ಬಿಬಿಎಂಪಿ ಗುತ್ತಿಗೆದಾರರಿಗೆ ಕೋಟಿ ಕೋಟಿ ಬಿಲ್ ಬಾಕಿ; ಇಂದಿನಿಂದ ಪಾಲಿಕೆ ವ್ಯಾಪ್ತಿಯ ಕಾಮಗಾರಿ ಬಂದ್ ಮಾಡಿ ಪ್ರತಿಭಟನೆ

ಪತ್ರ ಬರೆದಿದ್ದಾಯ್ತು, ಡಿಸಿಎಂಗೆ ಮನವಿ ಕೊಟ್ಟಿದ್ದು ಆಯ್ತು, ಏನೇ ಮಾಡಿದ್ರೂ ಬಾಕಿ ಬಿಲ್ ಕೊಡದ ಪಾಲಿಕೆ ವಿರುದ್ಧ ಇದೀಗ ಬಿಬಿಎಂಪಿಯ ಗುತ್ತಿಗೆದಾರರು ಸಮರ ಸಾರಿದ್ದಾರೆ. ಬಿಬಿಎಂಪಿಯ ವಿವಿಧ ಕಾಮಗಾರಿಗಳಲ್ಲಿ ಭಾಗಿಯಾದ ಗುತ್ತಿಗೆದಾರರಿಗೆ ಬರೋಬ್ಬರಿ 1,600 ಕೋಟಿ ಬಾಕಿ ಬಿಲ್ ಬರಬೇಕಿದ್ದು, ಶೇಕಡ 25 ರಷ್ಟು ಬಿಲ್ ಬಾಕಿ ಉಳಿಸಿಕೊಂಡ ಪಾಲಿಕೆಗೆ ಇದೀಗ ಕಾಮಗಾರಿಗಳನ್ನ ಬಂದ್ ಮಾಡಿ ಶಾಕ್ ಕೊಡೋಕೆ ಗುತ್ತಿಗೆದಾರರ ಸಂಘ ಸಜ್ಜಾಗಿದೆ.

ಬಿಬಿಎಂಪಿ ಗುತ್ತಿಗೆದಾರರಿಗೆ ಕೋಟಿ ಕೋಟಿ ಬಿಲ್ ಬಾಕಿ; ಇಂದಿನಿಂದ ಪಾಲಿಕೆ ವ್ಯಾಪ್ತಿಯ ಕಾಮಗಾರಿ ಬಂದ್ ಮಾಡಿ ಪ್ರತಿಭಟನೆ
ಬಿಬಿಎಂಪಿ
Follow us
ಶಾಂತಮೂರ್ತಿ
| Updated By: ಆಯೇಷಾ ಬಾನು

Updated on:Sep 02, 2024 | 7:24 AM

ಬೆಂಗಳೂರು, ಸೆಪ್ಟೆಂಬರ್,02: ರಾಜ್ಯ ರಾಜಧಾನಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಿದ್ದ ಬಿಬಿಎಂಪಿ (BBMP) ಗುತ್ತಿಗೆದಾರರಿಗೆ ಪಾಲಿಕೆ ಬಾಕಿ ಉಳಿಸಿಕೊಂಡಿರೋದು ಇದೀಗ ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣವಾಗಿಬಿಟ್ಟಿದೆ. ಕಳೆದ 2 ವರ್ಷದಿಂದ ಬರೋಬ್ಬರಿ 1,600 ಕೋಟಿ ರೂ. ಹಣವನ್ನ ಪಾಲಿಕೆ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿರೋ ಗುತ್ತಿಗೆದಾರರು, ಶೇ.75ರಷ್ಟು ಕಾಮಗಾರಿ ಬಿಲ್ ಮಾತ್ರ ಪಾಲಿಕೆ ಪಾವತಿಸಿದ್ದು, ಉಳಿದ ಶೇಕಡಾ 25ರಷ್ಟು ಬಿಲ್​ ಪಾವತಿಗೆ ಗುತ್ತಿಗೆದಾರರು ಪಟ್ಟುಹಿಡಿದಿದ್ದಾರೆ.

