬಾಯಿಗೆ ಗಾಯವಾಗಿದ್ದರಿಂದ ವೈದ್ಯರು ಚಿಕಿತ್ಸೆ ಮುಂದುವರೆಸುತ್ತಿದ್ದಾರೆ. ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದು ಆಸ್ಪತ್ರೆ ಸಿಬ್ಬಂದಿಗಳು ಹೇಳಿದ್ದಾರೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಮತ್ತೆ ಮಹಿಳೆ ಮೇಲೆ ಆ್ಯಸಿಡ್ ದಾಳಿ! ಮದುವೆಯಾಗಲು ಒಪ್ಪದಿದ್ದಕ್ಕೆ ಕೃತ್ಯ ಎಸಗಿದ ಆರೋಪಿ

ಆಸಿಡ್​ ಪ್ರಕರಣ ನಡೆದಿದ್ದು ಹೇಗೆ?

ಇಂದು (ಜೂನ್​​ 10) ರಂದು ಬೆಳಿಗ್ಗೆ 9-45ರ ಸುಮಾರಿಗೆ ಜಯ ಪ್ರಕಾಶ ನಗರ ಮೆಟ್ರೋ ಸ್ಟೇಷನ್ ಬಳಿ ಮಹಿಳೆ ಮೇಲೆ ಆಸ್ಯಿಡ್ ದಾಳಿ ನಡೆದಿದೆ. ಬೆಳಿಗ್ಗೆಘಟನಾ ಸ್ಥಳಕ್ಕೆ ಎಸಿಪಿ ಶಿವಕುಮಾರ್, ಡಿಸಿಪಿ ಹರೀಶ್ ಪಾಂಡೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಠಾಣೇ ಪೊಲೀಸರು ಅರೋಪಿಯನ್ನು ವಶಕ್ಕೆ ಪಡೆದಿದ್ಧಾರೆ.

ದಾಳಿಗೆ ಒಳಗಾದ ಮಹಿಳೆಗೆ ಮದುವೆ ಆಗಿ ಮೂರು ಮಗು ಇದೆ. ಹೀಗಿದ್ದರೂ ಅರೋಪಿ‌ ಮಹಿಳೆಯ ಪ್ರೀತಿಸುತ್ತಿದ್ದ. ಜೊತೆಗೆ ಮದುವೆ ಆಗುವಂತೆ ಪೀಡಿಸುತ್ತಿದ್ದ. ಅರೋಪಿ ಮತ್ತು ನೊಂದ ಮಹಿಳೆ ಇಬ್ಬರೂ ಅಗರಬತ್ತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಗೋರಿಪಾಳ್ಯದ ನಿವಾಸಿಯಾಗಿರುವ ಅರೋಪಿ ಅಹ್ಮದ್, ಮಹಿಳೆ ಕೆಎಸ್ ಲೇಔಟ್​ನಿಂದ ಜೆಪಿ ನಗರ ಕಡೆಗೆ ತೆರಳುತಿದ್ದಾಗ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ರಾಯಚೂರು: ಕಲುಷಿತ ನೀರು ಕುಡಿದು ಐದು ಜನರ ಸಾವು; ನಗರಸಭೆ ವಿರುದ್ಧ ಹಿಡಿ ಶಾಪ ಹಾಕುತ್ತಿರುವ ಜನರು

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಬೆಂಗಳೂರಿನಲ್ಲಿ ಮತ್ತೊಂದು ಆ್ಯಸಿಡ್ ದಾಳಿ ಆಗಿದೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಆ್ಯಸಿಡ್ ಹಾಕಿದ ಆರೋಪಿಗೆ ಕಠಿಣ ಶಿಕ್ಷೆ ಆಗುತ್ತದೆ. ಈಗಾಗಲೇ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇವೆ ಎಂದರು.

