BazBall: ಟೆಸ್ಟ್ ಕ್ರಿಕೆಟ್ ಅನ್ನೇ ಉಡೀಸ್ ಮಾಡ್ತಾರಾ ಬಾಝ್: ಏನಿದು ಬಾಝ್​ಬಾಲ್?

What is BazBall?: ಮೆಕಲಂ ಬ್ಯಾಟಿಂಗ್ ಬಗ್ಗೆ ಹೇಳಲೇಬೇಕಿಲ್ಲ. ಏಕದಿನ ಕ್ರಿಕೆಟ್ ಇರಲಿ, ಟೆಸ್ಟ್ ಇರಲಿ ಬಾಝ್ ಬ್ಯಾಟ್ ಬೀಸಿದ್ದು ಮಾತ್ರ ಟಿ20 ಮಾದರಿಯಲ್ಲಿ ಎಂಬುದು ವಿಶೇಷ.

BazBall: ಟೆಸ್ಟ್ ಕ್ರಿಕೆಟ್ ಅನ್ನೇ ಉಡೀಸ್ ಮಾಡ್ತಾರಾ ಬಾಝ್: ಏನಿದು ಬಾಝ್​ಬಾಲ್?
Brendon McCullum
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 06, 2022 | 11:51 AM

ಗೆಲ್ಲುವ ತನಕ ಆಡು, ಗೆಲ್ಲಲು ಸಾಧ್ಯವಿಲ್ಲದಿದ್ದರೆ ಡ್ರಾ ಮಾಡು…ಸಾಮಾನ್ಯವಾಗಿ ಟೆಸ್ಟ್​ ಕ್ರಿಕೆಟ್ ಸ್ವರೂಪವನ್ನು ಈ ರೀತಿಯಾಗಿ ವರ್ಣಿಸಲಾಗುತ್ತದೆ. ಆದರೆ ಇದೀಗ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ಅಲೆಯೆದ್ದಿದೆ. ಅದು ಕೂಡ ಕ್ರಿಕೆಟ್ ಜನಕರ ನಾಡಿನಿಂದ ಎಂಬುದು ವಿಶೇಷ. ಈ ಅಲೆಯ ಅಬ್ಬರಕ್ಕೆ ಟೀಮ್ ಇಂಡಿಯಾ ಕೂಡ ತತ್ತರಿಸಿದೆ. ಹೌದು, ಟೆಸ್ಟ್ ಕ್ರಿಕೆಟ್​ನಲ್ಲಿ ಹಿಂದೆಂದೂ ಟೀಮ್ ಇಂಡಿಯಾ 350 ರನ್​ಗಳ ಟಾರ್ಗೆಟ್ ನೀಡಿ ಸೋತ ಚರಿತ್ರೆಯೇ ಇಲ್ಲ. ಆದರೆ ಎಡ್ಜ್​ಬಾಸ್ಟನ್​ ಟೆಸ್ಟ್​ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳು ಭಾರತ ತಂಡದ ಬೌಲರ್​ಗಳನ್ನು ಧೂಳೀಪಟ ಮಾಡಿದ್ದರು. ಪರಿಣಾಮ 378 ರನ್​ಗಳ ಟಾರ್ಗೆಟ್​ ಅನ್ನು ಕೇವಲ 77 ಓವರ್​ಗಳಲ್ಲಿ ಚೇಸ್ ಮಾಡಿ ಇಂಗ್ಲೆಂಡ್ ಹೊಸ ಇತಿಹಾಸ ನಿರ್ಮಿಸಿತು. ಈ ಒಂದು ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ ಸ್ವರೂಪವನ್ನೇ ಇಂಗ್ಲೆಂಡ್ ಬದಲಿಸಲು ಹೊರಟಿದೆಯಾ? ಎಂಬ ಪ್ರಶ್ನೆಯೊಂದು ಚರ್ಚೆಗೆ ಕಾರಣವಾಗಿದೆ.

