ಜಕ್ಕೂರು ಹೆಲಿಪ್ಯಾಡ್ ನಲ್ಲಿ ಏರ್ ಕ್ರಾಫ್ಟ್ ಪತನ: ಪೈಲಟ್ ಗಳು ಪಾರು

ಜಕ್ಕೂರು ಹೆಲಿಪ್ಯಾಡ್ ನಲ್ಲಿ ಏರ್ ಕ್ರಾಫ್ಟ್ ಪತನ: ಪೈಲಟ್ ಗಳು ಪಾರು
ಜಕ್ಕೂರು ಹೆಲಿಪ್ಯಾಡ್ ನಲ್ಲಿ ಏರ್ ಕ್ರಾಫ್ಟ್ ಪತನ: ಪೈಲಟ್ ಗಳು ಪಾರು

ಕ್ಯಾಪ್ಟನ್ ಗೋಪಿನಾಥ್ ಮತ್ತು ಕ್ಯಾಪ್ಟನ್ ಶೆರ್ಲಿ ಎಂಬಿಬ್ಬರು ಪೈಲೆಟ್ ಗಳು ತರಬೇತಿಯಲ್ಲಿದ್ದಾಗ ಈ ಆಕಸ್ಮಿಕ ನಡೆದಿದೆ. ಲ್ಯಾಂಡಿಂಗ್ ಮಾಡುವ ವೇಳೆ ಪೈಲಟ್ ನಿಯಂತ್ರಣ ಕಳೆದುಕೊಂಡು ಏರ್ ಕ್ರಾಫ್ಟ್ ಬಿದ್ದಿದೆ.

TV9kannada Web Team

| Edited By: sadhu srinath

Apr 18, 2022 | 9:24 PM

ಬೆಂಗಳೂರು: ಜಕ್ಕೂರು ಹೆಲಿಪ್ಯಾಡ್ ನಲ್ಲಿ ಏರ್ ಕ್ರಾಫ್ಟ್ ಪತನಗೊಂಡಿದ್ದು, ಅದೃಷ್ಟವಶಾತ್ ಅವಘಡದಲ್ಲಿ ಇಬ್ಬರು ಪೈಲಟ್ ಗಳು ಪಾರಾಗಿದ್ದಾರೆ. ಸೋಮವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಲ್ಯಾಂಡಿಂಗ್ ಮಾಡುವ ವೇಳೆ ರನ್ ವೇ ನಲ್ಲಿ ಏರ್ ಕ್ರಾಫ್ಟ್ ಮಗುಚಿ ಬಿದ್ದಿದೆ. ಕ್ಯಾಪ್ಟನ್ ಗೋಪಿನಾಥ್ ಮತ್ತು ಕ್ಯಾಪ್ಟನ್ ಶೆರ್ಲಿ ಎಂಬಿಬ್ಬರು ಪೈಲೆಟ್ ಗಳು ತರಬೇತಿಯಲ್ಲಿದ್ದಾಗ ಈ ಆಕಸ್ಮಿಕ ನಡೆದಿದೆ. ಲ್ಯಾಂಡಿಂಗ್ ಮಾಡುವ ವೇಳೆ ಪೈಲಟ್ ನಿಯಂತ್ರಣ ಕಳೆದುಕೊಂಡು ಏರ್ ಕ್ರಾಫ್ಟ್ ಬಿದ್ದಿದೆ. ಇಬ್ಬರೂ ಪೈಲಟುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

