Anna Bhagya: ಇಂದಿನಿಂದ ಅನ್ನಭಾಗ್ಯ ಜಾರಿ, ಅಕ್ಕಿ ಬದಲು ಖಾತೆಗೆ ಬೀಳಲಿದೆ ಹಣ

| Updated By: ಆಯೇಷಾ ಬಾನು

Updated on: Jul 01, 2023 | 12:25 PM

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಬಿಪಿಎಲ್ ಹೊಂದಿರುವವರಿಗೆ ಅನ್ನ ಭಾಗ್ಯ ಯೋಜನೆ ಜುಲೈ 1ರಂದು ಜಾರಿಗೆ ಬಂದಿದೆ.

Anna Bhagya: ಇಂದಿನಿಂದ ಅನ್ನಭಾಗ್ಯ ಜಾರಿ, ಅಕ್ಕಿ ಬದಲು ಖಾತೆಗೆ ಬೀಳಲಿದೆ ಹಣ
ಅನ್ನ ಭಾಗ್ಯ
Follow us on

ಬೆಂಗಳೂರು: ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರ್ಕಾರದ ‘ಅನ್ನಭಾಗ್ಯ'(Anna Bhagya) ಯೋಜನೆ ಇಂದಿನಿಂದ (ಜುಲೈ 01) ಜಾರಿಯಾಗಿದೆ. ಆದ್ರೆ 5 ಕೆಜಿ ಅಕ್ಕಿ ಬದಲಿಗೆ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ(Congress Guarantee) ಯೋಜನೆಗಳಲ್ಲಿ ಒಂದಾದ ಬಿಪಿಎಲ್(BPL) ಹೊಂದಿರುವವರಿಗೆ ಅನ್ನ ಭಾಗ್ಯ ಯೋಜನೆ ಜುಲೈ 1ರಂದು ಜಾರಿಗೆ ಬಂದಿದೆ. ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡು ಹೊಂದಿರುವವರಿಗೆ ನೀಡುವ 5 ಕೆಜಿ ಅಕ್ಕಿ ಜೊತೆ ಮತ್ತೆ 5 ಕೆಜಿ ಅಕ್ಕಿ ನೀಡಬೇಕಿತ್ತು. ಆದ್ರೆ ಅಕ್ಕಿ ಸಮಸ್ಯೆ ಹಿನ್ನೆಲೆ ಅಕ್ಕಿ ಬದಲಿಗೆ ಹಣ ನೀಡುವುದಾಗಿ ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಘೋಷಿಣೆ ಮಾಡಿತ್ತು. ಅದರಂತೆ ಇಂದಿನಿಂದ ಅನ್ನ ಭಾಗ್ಯ ಯೋಜನೆ ರಾಜ್ಯಾದ್ಯಂತ ಜಾರಿಗೆ ಬಂದಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಹೆಚ್​.ಮುನಿಯಪ್ಪ ಮಾತನಾಡಿ, ಕೇಂದ್ರದ 5 ಕೆಜಿ ಅಕ್ಕಿ ವಿತರಣೆ ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಸದ್ಯಕ್ಕೆ ಕುಟುಂಬದ ಪ್ರತಿ ವ್ಯಕ್ತಿಗೆ 170 (ಪ್ರತಿ ಕೆ.ಜಿಗೆ 34 ರೂಪಾಯಿಗಳಂತೆ) ನೀಡುತ್ತೇವೆ. 90 ಪರ್ಸೆಂಟ್​ ಫಲಾನುಭವಿಗಳಲ್ಲಿ ಖಾತೆಗಳಿವೆ. ಅಕೌಂಟ್ ಇಲ್ಲದವರು ಮಾಡಿಸಿಕೊಳ್ಳಬೇಕು. ಒಬ್ಬರಿಗೆ 170 ರೂಪಾಯಿ ಕೊಡುತ್ತೇವೆ. ಅಕ್ಕಿ ಸಿಗುವರೆಗೆ ಮಾತ್ರ ಈ ಹಣ ನೀಡುವ ವ್ಯವಸ್ಥೆಯಿರುತ್ತದೆ ಎಂದಿದ್ದಾರೆ.