ಸದ್ಯ ಬಾಕಿ ಬಿಲ್​ ಬಿಡುಗಡೆಗೆ ಡಿಸಿಎಂ ಡಿಕೆ ಶಿವಕುಮಾರ್​ಗೂ ಪತ್ರ ಬರೆದು ಸುಸ್ತಾದ ಬಿಬಿಎಂಪಿಯ ಗುತ್ತಿಗೆದಾರರು, ಇದೀಗ ಇಂದಿನಿಂದ ಪಾಲಿಕೆ ವ್ಯಾಪ್ತಿಯ ಎಲ್ಲಾ ಕಾಮಗಾರಿಗಳನ್ನ ಬಂದ್ ಮಾಡಿ ಪ್ರತಿಭಟಿಸೋಕೆ ಸಜ್ಜಾಗಿದ್ದಾರೆ. ಪಾಲಿಕೆಯಿಂದ ಕೈಗೊಂಡಿರುವ ಎಲ್ಲಾ ಕಾಮಗಾರಿಗೆ ಬ್ರೇಕ್ ಹಾಕಲು ಸಜ್ಜಾಗಿರೋ ಗುತ್ತಿಗೆದಾರರು, ಬಾಕಿ ಬಿಲ್ ಕ್ಲಿಯರ್ ಆಗೋ ತನಕ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸೋಕೆ ಸಿದ್ಧತೆ ನಡೆಸಿದ್ದಾರೆ

ಇನ್ನು ಪಾಲಿಕೆ ಗುತ್ತಿಗೆದಾರರ ಈ ನಿರ್ಧಾರದಿಂದ ಇಂದಿನಿಂದ ಬೆಂಗಳೂರಿನಲ್ಲಿ ಪಾಲಿಕೆ ನಡೆಸ್ತಿರೋ ಎಲ್ಲಾ ಕಾಮಗಾರಿಗಳು ಸ್ಥಗಿತವಾಗಲಿದ್ದು, ಇದರಿಂದ ಸಾರ್ವಜನಿಕರಿಗೆ ಅಡಚಣೆ ಎದುರಾಗೋ ಸಾಧ್ಯತೆ ದಟ್ಟವಾಗಿದೆ. ಸದ್ಯ ಬಿಬಿಎಂಪಿಯ ಗುತ್ತಿಗೆದಾರರ ಸಿಟ್ಟಿಗೆ ಬಂದ್ ಆಗ್ತಿರೋ ಕಾಮಗಾರಿಗಳು ಯಾವ್ಯಾವು ಎಂದರೆ

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್: ಇಂದು ವಿಚಾರಣೆ ಮುಂದುವರಿಕೆ, ಹೈಕೋರ್ಟ್‌ನತ್ತ ಎಲ್ಲರ ಚಿತ್ತ

ಯಾವ್ಯಾವ ಕಾಮಗಾರಿ ಬಂದ್?

  • ರಸ್ತೆ ಕಾಮಗಾರಿ
  • ಮೂಲಭೂತ ಸೌಕರ್ಯ ವಿಭಾಗದ ಕಾಮಗಾರಿಗಳು
  • ವಾರ್ಡ್ ಮಟ್ಟದ ನಿರ್ವಹಣಾ ಕಾಮಗಾರಿಗಳು
  • ಬೃಹತ್ ನೀರುಗಾಲುವೆ
  • ವೈಟ್ ಟಾಪಿಂಗ್ ಕಾಮಗಾರಿ
  • ಬಿಬಿಎಂಪಿ ಎಲೆಕ್ಟ್ರಿಕ್ ವಿಭಾಗದ ಕಾಮಗಾರಿಗಳು

ಸದ್ಯ ಈ ಹಿಂದೆ ಬಿಬಿಎಂಪಿಯ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿದ್ದ ಆರೋಪ ಸಖತ್ ಸದ್ದುಮಾಡಿತ್ತು. ಆದ್ರೆ ಇದೀಗ ಎಲ್ಲಾ ಕಾಮಗಾರಿಗೆ ಶೇಕಡ 25 ರಷ್ಟು ಬಿಲ್ ಬಾಕಿ ಉಳಿಸಿರೋದು ಹಲವು ಅನುಮಾನ ಹುಟ್ಟುಹಾಕಿದೆ. ಇತ್ತ ಕಾಮಗಾರಿ ಮಾಡಿ ಅರೆಬರೆ ಬಿಲ್ ಪಡೆದ ಗುತ್ತಿಗೆದಾರರಿಗೆ ಪಾಲಿಕೆ ಇನ್ನಾದ್ರೂ ಬಾಕಿ ಬಿಲ್ ನೀಡುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:23 am, Mon, 2 September 24