ಏಕೆಂದರೆ ಒಂದು ಹೀನಾಯ ಸೋಲಿನ ಬಳಿಕ ಇಂಗ್ಲೆಂಡ್ ತಂಡದ ಕಂಬ್ಯಾಕ್ ಅಂತಿಂಥಂದ್ದಲ್ಲ. ಪ್ರತಿಷ್ಠ ಆ್ಯಶಸ್ ಸರಣಿಯ ಹೀನಾಯ ಸೋಲಿನ ಬಳಿಕ ಇಂಗ್ಲೆಂಡ್ ತಂಡವು ಬದಲಾಗಿತ್ತು. ನಾಯಕ ಜೋ ರೂಟ್ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಕೋಚ್ ಕೂಡ ಬದಲಾದರು. ಇಲ್ಲಿ ರೂಟ್ ಸ್ಥಾನದಲ್ಲಿ ಹೊಸ ನಾಯಕನಾಗಿ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಕಾಣಿಸಿಕೊಂಡಿದ್ದರು​. ಹಾಗೆಯೇ ಕೋಚ್ ಮ್ಯಾಥ್ಯೂ ಮೋಟ್ ಸ್ಥಾನಕ್ಕೆ ನ್ಯೂಜಿಲೆಂಡ್​ನ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕಲಂ ಆಯ್ಕೆಯಾಗಿದ್ದರು.

ಅತ್ತ ಆಸ್ಟ್ರೇಲಿಯಾ ವಿರುದ್ದ 4-0 ಅಂತರದಿಂದ ಹೀನಾಯವಾಗಿ ಆ್ಯಶಸ್ ಸೋತಿದ್ದ ಇಂಗ್ಲೆಂಡ್ ತಂಡಕ್ಕೆ ಮರುಜೀವ ನೀಡುವ ಅಗತ್ಯವಿತ್ತು. ಇದೀಗ ಹೊಡಿಬಡಿ ಆಟಗಾರನೆಂದೇ ಖ್ಯಾತನಾಗಿರುವ ಮೆಕಲಂ ರೂಪಿಸಿರುವ ಮಾಸ್ಟರ್ ಪ್ಲ್ಯಾನ್ ಏನೆಂಬುದು ಮೊದಲ 4 ಪಂದ್ಯಗಳಲ್ಲೇ ಸ್ಪಷ್ಟವಾಗಿದೆ. ಏಕೆಂದರೆ ಮೆಕಲಂ ಆಗಮನದೊಂದಿಗೆ ಇಂಗ್ಲೆಂಡ್ ತಂಡವು ಆಕ್ರಮಣಕಾರಿ ಕ್ರಿಕೆಟ್​ನತ್ತ ಮುಖ ಮಾಡಿದೆ. ಅದು ಕೂಡ ಟೆಸ್ಟ್​ನಲ್ಲಿ ಎಂಬುದು ವಿಶೇಷ.

ಇದನ್ನೂ ಓದಿ
Image
IND vs ENG: ಟೀಮ್ ಇಂಡಿಯಾ ಆಟಗಾರರು ವಿಶೇಷ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದು ಯಾಕೆ ಗೊತ್ತಾ?
Image
6,6,6,6,6: ಒಂದೇ ಓವರ್​ನಲ್ಲಿ ಸಿಕ್ಸ್​ಗಳ ಸುರಿಮಳೆ: ಟಿ20 ಬ್ಲಾಸ್ಟ್​ನಲ್ಲಿ ಹೊಸ ದಾಖಲೆ
Image
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!
Image
Test Cricket Records: ಟೆಸ್ಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ್ದು ಯಾರು ಗೊತ್ತಾ?

ಏಕೆಂದರೆ ಇಂಗ್ಲೆಂಡ್ ತಂಡವು ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳನ್ನು ಚೇಸಿಂಗ್ ಮಾಡಿ ಗೆದ್ದುಕೊಂಡಿದೆ. ಲಾರ್ಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಇಂಗ್ಲೆಂಡ್ 277 ರನ್​ಗಳನ್ನು ಚೇಸ್ ಮಾಡಿತ್ತು. ಇನ್ನು ಟ್ರೆಂಟ್ ಬ್ರಿಡ್ಜ್​ನಲ್ಲಿ ನಡೆದ 2ನೇ ಪಂದ್ಯವನ್ನು ಚೇಸ್ ಮಾಡಿ ಹೊಸ ದಾಖಲೆ ಬರೆದಿತ್ತು. ಕೊನೆಯ ದಿನದಾಟದಲ್ಲಿ 299 ರನ್​ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ 22 ಓವರ್​ಗಳು ಬಾಕಿಯಿರುವಂತೆ ಬೆನ್ನತ್ತಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಹಾಗೆಯೇ ಹೆಡಿಂಗ್ಲೆಯಲ್ಲಿ ನಡೆದ ಮೂರನೇ ಪಂದ್ಯವನ್ನೂ ಕೂಡ ಇಂಗ್ಲೆಂಡ್​ 296 ರನ್​ಗಳ ಗುರಿ ಬೆನ್ನತ್ತಿ ಗೆದ್ದುಕೊಂಡಿತ್ತು.

