Bengaluru: ಹೊಸ ವರ್ಷ ಆಚರಣೆ ವೇಳೆ ಎಣ್ಣೆ ಕಿಕ್; ಬೆಂಗಳೂರಲ್ಲಿ 78 ಡ್ರಂಕ್ ಆಂಡ್ ಡ್ರೈವ್ ಕೇಸ್ ಬುಕ್
ತಡರಾತ್ರಿ ಹೊಸ ವರ್ಷ ಆಚರಣೆ ವೇಳೆ ಬೆಂಗಳೂರಲ್ಲಿ ಮಧ್ಯಪಾನ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ 78 ಜನರಿಗೆ ಪೊಲೀಸರು ದಂಡ ವಿಧಿಸಿದ್ದಾರೆ
ಬೆಂಗಳೂರು: ತಡರಾತ್ರಿ ಬೆಂಗಳೂರಲ್ಲಿ (Bengaluru) ಹೊಸ ವರ್ಷಾಚರಣೆ (New Year) ಜೋರಾಗಿಯೇ ನಡೆಯಿತು. ಎಂ.ಜಿ ರೋಡ್ (MG Road) , ಬ್ರಿಗೇಡ್ ರೋಡ್ (Brigade Road) ಜನಜಂಗುಳಿಯಿಂದ ಕೂಡಿತ್ತು. 2023 ಹೊಸ ವರ್ಷವನ್ನು ಜನರು ಜೋರಾಗಿಯೇ ಸ್ವಾಗತಿಸಿದರು. ಇನ್ನೂ ಹೊಸ ವರ್ಷಕ್ಕೆ ಸಿಲಿಕಾನ್ ಸಿಟಿಯಲ್ಲಿ ಮಧ್ಯಾಹ್ನದಿಂದಲೇ ಪಾರ್ಟಿಗಳು ಶುರುವಾಗಿದ್ದವು. ಪಾರ್ಟಿಯಲ್ಲಿ ಕೆಲವರು ಎಣ್ಣೆ ಬೇಕು ಅಣ್ಣ ಎಂದು ಕುಡಿದಿದ್ದೇ ಕುಡಿದಿದ್ದು. ಹೀಗೆ ಎಣ್ಣೆ ಮತ್ತಿನಲ್ಲಿ ಬೈಕ್ ಹತ್ತಿ ಹೊರಟವರು ಪೊಲೀಸರ ಕೈಗೆ ಸಿಕ್ಕು ದಂಡ ಕಟ್ಟಿದ್ದಾರೆ. ಹೌದು ಪೊಲೀಸರು, ತಡರಾತ್ರಿ ಕುಡಿದು ವಾಹನ ಚಲಾಯಿಸುತ್ತಿದ್ದ (Drunk and Drive) 78 ಜನರಿಗೆ ದಂಡ ವಿಧಿಸಿದ್ದಾರೆ.
ಇದನ್ನೂ ಓದಿ: ಕೆಎಂಎಫ್, ಅಮುಲ್ ವಿಲೀನ ಬಗ್ಗೆ ಅಮಿತ್ ಶಾ ಎಲ್ಲೂ ಹೇಳಿಲ್ಲ; ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ
ಹೊಸ ವರ್ಷಾಚರಣೆ ನಿಮಿತ್ತ ನಗರ ಸಂಚಾರಿ ಪೊಲೀಸರು ಡಿ.31 2022 ರಿಂದ ಜನವರಿ 1 2023ರ ವರೆಗೆ ಬೈ ಸವಾರರನ್ನು ತಪಾಸಣೆ ಮಾಡಿದ್ದಾರೆ. ಹೀಗೆ ತಪಾಸಣೆ ಮಾಡಿದವರಲ್ಲಿ 78 ಜನರು ಕುಡಿದು ವಾಹನ ಚಲಾಯಿಸಿದ್ದಾರೆ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ ಎನ್ ಅನುಚೇತ್ ಟ್ವೀಟ್ ಮಾಡಿದ್ದಾರೆ. “ತಡರಾತ್ರಿ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸಿದ್ದು, ನಿಯಮ ಉಲ್ಲಂಘನೆಗಾಗಿ 78 ಜನರಿಗೆ ದಂಡ ವಿಧಿಸಲಾಗಿದೆ. ಇನ್ನೂ ಜವಾಬ್ದಾರಿಯುತವಾಗಿ ಚಾಲನೆ ಮಾಡಿದ್ದಕ್ಕಾಗಿ #ಬೆಂಗಳೂರಿಗರಿಗೆ ಧನ್ಯವಾದಗಳು! ನಿಮ್ಮೆಲ್ಲರಿಗೂ ಸಂತೋಷ, ಸುರಕ್ಷಿತ ಮತ್ತು ಸಮೃದ್ಧ ಹೊಸ ವರ್ಷವನ್ನು ಹಾರೈಸುತ್ತೇನೆ” ಎಂದು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.
