Air India Express: ವಿಜಯವಾಡ, ಇಂದೋರ್‌ಗೆ ಬೆಂಗಳೂರಿನಿಂದ ನೇರ ವಿಮಾನಯಾನ ಆರಂಭಿಸಿದ ಏರ್ ಇಂಡಿಯಾ
ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೆಂಗಳೂರಿನ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನಿಂದ ಇಂದೋರ್ ಮತ್ತು ವಿಜಯವಾಡಕ್ಕೆ ದೈನಂದಿನ ವಿಮಾನ ಸೇವೆ ಆರಂಭಿಸಿದೆ. ಹೊಸ ವಿಮಾನಗಳ ಪ್ರಯಾಣದ ಸಮಯ ಮತ್ತು ಇತರ ವಿವರ ಇಲ್ಲಿದೆ.
ಬೆಂಗಳೂರು, ಸೆಪ್ಟೆಂಬರ್ 2: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 1 ರಿಂದ ಬೆಂಗಳೂರಿನಿಂದ ವಿಜಯವಾಡ ಮತ್ತು ಇಂದೋರ್‌ಗೆ ದೈನಂದಿನ ನೇರ ವಿಮಾನಯಾನ ಸೇವೆ ಆರಂಭಿಸಿದೆ. ಬೆಂಗಳೂರು-ಇಂದೋರ್ ವಿಮಾನವು ಬೆಂಗಳೂರಿನಿಂದ ಬೆಳಿಗ್ಗೆ 11.10 ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಇಂದೋರ್ ತಲುಪುತ್ತದೆ. ಇಂದೋರ್‌ನಿಂದ ವಿಮಾನವು ಮಧ್ಯಾಹ್ನ 1.30 ಕ್ಕೆ ಹೊರಟು 3.30 ಕ್ಕೆ ಬೆಂಗಳೂರು ತಲುಪುತ್ತದೆ.
ಬೆಂಗಳೂರು-ವಿಜಯವಾಡ ಮಾರ್ಗದ ಹೊಸ ದೈನಂದಿನ ವಿಮಾನವು ಬೆಂಗಳೂರಿನಿಂದ ಸಂಜೆ 4:05 ಕ್ಕೆ ಹೊರಟು ಸಂಜೆ 5:40 ಕ್ಕೆ ವಿಜಯವಾಡ ತಲುಪಲಿದೆ. ಇದು ವಿಜಯವಾಡದಿಂದ ಸಂಜೆ 6:10ಕ್ಕೆ ಹೊರಡಲಿದ್ದು, ರಾತ್ರಿ 7:50ಕ್ಕೆ ಬೆಂಗಳೂರಿಗೆ ಆಗಮಿಸಲಿದೆ ಎಂದು ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಭಾನುವಾರ ಅಗರ್ತಲಾವನ್ನು ತನ್ನ 32 ನೇ ದೇಶೀಯ ತಾಣವಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇರ್ಪಡೆಗೊಳಿಸಿದೆ. ಅಗರ್ತಲಾವನ್ನು ಗುವಾಹಟಿ ಮತ್ತು ಕೋಲ್ಕತ್ತಾಗೆ ಸಂಪರ್ಕಿಸುವ ದೈನಂದಿನ ನೇರ ವಿಮಾನಗಳನ್ನು ಆರಂಭಿಸಿದೆ. ವಿಮಾನಯಾನ ಸಂಸ್ಥೆಯು ಹೈದರಾಬಾದ್ ಮತ್ತು ಗುವಾಹಟಿ ನಡುವೆಯೂ ದೈನಂದಿನ ವಿಮಾನಯಾನ ಸೇವೆ ಆರಂಭಿಸಿದೆ.
ಇದನ್ನೂ ಓದಿ: ರೈಲ್ವೆಗೂ ಬಂತು ಮೆಟ್ರೋ ಮಾದರಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ: ಬೆಂಗಳೂರಿನ 108 ಸ್ಟೇಷನ್ಗಳಲ್ಲೂ ಲಭ್ಯ
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸದ್ಯ ಬೆಂಗಳೂರಿನಿಂದ 376 ವೀಕ್ಲಿ ವಿಮಾನಗಳನ್ನು ನಿರ್ವಹಿಸುತ್ತದೆ. ಬೆಂಗಳೂರಿನಿಂದ 24 ದೇಶೀಯ ಮತ್ತು ಒಂದು ಅಂತರರಾಷ್ಟ್ರೀಯ ತಾಣವಾದ ಅಬುಧಾಬಿಗೆ ನೇರ ವಿಮಾನಯಾನ ಸಂಪರ್ಕ ಕಲ್ಪಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:06 am, Mon, 2 September 24