Raghuram Rajan: ಖಾಸಗೀಕರಣದ ಬದಲು ಆಡಳಿತ ಸುಧಾರಿಸಿ, ಉತ್ತಮ ನಿಯಮ ರೂಪಿಸಿ ಎಂದ ರಘುರಾಮ್ ರಾಜನ್

ಖಾಸಗೀಕರಣದ ಬದಲಿಗೆ ಆಡಳಿತ ಮತ್ತು ನಿಯಮ ಸುಧಾರಣೆ ಕಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಆರ್​ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯ ಪಟ್ಟಿದ್ದಾರೆ.

Raghuram Rajan: ಖಾಸಗೀಕರಣದ ಬದಲು ಆಡಳಿತ ಸುಧಾರಿಸಿ, ಉತ್ತಮ ನಿಯಮ ರೂಪಿಸಿ ಎಂದ ರಘುರಾಮ್ ರಾಜನ್
ರಘುರಾಮ್ ರಾಜನ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Sep 11, 2021 | 12:09 AM

ಬ್ಯಾಂಕ್​ಗಳೂ ಸೇರಿದಂತೆ ಸಾರ್ವಜನಿಕ ವಲಯದ ಉದ್ಯಮಗಳ ಅವಶ್ಯಕತೆ ನಮಗೆ ಇದೆ ಮತ್ತು ಉತ್ತಮ ಆಡಳಿತವು ಸಂಪೂರ್ಣ ಖಾಸಗೀಕರಣದಂತೆಯೇ ನಿರೀಕ್ಷಿತ ಪರಿಣಾಮವನ್ನು ಬೀರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟರು. clubhouse.comನಲ್ಲಿ ‘ನವ ಆರ್ಥಿಕತೆ – ಪ್ರಪಂಚದ ಮರುವಿನ್ಯಾಸ’ ಎಂಬ ವಿಷಯದ ಕುರಿತು ಒಂದು ಗುಂಪಿನ ಭಾಗವಾಗಿದ್ದರು ರಘುರಾಮ್ ರಾಜನ್. ಗುಂಪಿನಲ್ಲಿದ್ದ ಇತರ ಭಾಷಣಕಾರರು ಅಂದರೆ, ಭಾರತದ ಟೆಲಿಕಾಂ ಕ್ರಾಂತಿಯ ಹರಿಕಾರ ಸ್ಯಾಮ್ ಪಿತ್ರೋಡ. ಖಾಸಗೀಕರಣದ ಕುರಿತು ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರೀನೇಟ್ ಅವರ ಪ್ರಶ್ನೆಗೆ ಉತ್ತರಿಸಿದ ತಮಿಳುನಾಡಿನ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್, ನಮ್ಮ ಸರ್ಕಾರವು ಖಾಸಗಿ ಹಾಗೂ ಸಹಕಾರಿ ವಲಯದ ಪಾತ್ರವನ್ನು ಗುರುತಿಸುತ್ತದೆ. ಆದರೆ ಸಾರ್ವಜನಿಕ ಸರಕುಗಳು ಮತ್ತು ಸೇವೆಗಳು, ರಸ್ತೆಗಳು, ಮೂಲಸೌಕರ್ಯಗಳು ಸರ್ಕಾರದೊಂದಿಗೆ ಇರಬೇಕು ಎಂದು ಹೇಳಿದರು.

