HLFT -42 ಮಾರುತ್ ಯುದ್ಧ ವಿಮಾನಕ್ಕೆ ಮತ್ತೆ ಭಜರಂಗಿಯ ಚಿತ್ರ ಹಾಕಿದ ಹೆಚ್​ಎಎಲ್

ಮಾರುತ್​ HLFT-42 ಯುದ್ಧ ವಿಮಾನಕ್ಕೆ ಮಹಾಬಲಿ ಹನುಮಂತನ ಚಿತ್ರವನ್ನು ಹೆಚ್​ಎಎಲ್ ಹಾಕಿತ್ತು. ಬಳಿಕ ವಿವಾದ ಪಡೆದು ಜೆಟ್​ನಿಂದ ಚಿತ್ರ ತೆಗೆದುಹಾಕಲಾಗಿತ್ತು. ಇದೀಗ ಮತ್ತೆ ಹೆಚ್​ಎಎಲ್ ಜೆಟ್​ ಮೇಲೆ ಭಜರಂಗಿಯ ಚಿತ್ರವನ್ನು ಹಾಕಿದೆ.

HLFT -42 ಮಾರುತ್ ಯುದ್ಧ ವಿಮಾನಕ್ಕೆ ಮತ್ತೆ ಭಜರಂಗಿಯ ಚಿತ್ರ ಹಾಕಿದ ಹೆಚ್​ಎಎಲ್
HLFT -42 ಮಾರುತ್ ಯುದ್ಧ ವಿಮಾನದಲ್ಲಿ ಹನುಮಾನ್ ಚಿತ್ರ
Edited By:

Updated on: Feb 17, 2023 | 6:02 PM

ಬೆಂಗಳೂರು: ಮಾರುತ್​ HLFT-42 ಯುದ್ಧ ವಿಮಾನದಿಂದ (Marut HLFT-42 fighter Jet) ತೆರವಾಗಿದ್ದ ಹನುಮಂತನ ಚಿತ್ರ (Hanuman Logo) ಇದೀಗ ಮತ್ತೆ ಕಾಣಿಸಿಕೊಂಡಿದೆ. ಹೆಚ್​ಎಎಲ್ (HAL) ನಿರ್ಮಾಣ ಮಾಡಿದ ತರಬೇತಿ ಫೈಟರ್ ವಿಮಾನವನ್ನು ಯಲಹಂಕ ವಾಯು ನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2023ರಲ್ಲಿ (Aero India 2023) ಪ್ರದರ್ಶನಕ್ಕೆ ಇಡಲಾಗಿತ್ತು. ಈ ಜೆಟ್​ನ ಹಿಂಭಾಗದಲ್ಲಿನ ಲಂಬವಾದ ರೆಕ್ಕೆ ಮೇಲೆ ಗದಾ ಪ್ರಹಾರ ಮಾಡುವ ಹನುಮಾನ್ ಚಿತ್ರವನ್ನು ಹಾಕಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಪಡೆದು ವಿವಾದ ಪಡೆಯುತ್ತಿದ್ದಂತೆ ಹೆಚ್​ಎಎಲ್ ತನ್ನ ಜೆಟ್​ನಿಂದ ಭಜರಂಗಿಯ ಚಿತ್ರವನ್ನು ತೆಗೆದುಹಾಕಿತ್ತು. ಇದೀಗ ಮತ್ತೆ ಅದೇ ಜೆಟ್​ಗೆ ಭಜರಂಗಿಯ ಚಿತ್ರವನ್ನು ಹಾಕಿದೆ.

ಮಾರುತ್ ಎಂಬುದು ಗಾಳಿಯ ಇನ್ನೊಂದು ಹೆಸರಾಗಿದೆ. ಹಿಂದಿಯಲ್ಲಿ ಇದನ್ನು ‘ಪವನ್’ ಎಂದು ಕರೆಯಲಾಗುತ್ತದೆ. ಅಂದರೆ ಪವನನ ಮಗ ಭಗವಾನ್ ಹನುಮಾನ್, ಅದಕ್ಕಾಗಿಯೇ ಭಗವಂತನ ಚಿತ್ರವನ್ನು ಮಾದರಿ ವಿಮಾನದಲ್ಲಿ ಪ್ರದರ್ಶಿಸಲಾಗಿತ್ತು. ಇದು ತರಬೇತಿ ಯುದ್ಧ ವಿಮಾನ ಆಗಿದ್ದು, ಇನ್ನೂ ವಿನ್ಯಾಸದ ಹಂತದಲ್ಲೇ ಇದೆ. ಇದರಲ್ಲಿ ಪೈಲೆ ಟ್ ಮತ್ತು ತೆರಬೇತಿದಾರನಿಗೆ ಮಾತ್ರ ಕೂರಲು ಆಸನದ ವ್ಯವಸ್ಥೆ ಇದೆ. ಈ ವಿಮಾನವು ಇನ್ನೂ ನಾಲ್ಕೈದು ವರ್ಷಗಳಲ್ಲಿ ಭಾರತೀಯ ಸೇನೆಗೆ ಹಸ್ತಾಂತರ ಆಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: HLFT-42 “ಮಾರುತ್” ಯುದ್ಧ ವಿಮಾನದ ಮೇಲಿದ್ದ ಭಜರಂಗಬಲಿ ಚಿತ್ರ ತೆರವು

ಈ ಹಿಂದೆ ಭಜರಂಗಿಯ ಚಿತ್ರವನ್ನು ತೆಗೆದ ಬಗ್ಗೆ ಸ್ಪಷ್ಟನೆ ನೀಡಿದ್ದ ಹೆಚ್ಎಎಲ್​​​ ಸಿಎಂಡಿ ಸಿ.ಬಿ ಅನಂತಕೃಷ್ಣನ್, ಮಾರುತ್​ (HLFT-42) ಯುದ್ಧ ವಿಮಾನ, ಹನುಮಾನ್​ ಅಷ್ಟೇ ಶಕ್ತಿಯುತವಾದ ವಿಮಾನವೆಂದು ಭಜರಂಗಬಲಿ ಚಿತ್ರವನ್ನು ಹಾಕಿದ್ದೆವು. ಆದರೆ ಅದು ಅಪ್ರಸ್ತುತ ಎಂಬ ಕಾರಣಕ್ಕೆ ತೆರವು ಮಾಡಲಾಗಿದೆ ಎಂದಿದ್ದರು. ಏರೋ ಇಂಡಿಯಾ 2023 ಹಿನ್ನಲೆ ಬೆಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:01 pm, Fri, 17 February 23