ಅಷ್ಟೆ ಅಲ್ಲದೆ ಹೆಚ್ಚುವರಿ 5 ಕೆಜಿ ಅಕ್ಕಿ ಸಿಗುವವರೆಗೂ ಖಾತೆಗೆ ಹಣ ಜಮೆ ಮಾಡುತ್ತೇವೆ. ಎಂಎಸ್​ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುತ್ತೇವೆ. ಅಕ್ಕಿ ಕೊಡಲು ನಾವು ಸಿದ್ದವಾಗಿದ್ದೇವೆ ಆದರೆ ಕೇಂದ್ರ ಸರ್ಕಾರ ಹೆಚ್ಚಿನ ಅಕ್ಕಿ ನೀಡಲು ಸಹಕಾರ ನೀಡಿಲ್ಲ. ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಅಕ್ಕಿಯನ್ನು ಮೂರು ಹೊತ್ತು ಜನರು ಸೇವಿಸುವುದಿಲ್ಲ. ದಕ್ಷಿಣ ಭಾಗದ ಜನರಿಗೆ ರಾಗಿ ನೀಡುತ್ತೇವೆ. ಉತ್ತರ ಕರ್ನಾಟಕ ಜನರಿಗೆ ಜೋಳ ಕೊಡುತ್ತೇವೆ. ರಾಗಿ ದಾಸ್ತಾನು ಇದೆ, ಜೋಳ ದಾಸ್ತಾನು ಇಲ್ಲ. ದಾಸ್ತಾನು ಆದ ಬಳಿಕ ಧಾನ್ಯಗಳ ಹಂಚಿಕೆ ಮಾಡುತ್ತೇವೆ. ಎಂಎಸ್ ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ ಜೋಳ ಅಥವಾ ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುತ್ತೇವೆ ಎಂದರು.

ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ನೀಡುವುದಕ್ಕೆ ರಾಜ್ಯದಲ್ಲೆಡೆ ಪರ ವಿರೋಧಗಳ ಸುರಿಮಳೆ

ರಾಜ್ಯದಲ್ಲಿ ಒಟ್ಟು 1 ಕೋಟಿ 28 ಲಕ್ಷ ಕಾರ್ಡ್‌ದಾರರು ಇದ್ದು 4 ಕೋಟಿ 42 ಲಕ್ಷ ಫಲಾನುಭವಿಗಳಿದ್ದಾರೆ. 1 ಕೋಟಿ 28 ಲಕ್ಷ ಕಾರ್ಡ್ ಗಳ ಪೈಕಿ 99.99% ಆಧಾರ್ ಸೀಡಿಂಗ್ ಆಗಿದೆ. ಇನ್ನು 1.22 ಕಾರ್ಡ್‌ದಾರರ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ. ಇನ್ನುಳಿದ ಬಾಕಿ 6 ಲಕ್ಷ ಕಾರ್ಡ್‌ಗಳು ಆಧಾರ್ ಲಿಂಕ್ ಆಗಬೇಕು. ಆಧಾರ್ ಲಿಂಕ್ ಆಗುತ್ತಿದ್ದಂತೆಯೇ ಬ್ಯಾಂಕ್ ಅಕೌಂಟ್ ಕೂಡ ಕಾರ್ಡ್ ಗಳಿಗೆ ಅಪ್ಡೇಟ್ ಆಗಬೇಕು. ಈ ಆರು ಲಕ್ಷ ಜನರು ಕಡ್ಡಾಯವಾಗಿ ಆಧಾರ್ ಜೊತೆಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿಸಬೇಕು‌. ಅಲ್ಲದೇ ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದ್ಯ ಅಂತ ಪರಿಶೀಲಿಸಬೇಕು. ಈ ಬಿಪಿಎಲ್ ದಾರರ ಹಣ ಜಮಾವಣೆಗೆ ಒಟ್ಟು ಸುಮಾರು 776.8 ಕೋಟಿಯಷ್ಟು ಖರ್ಚಾಗುತ್ತಿದ್ದೆ. ಆ್ಯಪ್ ಮೂಲಕ ನೇರವಾಗಿ ಕಾಡ್ ದಾರರ ಅಕೌಂಟಿಗೆ ಹಣ ನೇರವಾಗಿ ಜಮಾವಣೆ ಆಗುತ್ತದೆ.

ಸದ್ಯ ಅಕ್ಕಿಯ ಬದಲು ಸರ್ಕಾರ ಹಣ ಕೊಡಲಾಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ರಾಜ್ಯದಲ್ಲಿ ಜನರು ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರೆ ಜನರ ಪರ ವಿರೋಧದ ನಡುವೆಯೇ ಸಿದ್ದರಾಮಯ್ಯ ನವರ ಮಹತ್ವಕಾಂಶೆಯ ಯೋಜನೆ ಅನ್ನ ಭಾಗ್ಯ ಇಂದಿನಿಂದ ಆರಂಭವಾಗಿದ್ದು ರಾಜ್ಯದ ಜನರಿಗೆ ಅಕ್ಕಿಯ ಬದಲು ಸರ್ಕಾರದ ಹಣ ಎಷ್ಟರ ಮಟ್ಟಿಗೆ ತಲುಪುತ್ತದೆ ಕಾದು ನೋಡಬೇಕಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