ಬೆಳಿಗ್ಗೆ ಆ್ಯಸಿಡ್ ಖರೀದಿಸಿದ್ದ ಆರೋಪಿ: ಇಂದು ಬೆಳಿಗ್ಗೆ ಇಬ್ಬರು ಕೆಲಸಕ್ಕೆ ಫ್ಯಾಕ್ಟರಿಗೆ ಹೋಗಿದ್ದರು. ಫ್ಯಾಕ್ಟರಿಗೆ ಹೋಗುವಾಗ ಅರೋಪಿ ಅಂಗಡಿಯಲ್ಲಿ ಆ್ಯಸಿಡ್ ಖರೀದಿಸಿದ್ದನು. ಅಂಗಡಿಯಲ್ಲಿ ಬಾತ್​ ರೂಮ್​ ತೊಳೆಯಲು ಆ್ಯಸಿಡ್ ಬೇಕು ಎಂದಿದ್ದಾನೆ. ಬಳಿಕ ಫ್ಯಾಕ್ಟರಿಗೆ ಬಂದ ಮೇಲೆ ಮಾತನಾಡಬೇಕು ಎಂದು ಹೇಳಿ ಹೊರಗೆ ಬಂದಿದ್ದಾರೆ. ಫ್ಯಾಕ್ಟರಿಯಲ್ಲಿ ಕೆಲಸ ಶುರು ಮಾಡುವ ಮೊದಲೇ ಹೊರಗೆ ಬಂದಿದ್ದಾರೆ. ದಾರಿಯಲ್ಲಿ ಬರುವಾಗಲೂ ಅರೋಪಿ ಮಾತನಾಡುತಿದ್ದ. ಮದುವೆ ಬಗ್ಗೆ ಮಾತನಾಡಿದ್ದಾನೆ.

ಬೆಳಗ್ಗೆ ಒಂಬತ್ತು ಮೂವತ್ತರ ಸಮಯಕ್ಕೆ ಇಬ್ಬರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕೊನೆಯದಾಗಿ ಹೇಳು ನನ್ನ ಮದುವೆ ಅಗುತ್ತೀಯಾ ಇಲ್ಲಾ ಎಂದು ಕೇಳಿದ್ದಾನೆ. ಅದರೆ ಮದುವೆಗೆ ಮಹಿಳೆ ಒಪ್ಪಿಲ್ಲ. ಕೊನೆಗೆ ಮಹಿಳೆಗೆ ಆ್ಯಸಿಡ್ ಹಾಕಿ ಅಲ್ಲಿಂದ ಎಸ್ಕೇಪ್ ಅಗಿದ್ದ.

ಈ ಹಿಂದೆ ಮಹಿಳೆ ಮನೆಯರ ಬಳಿಯೂ ಬಂದು ಮದುವೆ ಮಾಡಿಕೊಡಲು ಕೇಳಿದ್ದ. ಇಬ್ಬರು ಕಳೆದ ಎರಡು, ಮೂವರು ವರ್ಷಗಳಿಂದ ಸಂಪರ್ಕದಲ್ಲಿ ಇದ್ದಾರೆ. ಹೀಗಾಗಿ ಮದುವೆ ವಿಚಾರ ಪ್ರಸ್ತಾಪ ಮಾಡಿದ್ದ. ಆದರೆ ಮದುವೆಗೆ ಮಹಿಳೆ ಮನೆಯವರು ಒಪ್ಪಿರಲಿಲ್ಲ. ಈಗಾಗಲೇ ಮಹಿಳೆಗೆ ಮದುವೆ ಅಗಿ ಡೈವರ್ಸ್ ಸಹ ಅಗಿದೆ. ಮಕ್ಕಳು ದೊಡ್ಡವರು ಇದ್ದಾರೆ. ಮಗಳೆ ಇನ್ನು ಎರಡು ಮೂರು ವರ್ಷಕ್ಕೆ ಮದುವೆಗೆ ಬರುತ್ತಾಳೆ. ಒಂದು ಸಾರಿ ಮಗಳ ಮದುವೆ ಅಗಲಿ. ನಂತರ ನೋಡೋಣ ಎಂದು ಮನೆಯವರು ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:26 pm, Fri, 10 June 22