ಕಬ್ಬಿಣದ ಅದಿರು ರಫ್ತು ವಿಚಾರದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ; ಸಚಿವ ಜೆ.ಸಿ.ಮಾಧುಸ್ವಾಮಿ
ಸರ್ಕಾರ ಸುಪ್ರೀಂಕೋರ್ಟ್ಗೆ ಈಗಾಗಲೇ ಅಫಿಡವಿಟ್ ಸಲ್ಲಿಸಿದೆ. 2021ರಲ್ಲಿ ಸರ್ಕಾರ ಕೈಗೊಂಡ ಗಣಿ ನೀತಿ ಮುಂದುವರಿಕೆ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಿದೆ.
ಬೆಂಗಳೂರು: ಕಬ್ಬಿಣದ ಅದಿರು ರಫ್ತು (Iron Ore Export) ವಿಚಾರದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ರಫ್ತು ರದ್ದು ನೀತಿ ಮುಂದುವರಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಸಂಪುಟ ಸಭೆ ನಂತರ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ. ಅದಿರು ರಫ್ತು ಕುರಿತು ಸುಪ್ರೀಂಕೋರ್ಟ್ನಲ್ಲಿ ನಾಳೆ ವಿಚಾರಣೆಯಿದೆ. ಅದಿರು ರಫ್ತು ಮಾಡುವ ಬಗ್ಗೆ ಸುಪ್ರೀಂಕೋರ್ಟ್ ಕರ್ನಾಟಕ ರಾಜ್ಯ ಸರ್ಕಾರದ ನಿಲುವು ಕೇಳಿದೆ. ಸರ್ಕಾರ ಸುಪ್ರೀಂಕೋರ್ಟ್ಗೆ ಈಗಾಗಲೇ ಅಫಿಡವಿಟ್ ಸಲ್ಲಿಸಿದೆ. 2021ರಲ್ಲಿ ಸರ್ಕಾರ ಕೈಗೊಂಡ ಗಣಿ ನೀತಿ ಮುಂದುವರಿಕೆ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಿದೆ. ಕಬ್ಬಿಣದ ಅದಿರು ರಫ್ತು ಮಾಡಬಹುದು ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಈ ಹಿಂದಿನ ಘಟನಾವಳಿಗಳು, ಇತಿಹಾಸ ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡಿದ್ದೇವೆ. ಅದಿರು ರಫ್ತು ರದ್ದು ನೀತಿ ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಗೇಣಿದಾರರ ಮೇಲಿನ ಕೇಸ್ಗಳ ಕಾಯ್ದೆ ತಿದ್ದುಪಡಿಗೆ ಅನುಮೋದನೆ ಬಗ್ಗೆ ಸಂಪುಟ ಸಭೆ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಪಶುವೈದ್ಯಕೀಯ ಕಾಲೇಜಿಗೆ 136 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ರಾಜ್ಯದಲ್ಲಿ 2 ಲಕ್ಷ ಮನೆಗಳ ನಿರ್ಮಾಣಕ್ಕೆ ಇದ್ದ ಅಡೆತಡೆ ತೆರವುಗೊಳಿಸಲಾಗಿದೆ. ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುವುದು ಎಂದು ಮಾಧುಸ್ವಾಮಿ ಹೇಳಿದರು. ಹರಿಹರ ರೈಲ್ವೆ ಮೇಲ್ಸೇತುವೆಗೆ 36.30 ಕೋಟಿ ರೂ. ದತ್ತಾಂಶ ಕೇಂದ್ರ ನಿರ್ಮಾಣಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಕೆರೆ ತುಂಬಲು 105 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಸೋನಿ ವರ್ಲ್ಡ್ ಬಳಿ ಎಲಿವೇಟೆಡ್ ಕಾರಿಡಾರ್ಗೆ ಮರು ಟೆಂಡರ್ ನೀಡಲಾಗಿದೆ. ಇಂದಿರಾ ಕ್ಯಾಂಟೀನ್ಗಳ ಸ್ಥಳಾಂತರಕ್ಕೆ ಸರ್ವೆ ವರದಿ ಕೇಳಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ;
ಗುಜರಾತ್ ತಲುಪಿದ ಪ್ರಧಾನಿ ಮೋದಿ; ರಾಜ್ಕೋಟ್ನಲ್ಲಿ ಮಾರಿಷಸ್ ಪ್ರಧಾನಮಂತ್ರಿಗೆ ಭರ್ಜರಿ ಸ್ವಾಗತ, ರೋಡ್ ಶೋ
Gold-Silver Rate: ದೇಶದ ಪ್ರಮುಖ ನಗರಗಳಲ್ಲಿ ಏಪ್ರಿಲ್ 18ರ ಸೋಮವಾರದ ಚಿನ್ನ, ಬೆಳ್ಳಿ ದರ ಇಲ್ಲಿದೆ