42 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ದೇವಾಲಯ ನೃತ್ಯ ಪ್ರದರ್ಶನ: ಇಲ್ಲಿದೆ ಸಮಯ, ದಿನಾಂಕ

42 ವರ್ಷದ ಬಳಿಕ ಬೆಂಗಳೂರಿನಲ್ಲಿ ದೇವಾಲಯ ನೃತ್ಯ ಕಾರ್ಯಕ್ರಮ ನಡೆಯುತ್ತಿದೆ. ನರ್ತಕಿ ವೀಣಾ ಮೂರ್ತಿ ವಿಜಯ ಎಂಬುವರು 1981ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಮೂರು ಗಂಟೆಗಳ ಕಾಲ ದೇವಾಲಯ ನೃತ್ಯವನ್ನು ಮಾಡಿದ್ದರು. ಇದಾದ ಬಳಿಕ ಇದೀಗ ದೇವಾಲಯ ನೃತ್ಯ ಕಾರ್ಯಕ್ರಮ ನಡೆಯುತ್ತಿದೆ.

42 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ದೇವಾಲಯ ನೃತ್ಯ ಪ್ರದರ್ಶನ: ಇಲ್ಲಿದೆ ಸಮಯ, ದಿನಾಂಕ
ದೇವಾಲಯ ನೃತ್ಯ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 29, 2023 | 1:07 PM

ಬೆಂಗಳೂರು, ಡಿಸೆಂಬರ್​ 29: ಕಣ್ಮರೆಯಾಗಿದ್ದ ದೇವಾಲಯ ನೃತ್ಯ (Temple Dance) ಮತ್ತೆ ಮುನ್ನಲೆಗೆ ಬರುತ್ತಿದೆ. 42 ವರ್ಷದ ಬಳಿಕ ಬೆಂಗಳೂರಿನಲ್ಲಿ (Bengaluru) ದೇವಾಲಯ ನೃತ್ಯ ಕಾರ್ಯಕ್ರಮ ನಡೆಯುತ್ತಿದೆ. ಡಿಸೆಂಬರ್​ 30 ರಂದು ವೈಯಾಲಿಕಾವಲ್​ನ ಚೌಡಯ್ಯ ಸ್ಮಾರಕ ಭವನದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಈ ದೇವಾಲಯ ನೃತ್ಯವನ್ನು ದೇವದಾಸಿಯರು ಮಾಡುತ್ತಿದ್ದರು. ಆದರೆ ಈಗ ರಾಜ್ಯದಲ್ಲಿ ದೇವದಸಿ ಪದ್ಧತಿ ನಿಷೇಧಿಸಲಾಗಿದೆ.

ನರ್ತಕಿ ವೀಣಾ ಮೂರ್ತಿ ವಿಜಯ ಎಂಬುವರು 1981ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಮೂರು ಗಂಟೆಗಳ ಕಾಲ ದೇವಾಲಯ ನೃತ್ಯವನ್ನು ಮಾಡಿದ್ದರು. ಈಗ ಕೂಚಿಪುಡಿ ಮತ್ತು ಭರತನಾಟ್ಯ ನೃತ್ಯಗಾರ್ತಿಯಾಗಿರುವ ವೀಣಾ ಅಷ್ಟೊಂದು ನೃತ್ಯ ಪ್ರದರ್ಶನಗಳನ್ನು ನೀಡುತ್ತಿಲ್ಲ. ವೀಣಾ ಅವರು ತಮ್ಮ ವಿದ್ಯಾರ್ಥಿನಿ ನರ್ತಕಿ ಸಂಗೀತಾ ಫಣೀಶ್‌ಗೆ ಅವರಿಗೂ ಕೂಡ ದೇವಾಲಯದ ನೃತ್ಯ ವಿದ್ಯೆಯನ್ನು ಕಲಿಸಿದ್ದಾರೆ.

