ಅರ್ಹತೆಯೇ ಇಲ್ಲದ ಅಧಿಕಾರಿಗಳಿಗೆ ಅಂತಾರಾಜ್ಯ ಪ್ರವಾಸಕ್ಕೆ ಅನುಮತಿ: ಸರ್ಕಾರದ ದುಡ್ಡಲ್ಲಿ ಶಾಸಕರ ಕುಟುಂಬಸ್ಥರ ಟೂರ್?

ಗುಜರಾತ್ ಮತ್ತು ದೆಹಲಿಯಲ್ಲಿ ಆರ್ಡಿಪಿಆರ್ ಸಿಸ್ಟರ್ ಕಮಿಟಿಗಳು ಇಲ್ಲ. ಸಿಸ್ಟರ್ ಕಮಿಟಿಗಳಿಲ್ಲದ ದೆಹಲಿಯಲ್ಲಿ ನಮ್ಮ ಶಾಸಕರ, ವಿಧಾನ ಪರಿಷತ್ ಸದಸ್ಯರ ನಿಯೋಗ ಏನು ಅಧ್ಯಯನ ಮಾಡಲಿದೆ.

ಅರ್ಹತೆಯೇ ಇಲ್ಲದ ಅಧಿಕಾರಿಗಳಿಗೆ ಅಂತಾರಾಜ್ಯ ಪ್ರವಾಸಕ್ಕೆ ಅನುಮತಿ: ಸರ್ಕಾರದ ದುಡ್ಡಲ್ಲಿ ಶಾಸಕರ ಕುಟುಂಬಸ್ಥರ ಟೂರ್?
ಅಂತಾರಾಜ್ಯ ಪ್ರವಾಸಕ್ಕೆ ತೆರಳುತ್ತಿರುವವರ ಮಾಹಿತಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jul 06, 2022 | 12:19 PM

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ಸಂಸ್ಥೆಗಳ ಅಧ್ಯಕ್ಷ, ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ನೇತೃತ್ವದ ತಂಡ ನಾಲ್ಕು ದಿನಗಳ ಪ್ರವಾಸಕ್ಕೆ ತೆರಳುತ್ತಿದ್ದು, ಅರ್ಹತೆಯೇ ಇಲ್ಲದೇ ಅಧಿಕಾರಿಗಳಿಗೆ ಅಂತಾರಾಜ್ಯ ಪ್ರವಾಸಕ್ಕೆ ಅನುಮತಿ ನೀಡಲಾಗಿದೆ. ಸಮಿತಿ ಸದಸ್ಯ ಶಾಸಕರ ಹೆಂಡತಿ ಮಕ್ಕಳಿಗೂ ಸರ್ಕಾರದ ದುಡ್ಡಲ್ಲೇ ಮೋಜು ಮಾಡುತ್ತಿದ್ದು, ಸರ್ಕಾರದ ದುಡ್ಡಲ್ಲಿ ಶಾಸಕರ ಕುಟುಂಬಸ್ಥರ ಟೂರ್ ಎನ್ನುವಂತ್ತಾಗಿದೆ. ಅಧ್ಯಯನದ ನೆಪದಲ್ಲಿ ಶಾಸಕರು, ಅವರ ಕುಟುಂಬಸ್ಥರು ಹಾಗೂ ನೌಕರರ ಅಂತಾರಾಜ್ಯ ಪ್ರವಾಸ ಮಾಡುತ್ತಿದ್ದು, ನಿನ್ನೆ ಬೆಳಗ್ಗೆ ಗುಜರಾತ್ ಹಾಗೂ ದೆಹಲಿ ರಾಜ್ಯಗಳಿಗೆ ಅಧ್ಯಯನಕ್ಕೆ ರಾಜ್ಯ ಶಾಸಕರ ಎರಡನೇ ತಂಡ ತೆರಳಿದ್ದು, ಅಧ್ಯಯನ ಪ್ರವಾಸದಲ್ಲಿ ಅರ್ಹತೆಯೇ ಇಲ್ಲದ ಅಧಿಕಾರಿಗಳಿಗೆ ಅಧ್ಯಯನ ಪ್ರವಾಸ ಭಾಗ್ಯ ಸಿಕ್ಕೆದೆಯಾ ಎನ್ನುವಂತ್ತಾಗಿದೆ.

