ಬೆಂಗಳೂರಿಗೆ ಸದ್ಯಕ್ಕೆ ಕೊರೊನಾ ಆತಂಕ ಇಲ್ಲ: ನೆಮ್ಮದಿಯ ಫಲಿತಾಂಶ ಕೊಟ್ಟ ಒಳಚರಂಡಿ ನೀರಿನ ಮಾದರಿ ಪರಿಶೀಲನೆ
ಬೆಂಗಳೂರಲ್ಲಿ ಒಳಚರಂಡಿ ನೀರಿನ ಮಾದರಿಗಳ ಪರಿಶೀಲನೆ ನಂತರ ಕೊರೋನಾ ಸೋಂಕು ಹರಡುವಿಕೆಯ ತೀವ್ರತೆ ಕಡಿಮೆಯಾಗಿದೆ ಎಂದು ಇನ್ಫೆಕ್ಸ್ ಡಿಸಿಸ್ ರಿಸರ್ಚ್ ಫೌಂಡೇಶನ್ ಸಿಇಒ ರೋಹನ ಪೈಸ್ ಹೇಳಿದ್ದಾರೆ
ಬೆಂಗಳೂರು: ಚೀನಾದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದೆ. ನಿಯಮಿತ ತಪಾಸಣೆಯ ಭಾಗವಾಗಿ ಬೆಂಗಳೂರಿನಲ್ಲಿ ಒಳಚರಂಡಿ ನೀರಿನಲ್ಲಿ ಸೂಕ್ಷ್ಮಜೀವಿಗಳನ್ನು ವಿಶ್ಲೇಷಿಸಿದಾಗ ನಗರದಲ್ಲಿ ಸದ್ಯಕ್ಕೆ ಕೊರೋನಾ ಸೋಂಕು ಹರಡುವಿಕೆಯ ತೀವ್ರತೆಯು ಆತಂಕಕಾರಿ ಮಟ್ಟದಲ್ಲಿ ಇಲ್ಲ ಎಂಬ ಸಂಗತಿ ಮನವರಿಕೆಯಾಗಿದೆ. ಈ ಸಂಬಂಧ ‘ಇನ್ಫೆಕ್ಸ್ ಡಿಸಿಸ್ ರಿಸರ್ಚ್ ಫೌಂಡೇಶನ್’ನ ಸಿಇಒ ರೋಹನ ಪೈಸ್ ಹೇಳಿಕೆಯನ್ನು ಡೆಕ್ಕನ್ ಹೆರಾಲ್ಡ್ ಜಾಲತಾಣವು ವರದಿ ಮಾಡಿದೆ. ಒಳಚರಂಡಿ ಕಣ್ಗಾವಲು ಪರೀಕ್ಷೆಯಿಂದ ಸಮೂಹ ಮಟ್ಟದಲ್ಲಿ ಕೊರೋನಾ ಸೋಂಕು ಹರಡುವಿಕೆಯನ್ನು ಪತ್ತೆಹಚ್ಚಬಹುದಾಗಿದೆ. ಒಳಚರಂಡಿ ತಪಾಸಣಾ ವರದಿಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಡಿಸೆಂಬರ್ಗಿಂತಲೂ ಜನವರಿಯಲ್ಲಿ ‘ಸಿಟಿ ವ್ಯಾಲ್ಯೂ’ ಶೇ 25ಕ್ಕಿಂತ ಕಡಿಮೆ ಇದೆ. ಮಾದರಿಗಳ ಸಿಟಿ ವ್ಯಾಲ್ಯೂ ಶೇ 25ಕ್ಕಿಂತ ಹೆಚ್ಚಿದ್ದರೇ ಅದನ್ನು ಸಾಮಾನ್ಯವಾಗಿದೆ ಅಥವಾ ಸೌಮ್ಯವಾಗಿದೆ ಎಂದು ಪರಿಣಗಿಸಲಾಗುತ್ತದೆ. ಇವುಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸುವುದು ಅವಶ್ಯಕವಾಗಿರುವುದಿಲ್ಲ.
ಕಳೆದ ವರ್ಷ ಡಿಸೆಂಬರ್ನಿಂದ ಐಡಿಆರ್ಎಫ್ ಒಳಚರಂಡಿ ಕಣ್ಗಾವಲು ಮಾದರಿಗಳನ್ನು ರಾಜ್ಯದ ತಾಂತ್ರಿಕ ಸಲಹಾ ಸಮಿತಿ (TAC) ಗೆ ಕಳುಹಿಸುತ್ತಿದೆ. ಐಡಿಆರ್ಎಫ್ ಪ್ರತಿವಾರ ವಿಮಾನ ನಿಲ್ದಾಣ, ಅಪಾರ್ಟ್ಮೆಂಟ್, ಆಸ್ಪತ್ರೆಗಳು 16 ನಗರಗಳಲ್ಲಿ ಎರಡು ಆರ್ಟಿಪಿಸಿಆರ್ ಪರೀಕ್ಷೆಗಳನ್ನು ಮಾಡುತ್ತಿದೆ. ಈ ಹಿಂದೆ ಕೊರೋನಾ ಸೋಂಕು ತಗುಲಿದ ವ್ಯಕ್ತಿಯನ್ನು ಪರೀಕ್ಷಿಸಿದಾಗ ಸಿಟಿ ವ್ಯಾಲ್ಯೂ 30ಕ್ಕಿಂತ ಜಾಸ್ತಿ ಇದ್ದರು ಅದನ್ನು ಗಂಭೀರವಲ್ಲ ಎಂದು ಪರಿಗಣಿಸಲಾಗುತ್ತಿತ್ತು. ಹೀಗಾಗಿ ಸಮೂಹದಲ್ಲಿ ಸಿಟಿ ವ್ಯಾಲ್ಯೂ 25ಕ್ಕಿಂತ ಹೆಚ್ಚಿದ್ದರೂ ಅದು ಸೋಂಕಿನ ತೀರ್ವತೆ ಎಂದು ಪರಿಗಣಿಸುವುದು ಅವಶ್ಯಕತಯಿಲ್ಲ.
ಸಿಟಿ ವ್ಯಾಲ್ಯೂ ಕಡಿಮೆ ಇದ್ದ ಕಾರಣ ಐಡಿಆರ್ಎಫ್ ಡಿಸೆಂಬರ್ ಮತ್ತು ನವೆಂಬರ್ ತಿಂಗಳಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಿಲ್ಲ. ಅಕ್ಟೋಬರ್, ಅಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ 1 ರಿಂದ 2 ಪರೀಕ್ಷಾ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ ಕಳೆದ ಜುಲೈ ತಿಂಗಳಲ್ಲಿ ಸೋಂಕಿನ ತೀವ್ರತೆ ಜಾಸ್ತಿ ಇತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Sun, 15 January 23