“ನಮಗೆ ಬಂಡವಾಳದ ಅಗತ್ಯವಿದೆ, ಮತ್ತು ಜಂಟಿ ಉದ್ಯಮಗಳು ಬೇಕಾಗುತ್ತವೆ (ಸಾರ್ವಜನಿಕ ಮತ್ತು ಖಾಸಗಿ ನಡುವೆ). ಏಕೆಂದರೆ ನಾವು ಎರಡೂ ಕಡೆ ಅತ್ಯುತ್ತಮವಾದುದನ್ನು ನೋಡುತ್ತೇವೆ. ಜಾಗತಿಕ ಮತ್ತು ರಾಷ್ಟ್ರೀಯ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಸಹ ಕೆಲವು ದಕ್ಷತೆಗಳನ್ನು ತರುತ್ತವೆ. ಆದರೆ ನಾವು ಕೋರ್ ಮತ್ತು ಕಾರ್ಯತಂತ್ರದ ಸ್ವತ್ತುಗಳ ಹಣ ಗಳಿಕೆ ಮತ್ತು ವಿಮಾನ ನಿಲ್ದಾಣಗಳು, ಬಂದರುಗಳು ಮುಂತಾದ ಭದ್ರತೆ-ಸಂಬಂಧಿತ ಸ್ವತ್ತುಗಳನ್ನು ನಗದೀಕರಣ ಮಾಡುವುದನ್ನು ವಿರೋಧಿಸುತ್ತೇವೆ. ನಮ್ಮ ಮುಖ್ಯಮಂತ್ರಿಗಳು (ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್) ಇಂತಹ ಹಣ ಗಳಿಕೆಯ ವಿರುದ್ಧ ಪ್ರಧಾನಿಗೆ ಪತ್ರ ಬರೆದಿದ್ದಾರೆ,” ಎಂದು ತ್ಯಾಗರಾಜನ್ ಹೇಳಿದ್ದಾರೆ.

ಖಾಸಗಿ ವಲಯದ ಏಕಸ್ವಾಮ್ಯ ಆಗಬಹುದು ಎಲ್ಲ ಕ್ಷೇತ್ರಗಳಿಗೂ ಸ್ಪಷ್ಟವಾದ ಪಾತ್ರಗಳಿವೆ ಎಂದು ರಘುರಾಮ್ ರಾಜನ್ ಒಪ್ಪಿಕೊಂಡರು. ಸರ್ಕಾರವು ಗಡಿಯಾರ ಮಾಡುವ ವ್ಯವಹಾರದಲ್ಲಿ (ಎಚ್‌ಎಂಟಿಯಂತಹ) ಇಲ್ಲದಿರಬಹುದು. ಆದರೆ ರಾಜ್ಯವು ವಿಭಿನ್ನ ಉದ್ದೇಶಗಳನ್ನು ಹೊಂದಿದೆ ಮತ್ತು ಏಕಸ್ವಾಮ್ಯವನ್ನು ತಡೆಗಟ್ಟಲು ಸಾಕಷ್ಟು ಸ್ಪರ್ಧೆ ಇದೆ ಎಂದು ಖಚಿತಪಡಿಸಿಕೊಳ್ಳಬೇಕು. ಪ್ರಮುಖ ಮೂಲಸೌಕರ್ಯ ವಿಚಾರಕ್ಕೆ ಬಂದಲ್ಲಿ ನೀವು ಅದನ್ನು ಖಾಸಗಿ ವಲಯಕ್ಕೆ ಸಮರ್ಪಕ ನಿಯಂತ್ರಣವಿಲ್ಲದೆ ನೀಡಿದರೆ, ಅದು ಖಾಸಗಿ ವಲಯದ ಏಕಸ್ವಾಮ್ಯ ಆಗಬಹುದು ಮತ್ತು ಖಾಸಗಿ ವಲಯವು ಸಾರ್ವಜನಿಕರನ್ನು ಹಿಂಡಬಹುದು ಎಂದು ರಾಜನ್ ಹೇಳಿದರು.