BBMP ಕಸದ ಲಾರಿ ಡಿಕ್ಕಿ ಹೊಡೆದು ಮತ್ತೊಂದು ಮಹಿಳೆ ಸಾವು ಬೆಂಗಳೂರು: ನಗರದ ನಾಯಂಡಹಳ್ಳಿ ಬಳಿ ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಮಹಿಳೆ ಬಲಿಯಾಗಿರುವಂತಹ ಘಟನೆ ನಡೆದಿದೆ. ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಪದ್ಮಿನಿ(39) ಮೃತ ಮಹಿಳೆ. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕಸದ ಲಾರಿ ಡಿಕ್ಕಿಯಾಗಿದೆ. ಬ್ಯಾಟರಾಯನಪುರ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಟ್ರಾನ್ಸ್ ಫಾರ್ಮರ್ ಚಾಲನೆಗೊಳಿಸಲು ಇಪ್ಪತ್ತೈದು ಸಾವಿರ ಲಂಚ ಪಡೆದು ಎಸಿಬಿ ಬಲೆಗೆ ಬಿದ್ದ ಅಧಿಕಾರಿ: ಬೆಂಗಳೂರು: ಟ್ರಾನ್ಸ್ ಫಾರ್ಮರ್ ಚಾಲನೆಗೊಳಿಸಲು ಇಪ್ಪತ್ತೈದು ಸಾವಿರ ಲಂಚ ಪಡೆಯುವಾಗ ಬೆಂಗಳೂರು ಎಸಿಬಿ ‌ಅಧಿಕಾರಿಗಳಿದ ಟ್ರಾಪ್ ಮಾಡಿ ಅಧಿಕರಿಯನ್ನು ಅರೆಸ್ಟ್ ಮಾಡಲಾಗಿದೆ. ಗುತ್ತಿಗೆದಾರರ ಬಳಿ ಲಂಚ ಕೇಳಿದ್ದ ಬೆಸ್ಕಾಂ ಸಹಾಯಕ ಅಭಿಯಂತರ ನವೀನ್ ಡಿ. ಪೂರ್ವ ಉಪವಿಭಾಗ ಬೆಸ್ಕಾಂ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ. ಇಂದು ಇಪತ್ತುಸಾವಿರ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ಟ್ರಾಪ್ ಮಾಡಿ ಅರೆಸ್ಟ್ ಮಾಡಿದ್ದಾರೆ.

ಮಹಿಳೆಯ ಮಾಂಗಲ್ಯ ಸರ ಎಗರಿಸಿ ಪರಾರಿಯಾದ ದುಷ್ಕರ್ಮಿಗಳು ಬೆಂಗಳೂರು: ರಸ್ತೆಯಲ್ಲಿ ನಡೆದು ಬರುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಎಗರಿಸಿ ದುಷ್ಕರ್ಮಿಗಳು ಪರಾರಿಯಾದಂತಹ ಘಟನೆ ನಗರದ ಟಿ.ದಾಸರಹಳ್ಳಿಯಲ್ಲಿ ನಡೆದಿದೆ. ಚಂದ್ರಕಾಂತ(58)ಸರ ಕಳಕೊಂಡ ಮಹಿಳೆ. ಗಾರ್ಮೆಂಟ್ಸ್​ನಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಬೈಕ್​ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳಿಂದ ಕೃತ್ಯ ಎಸಗಲಾಗಿದ್ದು, ಸರ ಎಳೆಯುವಾಗ ಕೈಯಲ್ಲಿ ಹಿಡಿದುಕೊಂಡಿದ್ದರಿಂದ ಅರ್ಧಕ್ಕೆ ಕಟ್ಟಾಗಿದೆ. ಒಂದು ಲಕ್ಷ ಬೆಲೆಬಾಳುವಷ್ಟು ಸರ ಕಿತ್ತು ಕಿರಾತಕರು ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:

ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ದುರ್ಮರಣ; 9ಕ್ಕೂ ಹೆಚ್ಚು ಕುರಿಗಳು ಬಲಿ

Video: ಸ್ನೇಹಿತನೇ..ಸ್ನೇಹಿತನೆ ಹಾಡಿಗೆ ಭರತನಾಟ್ಯ ಮಾಡಿದ ಫ್ರೆಂಚ್​ ಡ್ಯಾನ್ಸರ್​; ಶೂ ಹಾಕಬಾರದಿತ್ತು ಎಂದು ಸಲಹೆ ಕೊಟ್ಟ ನೆಟ್ಟಿಗರು

Follow us on

Related Stories

Most Read Stories

Click on your DTH Provider to Add TV9 Kannada