ಇದನ್ನೂ ಓದಿ; Crude Oil Price: ಜಾಗತಿಕ ಆರ್ಥಿಕ ಹಿಂಜರಿತದ ಆತಂಕದಲ್ಲಿ ಬ್ಯಾರೆಲ್​ಗೆ 10 ಯುಎಸ್​ ಡಾಲರ್ ಇಳಿಕೆ ಕಂಡ ತೈಲ

ಶಾಸಕರಾದ ಶರಣು ಸಲಗಾರ್, ಪತ್ನಿ ಸಾವಿತ್ರಿ, ಪುತ್ರರಾದ ಕ್ರಿಷ್ ಹಾಗೂ ಆಶಿಶ್. ಜಿ. ಸೋಮಶೇಖರ್ ರೆಡ್ಡಿ ಅವರ ವಿಶೇಷ ಅಧಿಕಾರಿ ಟಿ. ಶ್ರೀನಿವಾಸ ಮೋಟಕಾರ್, ಶಾಸಕ ಅರುಣ್ ಕುಮಾರ್ ಗುತ್ತೂರ್ ಪತ್ನಿ ಮಂಗಳಗೌರಿ, ಪುತ್ರಿ ಹರ್ಷಿತಾ. ಪರಿಷತ್ ಸದಸ್ಯ ಆರ್. ಶಂಕರ್ ಅವರ ಪತ್ನಿ ಧನಲಕ್ಷ್ಮೀ ಗುಜರಾತ್​ನಿಂದ ಜುಲೈ 7 ರಂದು ದೆಹಲಿಗೆ ಅಧ್ಯಯನಕ್ಕೆ ತೆರಳಲಿದ್ದಾರೆ. ಗುಜರಾತ್ ಮತ್ತು ದೆಹಲಿಯಲ್ಲಿ ಆರ್ಡಿಪಿಆರ್ ಸಿಸ್ಟರ್ ಕಮಿಟಿಗಳು ಇಲ್ಲ. ಸಿಸ್ಟರ್ ಕಮಿಟಿಗಳಿಲ್ಲದ ದೆಹಲಿಯಲ್ಲಿ ನಮ್ಮ ಶಾಸಕರ, ವಿಧಾನ ಪರಿಷತ್ ಸದಸ್ಯರ ನಿಯೋಗ ಏನು ಅಧ್ಯಯನ ಮಾಡಲಿದೆ. ಹೀಗಾಗಿ ಯಾವ ಅಧ್ಯಯನ ಮಾಡಲಿದೆ ರಾಜ್ಯದ ಶಾಸಕರು, ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಎಂಬ ಪ್ರಶ್ನೆ ಉಂಟಾಗಿದೆ. ರಾಜ್ಯ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ಸಂಸ್ಥೆಗಳ ಅಧ್ಯಕ್ಷ ಗಾಲಿ ಸೋಮಶೇಖರ್ ರೆಡ್ಡಿ ಪ್ರವಾಸಕ್ಕೆ ಹೊರಟಿದ್ದು, ಸಮಿತಿ ಅಧ್ಯಯನದ ವೇಳೆ ಹೆಂಡತಿ ಮಕ್ಕಳಿಗೆ ಏನು ಕೆಲಸ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ: BazBall: ಟೆಸ್ಟ್ ಕ್ರಿಕೆಟ್ ಅನ್ನೇ ಉಡೀಸ್ ಮಾಡ್ತಾರಾ ಬಾಝ್: ಏನಿದು ಬಾಝ್​ಬಾಲ್?

Published On - 12:17 pm, Wed, 6 July 22

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