ಟ್ರಾಫಿಕ್ ಕಿರಿಕಿರಿಯಿಂದ ಬೆಂಗಳೂರಿಗೆ ವಾರ್ಷಿಕ 19.750 ಕೋಟಿ ರೂಪಾಯಿ ನಷ್ಟ; ಪರಿಹಾರಕ್ಕೆ ತಜ್ಞರು ನೀಡುವ ಸಲಹೆಗಳೇನು?
ಸಂಚಾರ ದಟ್ಟಣೆ, ವಿಳಂಬ, ದಟ್ಟಣೆ ಮತ್ತು ಸಿಗ್ನಲ್ ನಿಲುಗಡೆಗಳಿಂದಾಗಿ ಬೆಂಗಳೂರು ನಗರವು ವಾರ್ಷಿಕವಾಗಿ ಸುಮಾರು 19.750 ಕೋಟಿ ರೂಪಾಯಿ ಕಳೆದುಕೊಳ್ಳುತ್ತಿದೆ ಎಂದು ಟ್ರಾಫಿಕ್ ತಜ್ಞರೊಬ್ಬರು ಲೆಕ್ಕಾಚಾರ ಹಾಕಿದ್ದಾರೆ.
ಬೆಂಗಳೂರು: ಟ್ರಾಫಿಕ್ ಸಂಬಂಧಿತ ಸಮಸ್ಯೆಗಳನ್ನು (Traffic Problem) ಪರಿಹರಿಸಲು ಕರ್ನಾಟಕ ಸರ್ಕಾರವು ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್‌ನಂತಹ ತಂತ್ರಜ್ಞಾನ (Technology) ಸಾಧನಗಳನ್ನು ಬಳಸಬೇಕೆಂದು ಖ್ಯಾತ ಟ್ರಾಫಿಕ್ ಮತ್ತು ಮೊಬಿಲಿಟಿ ತಜ್ಞ ಎಂಎನ್ ಶ್ರೀಹರಿ ಒತ್ತಾಯಿಸಿದ್ದಾರೆ. ಅವರು ನಗರದ ಬೆಳವಣಿಗೆಗೆ ಹೊಂದಿಕೆಯಾಗುವ ರೀತಿಯಲ್ಲಿ ಬೆಂಗಳೂರಿನಲ್ಲಿ ರಸ್ತೆಗಳ ಯೋಜನೆ ಮತ್ತು ನಿರ್ಮಾಣಕ್ಕೆ ಶಿಫಾರಸು ಮಾಡಿದ್ದಾರೆ. ಖಾಸಗಿ ಸಾರಿಗೆಯ ಬಳಕೆಯನ್ನು ನಿರುತ್ಸಾಹಗೊಳಿಸಲು ನಗರದ ಸಾರ್ವಜನಿಕ ಸಾರಿಗೆ ಜಾಲವನ್ನು ವರ್ಧಿಸಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದಾರೆ ಎಂದು ‘ನ್ಯೂಸ್ 9’ ವರದಿ ಮಾಡಿದೆ.
ಬೆಂಗಳೂರಿಗೆ ವಾರ್ಷಿಕ 19.750 ಕೋಟಿ ರೂಪಾಯಿ ನಷ್ಟ
ಸಂಚಾರ ದಟ್ಟಣೆ, ವಿಳಂಬ, ದಟ್ಟಣೆ ಮತ್ತು ಸಿಗ್ನಲ್ ನಿಲುಗಡೆಗಳಿಂದಾಗಿ ನಗರವು ವಾರ್ಷಿಕವಾಗಿ ಸುಮಾರು 19.750 ಕೋಟಿ ರೂಪಾಯಿ ಕಳೆದುಕೊಳ್ಳುತ್ತಿದೆ ಎಂಬುದು ಶ್ರೀಹರಿ ಅವರು ಲೆಕ್ಕಾಚಾರ ಹಾಕಿದ್ದಾರೆ.
ವಿಶೇಷವೆಂದರೆ, 2017 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 2031ರ ದೂರದೃಷ್ಟಿಯೊಂದಿಗೆ ಪರಿಷ್ಕೃತ ಮಾಸ್ಟರ್ ಪ್ಲಾನ್ ಅನ್ನು ರೂಪಿಸಿತ್ತು. ಅದರಲ್ಲಿ ಕೂಡ ಸಂಚಾರ ದಟ್ಟಣೆಯಿಂದಾಗಿ ಉತ್ಪಾದಕತೆ ನಷ್ಟವಾಗುವ ಬಗ್ಗೆ ಉಲ್ಲೇಖಿಸಲಾಗಿತ್ತು. ವಾರ್ಷಿಕವಾಗಿ 600 ಮಿಲಿಯನ್ನಷ್ಟು ಸಮಯ ವ್ಯರ್ಥವಾಗುವುದರಿಂದ ನಗರಕ್ಕೆ 3,700 ಕೋಟಿ ರೂಪಾಯಿಗಳಷ್ಟು ವೆಚ್ಚವಾಗುತ್ತದೆ ಎಂದು ಅದು ಉಲ್ಲೇಖಿಸಿತ್ತು. 3,700 ಕೋಟಿ ರೂಪಾಯಿಯಲ್ಲಿ 1,350 ಕೋಟಿ ರೂಪಾಯಿ ಇಂಧನ ವೆಚ್ಚದ ನಷ್ಟಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿನ್ನು ಕೆಎಸ್ಆರ್ಟಿಸಿ ಬಸ್ಗಳು ಎಡ ಬದಿಯ ಲೇನ್ನಲ್ಲೇ ಸಂಚರಿಸಬೇಕು
ಕಾರ್ಪೂಲಿಂಗ್ ಸಲಹೆ
ನಗರದ ಪ್ರಸಿದ್ಧ ಐಟಿ ಉದ್ಯಮವು ಬೃಹತ್ ವಾಹನ ದಟ್ಟಣೆಯಿಂದ ಉಂಟಾಗುವ ಸಾಕಷ್ಟು ಸಮಸ್ಯೆಗಳಿಗೆ ತುಸುಮಟ್ಟಿಗೆ ಪರಿಹಾರ ಕಂಡುಕೊಂಡಿದೆ. ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದರ ಜತೆಗೆ, ವಾಯುಮಾಲಿನ್ಯವನ್ನು ತಡೆಗಟ್ಟುವುದಕ್ಕಾಗಿ ಕಾರ್-ಪೂಲಿಂಗ್ ಪರಿಕಲ್ಪನೆಯನ್ನು ಶಿಫಾರಸು ಮಾಡಲಾಗಿದೆ. ಕೆಆರ್ ಪುರಂ ವರೆಗಿನ ಸಿಲ್ಕ್ ಬೋರ್ಡ್ ಜಂಕ್ಷನ್ ನಡುವಿನ ಪ್ರದೇಶದಲ್ಲಿ 6.4 ಲಕ್ಷ ಐಟಿ ವೃತ್ತಿಪರರು ಕೆಲಸ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