ಕೂಚಿಪುಡಿ ವಾದನವನ್ನು ಪುನರುಜ್ಜೀವನಗೊಳಿಸಲು ಇದು ಸರಿಯಾದ ಸಮಯ. ಇತ್ತೀಚಿಗೆ ಯುವಕರಲ್ಲಿ ಭಾರತೀಯ ಪರಂಪರೆಯ ಬಗ್ಗೆ ಆಸಕ್ತಿ ಬಳೆಯುತ್ತಿದೆ. ಇದು ಸಂತಸದ ಸಂಗತಿ ಎಂದು ವೀಣಾ ಹೇಳಿದರು.

ದೇವಾಲಯದ ನೃತ್ಯ ಮಾಡುವ ದೇವಾಸಿಯರ ಬಗ್ಗೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಈ ದೇವದಾಸಿಯರು ಸಂಗೀತ, ಸಾಹಿತ್ಯ ಮತ್ತು ವೇದಗಳಲ್ಲಿ ಪಾರಂಗತರಾಗಿದ್ದರು. ಮತ್ತು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮವು ದೇವಲಾಯ ನೃತ್ಯವನ್ನು ಬೆಳಸಲು ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದರು.

ಇದನ್ನೂ ಓದಿ: ವಾರಕರಿ ನೃತ್ಯ ಮಾಡಿದ ಶಾಸಕ: ಯತ್ನಾಳ್​ ಕುಣಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ರಾಮಭಕ್ತರು

ದೇವಾಲಯ ನೃತ್ಯಕ್ಕೆ ‘ನವಸಂಧಿ’ ಎಂದೂ ಕರೆಯುತ್ತಾರೆ. ಈ ನವಸಂಧಿಗಳ ಬಗ್ಗೆ ದಾಖಲೆಗಳಿವೆ. ಇದನ್ನು ದಕ್ಷಿಣ ಭಾರತದಲ್ಲಿ ದೇವದಾಸಿಯರು ಗುರುತಿಸಿದ್ದರು. ನಟ್ಟುವನಾರ್ (ನೃತ್ಯಕ್ಕಾಗಿ ಸಂಗೀತ ಮೇಳವನ್ನು ನಡೆಸುವವರು) ಭುದ್ದ ದೇವ್ ಅವರು ತಮ್ಮ ಪೂರ್ವಜರಿಂದ ಈ ದಾಖಲೆಗಳನ್ನು ಸಂಪಾದಿಸಿಕೊಂಡಿದ್ದರು. “ದೇವದಾಸಿಯರು ಬ್ರಹ್ಮೋತ್ಸವದಂತಹ ಉತ್ಸವಗಳು, ಸಮಾರಂಭಗಳಲ್ಲಿ ಮತ್ತು ದೇವರ ಮೆರವಣಿಗೆಯಲ್ಲಿ ಈ ನೃತ್ಯವನ್ನು ಮಾಡುತ್ತಿದ್ದರು ಎಂದರು.

ದೇವದಾಸಿಯರು ನೃತ್ಯಕ್ಕೂ ಮೊದಲು ಎಂಟು ದಿಕ್ಕಿನ ದೇವತೆಗಳಿಗೆ ಪೂಜೆ ಸಲ್ಲಿಸಿ ನೃತ್ಯ ಮಾಡಲು ಆರಂಭಿಸುತ್ತಾರೆ. ನವಸಂಧಿ ಎಂದರೆ ಗೊತ್ತುಪಡಿಸಿದ ಪ್ರದೇಶ. ‘ನವಸಂಧಿ’ ಒಂಬತ್ತು ಕ್ಷೇತ್ರಗಳನ್ನು ಸೂಚಿಸುತ್ತದೆ ಎಂದು ವೀಣಾ ವಿವರಿಸುತ್ತಾರೆ.

ಭಕ್ತಿ ನೃತ್ಯವು ವಿಶೇಷ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ದೇವದಾಸಿಯರು ಪ್ರತಿದಿನ ದೇವಾಲಯದ ಹಾಡುಗಳಿಗೆ ನೃತ್ಯ ಮಾಡುತ್ತಿದ್ದಾರೆ. ಅವರ ಕಲೆಯು ದೇವರಿಗಾಗಿ ಮೀಸಲಾಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:14 pm, Fri, 29 December 23

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