ಇದೀಗ ಟೀಮ್ ಇಂಡಿಯಾ ವಿರುದ್ದ ಕೂಡ ಭರ್ಜರಿಯಾಗಿ ಚೇಸ್ ಮಾಡುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದೆ. 378 ರನ್​ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ 77 ಓವರ್​ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಅಂದರೆ ಬ್ರೆಂಡನ್ ಮೆಕಲಂ ಕೋಚಿಂಗ್​ನಲ್ಲಿ ಇಂಗ್ಲೆಂಡ್​ ತಂಡವು ಆಕ್ರಮಣಕಾರಿ ಕ್ರಿಕೆಟ್​ನತ್ತ ಮುಖಮಾಡಿರುವುದು ಸ್ಪಷ್ಟ. ಇದಕ್ಕೆ ಸಾಕ್ಷಿಯೇ ಕಳೆದ ನಾಲ್ಕು ಪಂದ್ಯಗಳ ಇಂಗ್ಲೆಂಡ್ ಫಲಿತಾಂಶ. ಅದರಲ್ಲೂ ಟೀಮ್ ಇಂಡಿಯಾ ವಿರುದ್ದ ಬೆಟ್ಟದಷ್ಟು ಗುರಿ ನೀಡಿದ್ದರೂ ಚೇಸ್ ಮಾಡಬಲ್ಲೆ ಎಂಬಂತೆ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳು ಬ್ಯಾಟ್ ಬೀಸಿದ್ದರು. ಹೀಗಾಗಿಯೇ ಟೆಸ್ಟ್ ಕ್ರಿಕೆಟ್​ನ ಸ್ವರೂಪವನ್ನು ಬ್ರೆಂಡನ್ ಮೆಕಲಂ ಅ್ಯಂಡ್ ಟೀಮ್ ಬದಲಿಸಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದರ ಬೆನ್ನಲ್ಲೇ ಬಾಝ್​ಬಾಲ್ (BazBall)​ ಎಂಬ ಹೊಸ ಪದವೊಂದು ಕ್ರಿಕೆಟ್ ಅಂಗಳಕ್ಕೆ ಎಂಟ್ರಿಯಾಗಿದೆ.

ಏನಿದು ಬಾಝ್​ಬಾಲ್? ಬ್ರೆಂಡನ್ ಮೆಕಲಂ ಅವರ ಅಡ್ಡಹೆಸರು ಬಾಝ್. ಕ್ರಿಕೆಟ್​ ಅಂಗಳದಲ್ಲಿ ಬಾಝ್​ ಎಂದೇ ಚಿರಪರಿಚಿತರಾಗಿರುವ ಮೆಕಲಂ ಅವರ ಆಕ್ರಮಣಕಾರಿ ವಿಧಾನವನ್ನು ಇದೀಗ ಬಾಝ್​ಬಾಲ್ (BazBall) ಕ್ರಿಕೆಟ್ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಿಂದೆ ಟಿ20 ಕ್ರಿಕೆಟ್​ನ ಸ್ವರೂಪವನ್ನು ಬದಲಿಸಿದ್ದ ಖ್ಯಾತಿ ಕೂಡ ಮೆಕಲಂಗೆ ಸಲ್ಲುತ್ತದೆ. ಏಕೆಂದರೆ ನ್ಯೂಜಿಲೆಂಡ್ ತಂಡದ ನಾಯಕರಾಗಿದ್ದಾಗ ಮೆಕಲಂ ಸ್ಪಿನ್ನರ್​ನಿಂದ ಮೊದಲ ಓವರ್​ ಹಾಕಿಸಿದ್ದರು. ಇದಾದ ಬಳಿಕ ಇದೇ ತಂತ್ರಗಳನ್ನು ಉಳಿದ ತಂಡಗಳ ನಾಯಕರುಗಳ ಪ್ರಯೋಗಿಸಲಾರಂಭಿಸಿದ್ದರು. ಅಂದರೆ ಮೆಕಲಂ ಯಾವುದೇ ಪ್ರಯೋಗಕ್ಕೂ ಹಿಂದೇಟು ಹಾಕುತ್ತಿರಲಿಲ್ಲ.

