ಬೆಂಗಳೂರು ಸಂಚಾರಿ ಪೊಲೀಸ್ ಸಿಬ್ಬಂದಿ ವಿರುದ್ಧ ನಿಂದನೆ ಆರೋಪ: ದರ್ಪ ಮೆರೆದ ವಿಡಿಯೋ ಟ್ವೀಟ್ ಮಾಡಿದ ಕಾರು ಚಾಲಕ

ಬೆಂಗಳೂರು ಸಂಚಾರಿ ಪೊಲೀಸ್ ಸಿಬ್ಬಂದಿ ಓರ್ವರು ಕಾರು ಚಾಲಕ ವಿನಯ್ ರನ್ನು ನಿಂದಿಸಿದ್ದಾರಂತೆ. ಟ್ರಾಫಿಕ್ ಪೊಲೀಸರ ವರ್ತನೆಗೆ ಬೇಸತ್ತ ವಿನಯ್ ತಮ್ಮ ಮೊಬೈಲ್​ನಲ್ಲಿ ಪೊಲೀಸ್ ನಿಂದನೆ ವಿಡಿಯೋ ಸೆರೆಹಿಡಿದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಸಂಚಾರಿ ಪೊಲೀಸ್ ಸಿಬ್ಬಂದಿ ವಿರುದ್ಧ ನಿಂದನೆ ಆರೋಪ: ದರ್ಪ ಮೆರೆದ ವಿಡಿಯೋ ಟ್ವೀಟ್ ಮಾಡಿದ ಕಾರು ಚಾಲಕ
ಬೆಂಗಳೂರು ಸಂಚಾರಿ ಪೊಲೀಸ್ ಸಿಬ್ಬಂದಿ ವಿರುದ್ಧ ನಿಂದನೆ ಆರೋಪ
Updated By: ಆಯೇಷಾ ಬಾನು

Updated on: Jan 02, 2023 | 8:37 AM

ಬೆಂಗಳೂರು: ಬೆಂಗಳೂರು ಸಂಚಾರಿ ಪೊಲೀಸ್ ಸಿಬ್ಬಂದಿ(Traffic Police) ವಿರುದ್ಧ ನಿಂದನೆ ಆರೋಪ ಕೇಳಿ ಬಂದಿದೆ. ಪೊಲೀಸ್ ಸಿಬ್ಬಂದಿಯ ದರ್ಪದ ಬಗೆಗಿನ ವಿಡಿಯೋ ವೈರಲ್(Viral Video) ಆಗಿದೆ. ಕಾರು ಚಾಲಕ ವಿನಯ್​ ಕುಮಾರ್ ಎಂಬುವವರು ಪೊಲೀಸರು ತಮಗೆ ನಿಂದಿಸಿ, ದರ್ಪ ಮೆರೆದ ಬಗ್ಗೆ ಮೊಬೈಲ್​​ನಲ್ಲಿ ವಿಡಿಯೋ ಸೆರೆಹಿಡಿದು ಟ್ವೀಟರ್​ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಆರೋಪ ಮಾಡಿದ್ದಾರೆ.

ಬೆಂಗಳೂರು ಸಂಚಾರಿ ಪೊಲೀಸ್ ಸಿಬ್ಬಂದಿ ಓರ್ವರು ಕಾರು ಚಾಲಕ ವಿನಯ್ ರನ್ನು ನಿಂದಿಸಿದ್ದಾರಂತೆ. ಅಧಿಕಾರದ ದರ್ಪದಿಂದ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಟ್ರಾಫಿಕ್ ಪೊಲೀಸರ ವರ್ತನೆಗೆ ಬೇಸತ್ತ ವಿನಯ್ ತಮ್ಮ ಮೊಬೈಲ್​ನಲ್ಲಿ ಪೊಲೀಸ್ ನಿಂದನೆ ವಿಡಿಯೋ ಸೆರೆಹಿಡಿದು ಬ್ಯಾಟರಾಯನಪುರ ಪೊಲೀಸರಿಗೆ ಟ್ಯಾಗ್, ಬಿಸಿಪಿ ಸೋಷಿಯಲ್ ಮೀಡಿಯಾ ಟೀಂಗೆ ದೂರನ್ನು ಫಾರ್ವರ್ಡ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಸಾಮಾಜಿಕ‌‌ ಜಾಲತಾಣಗಳಲ್ಲಿ ಪೊಲೀಸ್ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸ್ತಿರುವ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: Bengaluru: ಹೊಸ ವರ್ಷ ಆಚರಣೆ ವೇಳೆ ಎಣ್ಣೆ ಕಿಕ್​; ಬೆಂಗಳೂರಲ್ಲಿ 78 ಡ್ರಂಕ್​ ಆಂಡ್​ ಡ್ರೈವ್​ ಕೇಸ್​ ಬುಕ್​​

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅಪಘಡ

ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಸಂಜೆ 6.30 ಕ್ಕೆ ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಮಹಿಳೆ ಕೆಳಗೆ ಬಿದ್ದಿದ್ದು  ಅದೃಷ್ಟವಶಾತ್ ರೈಲು ಹಳಿಗೆ ಬೀಳುವುದರಿಂದ ಮಹಿಳೆ ಕೂದಲೆಳೆ ಅಂತರದಿಂದ ಬಚಾವ್ ಆಗಿದ್ದಾರೆ. ಮುಂಬಯಿ ನಾಗರಕೋಯಿಲ್ ರೈಲು ಆಗಮನ ವೇಳೆ ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋಗಿ ಕೆಳಗೆ ಬಿಳುತ್ತಿದ್ದ 50 ವರ್ಷದ ಮಹಿಳೆಯನ್ನು ಸಿನಿಮೀಯ ಶೈಲಿಯಲ್ಲಿ ಆರ್‌ಪಿಎಫ್ ಸಿಬ್ಬಂದಿ ಮತ್ತು ಕಾರ್ಮಿಕ ಬಚಾವ್ ಮಾಡಿದ್ದಾರೆ. ಆರ್‌ಪಿಎಫ್ ಪೇದೆ ಆರ್‌ಡಿ ಶೇರಖಾನೆ ಹಾಗೂ ಕಾರ್ಮಿಕನ ಸಾಹಸ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