Gold Price Today: ಏರಿಕೆಯತ್ತ ಮುಖ ಮಾಡಿದ ಚಿನ್ನ, ಬೆಳ್ಳಿ ದರ; 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಬೆಲೆ ಎಷ್ಟಿದೆ ಗೊತ್ತಾ?
Gold Price Today: ಚಿನ್ನಾಭರಣ ಖರೀದಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಸಭೆ - ಸಮಾರಂಭಗಳು ಎದುರಿಗಿದ್ದಾಗ ಹೊಸ ಶೈಲಿ, ಹೊಸ ಸ್ಟೈಲ್ನ ಚಿನ್ನದ ಸರವನ್ನೋ ಅಥವಾ ಕಿವಿಯೋಲೆಯನ್ನೋ ಖರೀದಿಸಬೇಕು ಅಂದೆನಿಸುತ್ತದೆ. ಆಗ ಮಾರುಕಟ್ಟೆಯಲ್ಲಿ ಚಿನ್ನಾಭರಣದ ದರ ಎಷ್ಟಿದೆ? ಎಂಬ ಪ್ರಶ್ನೆ ಮೂಡುವುದು ಸಹಜ.
Gold Silver Price Today | ಬೆಂಗಳೂರು: ನಿನ್ನೆ ಹಲವೆಡೆ ಚಿನ್ನದ ದರ ಇಳಿಕೆ ಕಂಡಿತ್ತು, ಇನ್ನು ಬೆಳ್ಳಿ ದರದಲ್ಲಿ ಕೂಡ ಇಳಿಕೆಯಾಗಿತ್ತು. ಆದರೆ ಇಂದು ( ಸೆಪ್ಟೆಂಬರ್ 11, ಶನಿವಾರ) ಚಿನ್ನದ ದರದಲ್ಲಿ (Gold Price) ಏರಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿ (Silver Price) ಕೂಡ ಕೊಂಚ ಏರಿಕೆ ಆಗಿದೆ. ಪ್ರಮುಖ ನಗರಗಳಲ್ಲಿ ಚಿನ್ನಾಭರಣ ದರ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ. ನೀವು ಕೂಡಿಟ್ಟ ಹಣದಲ್ಲಿ ಸರಿಹೊಂದುವುದಾದರೆ ಚಿನ್ನಾಭರಣ ಕೊಳ್ಳುವ ಕುರಿತಾಗಿ ಇಂದು ಯೋಚಿಸಬಹುದು.
ಚಿನ್ನಾಭರಣ ಖರೀದಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಸಭೆ – ಸಮಾರಂಭಗಳು ಎದುರಿಗಿದ್ದಾಗ ಹೊಸ ಶೈಲಿ, ಹೊಸ ಸ್ಟೈಲ್ನ ಚಿನ್ನದ ಸರವನ್ನೋ ಅಥವಾ ಕಿವಿಯೋಲೆಯನ್ನೋ ಖರೀದಿಸಬೇಕು ಅಂದೆನಿಸುತ್ತದೆ. ಆಗ ಮಾರುಕಟ್ಟೆಯಲ್ಲಿ ಚಿನ್ನಾಭರಣದ ದರ ಎಷ್ಟಿದೆ? ಎಂಬ ಪ್ರಶ್ನೆ ಮೂಡುವುದು ಸಹಜ. ಇಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,100 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,41,000 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 1,000 ರೂಪಾಯಿ ಏರಿಕೆ ಕಂಡಿದೆ. ಅದರಂತೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,110 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,81,100 ರೂಪಾಯಿ. ದೈನಂದಿನ ದರ ಬದಲಾವಣೆಯಲ್ಲಿ 1,100 ರೂಪಾಯಿ ಏರಿಕೆ ಕಂಡಿದೆ. ಕೆಜಿ ಬೆಳ್ಳಿ ಬೆಲೆ 64,200 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 300 ರೂಪಾಯಿ ಏರಿಕೆ ಕಂಡು ಬಂದಿದೆ.
ಚೆನ್ನೈನಲ್ಲಿ ಚಿನ್ನಾಭರಣದ ಬೆಲೆ ನಿನ್ನೆಗಿಂತ ಕೊಂಚ ಏರಿಕೆ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,510 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,45,100 ರೂಪಾಯಿ ನಿಗದಿಯಾಗಿದೆ. ಸುಮಾರು 1700 ರೂಪಾಯಿ ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,560 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,85,600 ರೂಪಾಯಿ ನಿಗದಿಯಾಗಿದೆ. ಸುಮಾರು 1900 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಕೆಜಿ ಬೆಳ್ಳಿಗೆ 68,500 ರೂಪಾಯಿ ನಿಗದಿಯಾಗಿದೆ. ದೈನಂದಿನ ಬದಲಾವಣೆಯಲ್ಲಿ 200 ರೂಪಾಯಿ ಏರಿಕೆಯಾಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,250 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,62,500 ರೂಪಾಯಿ ನಿಗದಿಯಾಗಿದೆ. ದೈನಂದಿನ ಬದಲಾವಣೆಯಲ್ಲಿ 1,500 ರೂಪಾಯಿ ಏರಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,450 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,04,500 ರೂಪಾಯಿ ನಿಗದಿಯಾಗಿದೆ. ಕೆಜಿ ಬೆಳ್ಳಿ ಬೆಲೆ ಏರಿಕೆಯಾಗಿದೆ. 300 ರೂಪಾಯಿ ಏರಿಕೆ ಬಳಿಕ ಕೆಜಿ ಬೆಳ್ಳಿಗೆ 45,200 ರೂಪಾಯಿ ನಿಗದಿಯಾಗಿದೆ.
ಬೆಂಗಳೂರು, ದೆಹಲಿ, ಚೆನ್ನೈ ಸೇರಿದಂತೆ ಹಲವೆಡೆ ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. ಅದೇ ರೀತಿ, ಬೆಳ್ಳಿ ದರದಲ್ಲಿಯೂ ಸಹ ಏರಿಕೆಯಾಗಿದೆ. ನೀವು ಇಷ್ಟು ವರ್ಷಗಳ ಕಾಲ ಚಿನ್ನಾಭರಣ ಖರೀದಿಸಲೆಂದು ಸಂಗ್ರಹಿಸಿದ ಹಣದಲ್ಲಿ ಆಭರಣ ಖರೀದಿಸಬೇಕೆಂದು ಅಂದುಕೊಂಡಿದ್ದರೆ ಆ ಕುರಿತಾಗಿ ಯೋಚಿಸಬಹುದು.
ಇದನ್ನೂ ಓದಿ:
Gold Rate Today: ಚಿನ್ನ ದರ ಕೊಂಚ ಏರಿಕೆ, ಬೆಳ್ಳಿ ದರ ಇಳಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?
Gold Rate Today: ವಿವಿಧ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ದರ ಭಾರೀ ಇಳಿಕೆ; ಹೀಗಿದೆ ಬೆಲೆ
(Gold price increase today 0n 2021 september 11 check silver price in bangalore delhi mumbai and minor city)