Rebel Star Ambareesh: ರೆಬೆಲ್​ ಸ್ಟಾರ್ ಅಭಿಮಾನಿಗಳಿಗೆ ಗುಡ್​ ನ್ಯೂಸ್​: ಬೆಂಗಳೂರು ರೇಸ್​ ಕೋರ್ಸ್​ ರಸ್ತೆಗೆ ಅಂಬರೀಷ್​ ಹೆಸರು

|

Updated on: Mar 18, 2023 | 7:47 PM

ಬೆಂಗಳೂರು ರೇಸ್​ ಕೋರ್ಸ್​ಗೆ ರೆಬೆಲ್​ ಸ್ಟಾರ್​ ಅಂಬರೀಶ್​ ಹೆಸರಿಡಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್​ ಸಿಂಗ್​ ಅವರು ಅನುಮೋದನೆ ನೀಡಿದ್ದಾರೆ.

Rebel Star Ambareesh: ರೆಬೆಲ್​ ಸ್ಟಾರ್ ಅಭಿಮಾನಿಗಳಿಗೆ ಗುಡ್​ ನ್ಯೂಸ್​: ಬೆಂಗಳೂರು ರೇಸ್​ ಕೋರ್ಸ್​ ರಸ್ತೆಗೆ ಅಂಬರೀಷ್​ ಹೆಸರು
ರೆಬೆಲ್​ ಸ್ಟಾರ್ ಅಂಬರೀಷ್​
Image Credit source: indiatimes.com
Follow us on

ಬೆಂಗಳೂರು: ಬೆಂಗಳೂರು ನಗರದ ಪ್ರಮುಖ ರಸ್ತೆಗೆ ಖ್ಯಾತ ನಟರ ಹೆಸರಿಡಲು ಬಿಬಿಎಂಪಿ ಅನುಮೋದನೆ ನೀಡಿದೆ. ಬೆಂಗಳೂರು ರೇಸ್​ ಕೋರ್ಸ್​ ರಸ್ತೆಗೆ (Race Course road) ರೆಬೆಲ್​ ಸ್ಟಾರ್​ ಅಂಬರೀಷ್ (Ambareesh)​ ಹೆಸರಿಡಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್​ ಸಿಂಗ್​ ಅವರು ಅನುಮೋದನೆ ನೀಡಿದ್ದಾರೆ. ಆ ಮೂಲಕ ರೆಬೆಲ್​ ಸ್ಟಾರ್​ ಅಂಬರೀಷ್​ ಹೆಸರು ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ರಾರಾಜಿಸಲಿದೆ. ಈ ಕುರಿತಾಗಿ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಾಮಾ ಹರೀಶ್​ ಅವರು ಟ್ವೀಟ್​ ಮಾಡಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸ್ಪಂದಿಸಿ, ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರಿಡಲು ಒಪ್ಪಿಗೆ ಸೂಚಿಸಿದ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳು. ರಸ್ತೆಗೆ ಹೆಸರಿಡುವ ಕಾರ್ಯಕ್ರಮ ಈ ವಾರದಲ್ಲೇ ನಡೆಯಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಕಮಲ ಅರಳಿಸುವ ಜವಾಬ್ದಾರಿ ಸುಮಲತಾ ಹೆಗಲಿಗೆ, ಅಮಿತ್ ಶಾ ಕೊಟ್ಟ ಟಾರ್ಗೆಟ್ ಏನು? 7 ಕ್ಷೇತ್ರದಲ್ಲಿಯೂ ಭರ್ಜರಿ ಪ್ರಚಾರಕ್ಕೆ ರೆಬಲ್ ಲೇಡಿ ಸಜ್ಜು

ಬೆಂಗಳೂರು ರೇಸ್​ ಕೋರ್ಸ್​ ರಸ್ತೆಯಲ್ಲಿರುವ ರಾಮನಾರಾಯಣ ಚೆಲ್ಲಾರಂ ಕಾಲೇಜಿನಿಂದ ಆರಂಭಗೊಂಡು ಆನಂದ್​ ರಾವ್​ ವೃತ್ತದ ವರೆಗಿನ ರಸ್ತೆಗೆ ಅಂಬರೀಷ್ ರಸ್ತೆ ಎಂದು ನಾಮಕರಣ ಮಾಡಲಾಗುತ್ತಿದೆ. ಈ ಕುರಿತಾಗಿ ಈ ಹಿಂದೆ ಸಿಎಂ ಬೊಮ್ಮಾಯಿ ಅವರು ಅಧಿಕೃತ ಘೋಷಣೆ ಮಾಡಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಮಂಡ್ಯದ ವಿಶೇಷ ಆರ್ಗಾನಿಕ್ ಬೆಲ್ಲವನ್ನ ಕೊಡುತ್ತೇನೆ: ಸಂಸದೆ ಸುಮಲತಾ

ಅಂಬರೀಷ್ ಅವರು 1972ರಿಂದ ಕನ್ನಡ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟರಲ್ಲಿ ಅವರು ಒಬ್ಬರಾಗಿದ್ದರು. ಮನವಳ್ಳಿ ಹುಚ್ಚೇಗೌಡ ಅಮರನಾಥ್ ಅವರ ಮೂಲ ಹೆಸರಾಗಿದ್ದರು ಅಂಬರೀಷ್ ಎಂದು ಹೆಸರುವಾಸಿಯಾಗಿದ್ದರು. ಇನ್ನು ಅಭಿಮಾನಿಗಳು ಅವರನ್ನು ಪ್ರೀತಿಯಿಂದ ರೆಬೆಲ್​ ಸ್ಟಾರ್ ಎಂದು ಕರೆಯುತ್ತಾರೆ. ಅಂಬರೀಷ್ ಅವರು ಕೇವಲ ನಟ ಮಾತ್ರವಲ್ಲದೇ ರಾಜಕಾರಣಿಯೂ ಹೌದು. ಕನ್ನಡ ಚಿತ್ರಗಳಲ್ಲಿ ಅಷ್ಟೇ ಅಲ್ಲದೆ ಹಿಂದಿ, ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಂಬರೀಷ್ ಅವರು 2018 ನವೆಂಬರ್​​ 24ರಂದು ಇಹಲೋಕ ತ್ಯಜಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:20 pm, Sat, 18 March 23