ಸ್ಯಾಮ್ ಪಿತ್ರೋಡಾ ಮಾತನಾಡಿ, ಖಾಸಗಿ ವ್ಯಕ್ತಿಗಳಿಗೆ ಸಂಪೂರ್ಣ ಮಾರಾಟ ಮಾಡುವ ಬದಲು, ಸರ್ಕಾರವು ಸಾರ್ವಜನಿಕರಿಗೆ ಷೇರು ಮಾರಾಟದ ಮೂಲಕ ತನ್ನ ಹೋಲ್ಡಿಂಗ್ ಅನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದರು. ಈ ಮಾತಿಗೆ ರಘುರಾಮ್ ರಾಜನ್ ಒಪ್ಪಿದರು. “ನಾವು ಆಡಳಿತವನ್ನು ಸುಧಾರಿಸುವತ್ತ ಏಕೆ ಗಮನಹರಿಸಬಾರದು? ನೀವು ಸಾರ್ವಜನಿಕ ಸಮಸ್ಯೆಗಳ ಮೂಲಕ ಖಾಸಗೀಕರಣ ಮಾಡಬಹುದು, ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬಹುದು. ಈ ರೀತಿ ಐಸಿಐಸಿಐ ಖಾಸಗಿ ಸಂಸ್ಥೆಯಾಗಿದೆ, ಆದರೆ ಇದು ಹೆಚ್ಚಿನ ಪಕ್ಷ ಸಾರ್ವಜನಿಕ ಬ್ಯಾಂಕ್​ನಂತೆಯೇ ಆಗಿದೆ,” ಎಂದು ರಾಜನ್ ಹೇಳಿದರು. ಬ್ಯಾಂಕಿಂಗ್‌ನಲ್ಲಿಯೂ ಖಾಸಗಿ ವಲಯಕ್ಕೆ ಸಾಕಷ್ಟು ಪ್ರಮಾಣದ ಸ್ಪರ್ಧೆ ಇದೆ. “ಆದರೆ ನೀವು ಅವರಿಗೆ ನೆರವು ಒದಗಿಸದಿದ್ದಲ್ಲಿ ಅಥವಾ ಸವಲತ್ತು ನೀಡದಿದ್ದರೆ ಸಾರ್ವಜನಿಕ ವಲಯದ ಅವಶ್ಯಕತೆ ಇದೆ,” ಎಂದರು

ಖಾಸಗಿ ವಲಯದಿಂದ ದುರ್ಬಳಕೆ ಆಗಬಾರದು ಸರ್ಕಾರವು ಸಾರ್ವಜನಿಕ ವಲಯದ ಬ್ಯಾಂಕ್​ಗಳನ್ನು ಹಿಡಿದಿಡಲು ಒಲವು ತೋರುತ್ತಿದೆ. ಆದರೆ ಪ್ರತಿಭಾವಂತರನ್ನು ನೇಮಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಉತ್ತಮ ಮ್ಯಾನೇಜ್​ಮೆಂಟ್​ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಬಯಸುವುದಿಲ್ಲ ಮತ್ತು ಬ್ಯಾಂಕ್​ಗಳೇ ಪ್ರಾಯೋಜಿಸಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್‌ಮೆಂಟ್ (NIBM) ನಂತಹ ಸಂಸ್ಥೆಗಳಿಂದಲೂ ಬ್ಯಾಂಕ್​ಗಳಿಗೆ ನೇಮಿಸಿಕೊಳ್ಳಲು ಸಾಧ್ಯವಿಲ್ಲ. “ನಾವು ಸಾರ್ವಜನಿಕ ಬ್ಯಾಂಕ್​ಗಳ ಕೈಕಾಲು ಕಟ್ಟಿ ಹಾಕುತ್ತಿದ್ದೇವೆ. ಸಾರ್ವಜನಿಕ ವಲಯವು ಸ್ವತ್ತುಗಳ ಬಳಕೆ ಏಕೆ ಮಾಡಿಕೊಳ್ಳಬಾರದು ಎಂದು ನನಗೆ ಅರ್ಥವಾಗುತ್ತಿಲ್ಲ, ಆದರೆ ಮತ್ತೆ ಮುಖ್ಯ ಪ್ರಶ್ನೆಯಿದೆ. ಮತ್ತು ಖಾಸಗಿ ವಲಯವು ವ್ಯವಸ್ಥೆಯನ್ನು ದುರ್ಬಳಕೆ ಮಾಡದಂತೆ ನಿಬಂಧನೆಗಳು ಮತ್ತು ನಿಯಮಗಳನ್ನು ರೂಪಿಸಲಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು,” ಎಂದು ರಾಜನ್ ಹೇಳಿದರು.