ಇನ್ನು ಮೆಕಲಂ ಬ್ಯಾಟಿಂಗ್ ಬಗ್ಗೆ ಹೇಳಲೇಬೇಕಿಲ್ಲ. ಏಕದಿನ ಕ್ರಿಕೆಟ್ ಇರಲಿ, ಟೆಸ್ಟ್ ಇರಲಿ ಬಾಝ್ ಬ್ಯಾಟ್ ಬೀಸಿದ್ದು ಮಾತ್ರ ಟಿ20 ಮಾದರಿಯಲ್ಲಿ ಎಂಬುದು ವಿಶೇಷ. ಇದೀಗ ಇಂಗ್ಲೆಂಡ್ ತಂಡದ ಕೋಚ್ ಆಗಿ ನೇಮಕವಾಗುತ್ತಿದ್ದಂತೆ ಟೆಸ್ಟ್​ ಕ್ರಿಕೆಟ್​ನಲ್ಲೂ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಮೆಕಲಂ ಕೋಚಿಂಗ್​ನಲ್ಲಿ ಇಂಗ್ಲೆಂಡ್ ಆಡಿದ ಕೊನೆಯ 4 ಪಂದ್ಯಗಳನ್ನು ಚೇಸಿಂಗ್​ ಮಾಡಿ ಗೆದ್ದಿರುವುದು. ಹೀಗಾಗಿಯೇ ಆಕ್ರಮಣಕಾರಿ ಟೆಸ್ಟ್ ಕ್ರಿಕೆಟ್ ಅನ್ನು ಬಾಝ್​ಬಾಲ್ ಎಂದು ವರ್ಣಿಸಲಾಗುತ್ತಿದೆ.

ಇವೆಲ್ಲದರ ನಡುವೆ ಟೆಸ್ಟ್ ಕ್ರಿಕೆಟ್​ನ ಸ್ವರೂಪವನ್ನೇ ಬಾಝ್ ಬದಲಿಸ್ತಾರಾ​? ಎಂಬ ಪ್ರಶ್ನೆಯೊಂದು ಮೂಡಿದೆ. ಬದಲಿಸಿದರೂ ಬದಲಿಸಬಹುದು ಏಕೆಂದರೆ, ಟೆಸ್ಟ್​ ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ್ದೇ ಬ್ರೆಂಡನ್ ಮೆಕಲಂ. ಅದು ಕೂಡ ಕೇವಲ 54 ಎಸೆತಗಳಲ್ಲಿ ಎಂಬುದು ವಿಶೇಷ. ಅಂದರೆ ಟೆಸ್ಟ್​ನಲ್ಲೂ ಬಾಝ್​ ಟಿ20 ಕ್ರಿಕೆಟ್ ಆಡಿದ್ದರು. ಇದೀಗ ಅಂತಹದೊಂದು ಆಕ್ರಮಣಕಾರಿ ಆಟದ ಝಲಕ್​ ಇಂಗ್ಲೆಂಡ್ ತಂಡದಲ್ಲಿ ಕಾಣಿಸುತ್ತಿದೆ. ಹೀಗಾಗಿಯೇ ಬಾಝ್​ ಗರಡಿಯಲ್ಲಿ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್​ನ ಸ್ವರೂಪ ಬದಲಿಸಲಿದೆಯಾ? ಎಂಬ ಪ್ರಶ್ನೆಯೊಂದು ಟೆಸ್ಟ್ ಪ್ರೇಮಿಗಳನ್ನು ಕಾಡುತ್ತಿದೆ. ಇದಕ್ಕೆ ಉತ್ತರ ಬದಲಿಸಿದರೂ ಬದಲಿಸಬಹುದು.

ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