Of all the persons checked yesterday night for Drink and Drive, only 78 were booked for DD violation. Thank you #Bengalurians for driving responsibly ! Wish you all a very happy, safe and prosperous New Year ! @BlrCityPolice @blrcitytraffic @SplCPTraffic @CPBlr
— MN Anucheth, IPS (@jointcptraffic) January 1, 2023
ಇದನ್ನೂ ಓದಿ: ಮೈಸೂರು-ಬೆಂಗಳೂರು ಹೆದ್ದಾರಿಗೆ ಒಡೆಯರ್ ಹೆಸರಿಡುವಂತೆ ಕೇಂದ್ರ ಸಚಿವರಿಗೆ ಪತ್ರ ಬರೆದ ಮಾಜಿ ಸಿಎಂ ಎಸ್.ಎಂ.ಕೃಷ್ಣ
ಕುಡಿದು ವಾಹನ ಚಾಲನೆ ಮಾಡದಂತೆ ಬೆಂಗಳೂರು ಸಂಚಾರಿ ಪೊಲೀಸರು ನಗರದ ಜನರಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಹೊಸ ವರ್ಷದ ರಾತ್ರಿ ಕೆಲವರು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದಾರೆ. ಆದರೆ ಕಳೆದ ವಾರ ಕ್ರಿಸ್‌ಮಸ್ ಸಮಯದಲ್ಲಿ ದಾಖಲಾದ ಪ್ರಕರಣಗಳಿಗಿಂತ ಇದು ಕಡಿಮೆ. ಕಳೆದ ವಾರ ಬರೊಬ್ಬರಿ 146 ಕುಡಿದು ವಾಹನ ಚಾಲನೆ ಪ್ರಕರಣಗಳು ದಾಖಲಾಗಿದ್ದವು.
ನಗರದಲ್ಲಿ ಹೆಚ್ಚುತ್ತಿರುವ ಮಾರಣಾಂತಿಕ ಅಪಘಾತಗಳ ಕಾರಣಗಳನ್ನು ತಿಳಿದಾಗ ಆಘಾತಕಾರಿ ಅಂಶ ಬಯಲಿಕೆ ಬಂತು. ಅದು ಕುಡಿದು ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಇದನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಪಘಾತಗಳನ್ನು ತಡೆಗಟ್ಟುವುದು ಮತ್ತು ರಸ್ತೆ ಬಳಕೆದಾರರ ಸುರಕ್ಷತೆಯನ್ನು ಕಾಪಾಡುವುದು ಸಂಚಾರ ಪೊಲೀಸರ ಮೂಲ ಕರ್ತವ್ಯ ಮತ್ತು ನಮ್ಮ ಮೊದಲ ಆದ್ಯತೆಯಾಗಿದೆ. ಹೀಗಾಗಿ, ನಗರದಲ್ಲಿ ಅಪಘಾತಗಳನ್ನು ತಡೆಯಲು ನಾವು ಬದ್ಧರಾಗಿದ್ದೇವೆ ಎಂದು ಸಂಚಾರಿ ಪೊಲೀಸ್ ಇಲಾಖೆ ತಿಳಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:47 pm, Sun, 1 January 23