“ಉತ್ತಮ ಆಡಳಿತ ಮತ್ತು ಉತ್ತಮ ನಿಯಮಗಳ ಮೂಲಕ ಖಾಸಗೀಕರಣದಂತೆಯೇ ಮಾಡಬಹುದು,” ಎಂದು ಪ್ರಸ್ತುತ ಷಿಕಾಗೊ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬಿಜಿನೆಸ್‌ನಲ್ಲಿ ಫೈನಾನ್ಸ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ರಾಜನ್ ಹೇಳಿದರು. ಆರೋಗ್ಯ ಮತ್ತು ಶಿಕ್ಷಣದ ಮೇಲೆ ಸಾಕಷ್ಟು ಗಮನಹರಿಸಿಲ್ಲ ಮತ್ತು ವೆಚ್ಚವನ್ನು ಕಡಿತಗೊಳಿಸಿದ್ದಕ್ಕಾಗಿ ಸರ್ಕಾರವನ್ನು ಟೀಕಿಸಿದರು. “ಹಣ ಎಲ್ಲಿ ಹೋಯಿತು? ಜಿಡಿಪಿಗೆ ನಮ್ಮ ಸಾಲವು ಶೇಕಡಾ 90ಕ್ಕಿಂತ ಹೆಚ್ಚು, ಮತ್ತು ಜನರು ಬಡತನಕ್ಕೆ ಜಾರಿದಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ. ಜನರ ಸಾಮರ್ಥ್ಯವನ್ನು ಹೆಚ್ಚಿಸಲು, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ನಾವು ಹಣವನ್ನು ಖರ್ಚು ಮಾಡುತ್ತೇವೆ ಎಂಬ ಭರವಸೆ ಇತ್ತು. ನಮ್ಮ ಆದ್ಯತೆಗಳನ್ನು ಸರಿಯಾಗಿ ಪಡೆದುಕೊಂಡಿದ್ದೇವೆಯೇ? ಸಂಗತಿಗಳು ಹದಗೆಡುತ್ತಿವೆ,” ಎಂದು ರಾಜನ್ ಹೇಳಿದರು.

“ಇದು ತುಂಬ ಆತಂಕಕಾರಿ ಪರಿಸ್ಥಿತಿ. ನಾವು ಖರ್ಚು ಮಾಡುವುದಿಲ್ಲ ಎಂದು ಹೇಳುವುದು ತಪ್ಪು. ನಿಮಗೆ ಎಲ್ಲಿ ಖರ್ಚು ಬೇಕೋ ಅಲ್ಲಿ ಖರ್ಚು ಮಾಡುವುದು ಮುಖ್ಯ. ಸಂಪನ್ಮೂಲಗಳನ್ನು ಹೆಚ್ಚಿಸಿ. ಆದರೆ ಅಗತ್ಯವಿರುವ ಕಡೆ ಖರ್ಚು ಮಾಡುವ ಕಡೆಗೆ ನಿರ್ದೇಶಿಸಿ. ನಾವು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಬಗ್ಗೆ ಹೆಚ್ಚು ಖರ್ಚು ಮಾಡಬೇಕಾಗಿದೆ. ಇದು ಖಂಡಿತವಾಗಿಯೂ ಬಹಳ ಸಂಕೀರ್ಣವಾದ ಸಮಸ್ಯೆಯಾಗಿದೆ ಆದರೆ ಮುಂದಿನ ಕೆಲವು ವರ್ಷಗಳಲ್ಲಿ ನಮ್ಮ ಶ್ರಮ ಅಲ್ಲಿಯೇ ಇರಬೇಕು,” ಎಂದು ರಾಜನ್ ಹೇಳಿದರು.

ಇದನ್ನೂ ಓದಿ: Raghuram Rajan: ಸ್ವಾತಂತ್ರ್ಯಾ ನಂತರ ಭಾರತ ಕಂಡ ಅತ್ಯಂತ ದೊಡ್ಡ ಸವಾಲು ಕೋವಿಡ್-19 ಬಿಕ್ಕಟ್ಟು ಎಂದ ರಘುರಾಮ್ ರಾಜನ್

(Instead Of Privatisation Improve Governance And Rules Said Former RBI Governor Raghuram Rajan)

Published On - 12:01 am, Sat, 11 September 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