ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಹಣ ಹೂಡಿಕೆ ಕಂಪನಿಯಿಂದ ವಂಚನೆ ನಡೆದಿದೆ. ಇಕ್ರ ವೆಲ್ತ್ ಮ್ಯಾನೇಜ್ಮೆಂಟ್ ಕಂಪನಿಯಿಂದ ಭಾರೀ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಹೂಡಿಕೆ ಹಣಕ್ಕೆ ಅಧಿಕ ಬಡ್ಡಿ ಮತ್ತು ಲಾಭಾಂಶ ನೀಡುವುದಾಗಿ ಆಶ್ಔಆಸನೆ ಕೊಟ್ಟು ಲಕ್ಷ ಲಕ್ಷ ರೂಪಾಯಿ ಹಣ ಕಟ್ಟಿಸಿಕೊಂಡು ವಂಚನೆ ಎಸಗಿರುವುದು ವರದಿಯಾಗಿದೆ.
ಬೆಂಗಳೂರಿನ ತಿಲಕನಗರದ ಸ್ವಾಗತ್ ರಸ್ತೆಯಲ್ಲಿದ್ದ ಇಕ್ರ ವೆಲ್ತ್ ಮ್ಯಾನೇಜ್ಮೆಂಟ್ ಎಂಬ ಕಂಪನಿ 2020 ರಿಂದ ಹಣ ಕಟ್ಟಿಸಿಕೊಂಡು ವಂಚನೆ ಎಸಗಿದೆ ಎಂಬ ಆರೋಪ ಕೇಳಿಬಂದಿದೆ. ಹಣ ಕಟ್ಟಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಸಾರ್ವಜನಿಕರು ಇದೀಗ ದೂರು ಸಲ್ಲಿಸಿದ್ದಾರೆ. ಹೊರ ರಾಜ್ಯದವರಿಗೂ ವಂಚನೆ ಮಾಡಿರೋದು ಬೆಳಕಿಗೆ ಬಂದಿದ್ದು, ನಾಗಪುರ ಮೂಲದ ವ್ಯಕ್ತಿಗೆ 20 ಲಕ್ಷಕ್ಕೂ ಅಧಿಕ ಹಣ ವಂಚನೆಯಾಗಿದೆ.
ವಂಚನೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿರುವಾಗಿ ತಿಳಿದುಬಂದಿದೆ. ಸುಮಾರು 40 ಜನರಿಗೆ 2 ಕೋಟಿ ರೂಪಾಯಿಯಷ್ಟು ಹಣ ವಂಚಿಸಿರೋದು ಬೆಳಕಿಗೆ ಬಂದಿದೆ. ಅಬ್ದುಲ್ ನಜೀಮ್, ಹಿದಾಯತ್ ಉಲ್ಲಾ, ನಜೀಮ್, ಅಲಿಂ ಬಂಧಿತ ಆರೋಪಿಗಳು.
ತಿಲಕ್ ನಗರ ನಿವಾಸಿಯೊಬ್ಬರ ಬಳಿ 10 ಲಕ್ಷ, ಅವರ ಸ್ನೇಹಿತರ ಬಳಿ 5 ಲಕ್ಷ ಹಣ ಕಟ್ಟಿಸಿಕೊಂಡು ಮೋಸ ಮಾಡಿದ್ದಾರೆ. ಅಲ್ಲದೆ ಸಾರ್ವಜನಿಕರಿಂದಲೂ ಲಕ್ಷ ಲಕ್ಷ ಹಣ ಕಟ್ಟಿಸಿಕೊಂಡು ವಂಚನೆ ಎಸಗಲಾಗಿದೆ. ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇಕ್ರ ಕಂಪನಿಯ ಅಬ್ದುಲ್ ನಾಜಿಮ್ ಮೇಖ್ರಿ ಸೇರಿ ನಾಲ್ವರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.
ಅಬ್ದುಲ್ ನಾಜಿಮ್ ಮೇಖ್ರಿ ಸೇರಿ ನಾಲ್ವರ ವಿರುದ್ಧ ಸೆಕ್ಷನ್ 21 ಬಡ್ಸ್ ಆಕ್ಟ್- 2019, ಸೆಕ್ಷನ್ 9 ಕೆಪಿಐಡಿ ಆಕ್ಟ್ ಹಾಗೂ ಐಪಿಸಿ 506, 420 ಅಡಿ ಕೇಸ್ ದಾಖಲಾಗಿದೆ. ಸಿಆರ್ ಪಿಸಿ 91ರ ಅಡಿ ಪೊಲೀಸರು ಪಬ್ಲಿಕ್ ನೋಟಿಸ್ ಹೊರಡಿಸಿದ್ದಾರೆ. ಇಕ್ರದಲ್ಲಿ ಹಣ ಇನ್ವೆಸ್ಟ್ ಮಾಡಿ ಕಳೆದುಕೊಂಡಿದ್ರೆ ತಿಲಕನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಪೊಲೀಸರು ಸೂಚಿಸಿದ್ದಾರೆ.
Also Read:
ಅಮೆರಿಕಾದ ಪ್ರತಿಷ್ಠೆಯನ್ನು ಅಕ್ಷರಶಃ ಮಣ್ಣುಪಾಲು ಮಾಡಿದ ಉಗ್ರ ದಿನ ಇಂದು; 9/11 ದಾಳಿಯಿಂದ ಅಮೆರಿಕಾ ಕಲಿತ ಪಾಠವೇನು?
Also Read:
ತಾಲಿಬಾನ್ಗೆ ಧರ್ಮ ಸಂಕಟ! ಈ ಇಕ್ಕಟ್ಟಿನ ಪರಿಸ್ಥಿತಿಗೆ ಕಾರಣವಾಗಿರುವ ಭಾರತ ಕೈಗೊಳ್ಳುವುದೇ ದಿಟ್ಟ ಕ್ರಮ?
(another fraud case in bangalore 4 businessmen arrested by tilak nagar police)
Published On - 1:08 pm, Sat, 11 September 21