ಚಾಮರಾಜಪೇಟೆ ಮೈದಾನ ವಿವಾದಕ್ಕೆ ಮತ್ತೊಂದು ಟ್ವಿಸ್ಟ್; ಮೈದಾನದ ಮೂಲ ದಾಖಲಾತಿಗಳು ಬಿಬಿಎಂಪಿ ಬಳಿ ಇಲ್ಲವಂತೆ! ಮುಂದೇನು?

| Updated By: ಆಯೇಷಾ ಬಾನು

Updated on: Jun 14, 2022 | 4:48 PM

ಮೈದಾನದ ವಿಚಾರವಾಗಿ ಈ ಹಿಂದೆ ಯಾರೋ ಖಾಸಗಿ ವ್ಯಕ್ತಿ ಇದು ನನ್ನ ಜಾಗ ಎಂದು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದರು. ಆಗ ಸುಪ್ರಿಂ ಕೋರ್ಟ್ ವರ್ಷದಲ್ಲಿ ಎರಡು ದಿನ ಪ್ರಾರ್ಥನೆಗೆ ಅವಕಾಶ ನೀಡಲು ಸೂಚಿಸಿದೆ. ಈ ಮೈದಾನದ ಮೂಲ ದಾಖಲೆಗಳು ಬಿಬಿಎಂಪಿ ಬಳಿ ಇಲ್ಲ. ಸದ್ಯ ಬಿಬಿಎಂಪಿ ಜಂಟಿ ಆಯುಕ್ತರು, ಸರ್ವೆ ಇಲಾಖೆಗೆ ತೆರಳಿ ಮೂಲ ದಾಖಲೆ ಹುಡುಕುವ ಕೆಲಸ ಮಾಡುತ್ತಿದ್ದಾರೆ.

ಚಾಮರಾಜಪೇಟೆ ಮೈದಾನ ವಿವಾದಕ್ಕೆ ಮತ್ತೊಂದು ಟ್ವಿಸ್ಟ್; ಮೈದಾನದ ಮೂಲ ದಾಖಲಾತಿಗಳು ಬಿಬಿಎಂಪಿ ಬಳಿ ಇಲ್ಲವಂತೆ! ಮುಂದೇನು?
ಚಾಮರಾಜಪೇಟೆಯ ಈದ್ಗಾ ಮೈದಾನ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಚಾಮರಾಜಪೇಟೆ ಮೈದಾನ ವಿಚಾರ( Chamrajpet Edga Ground Controversy) ದಿನದಿಂದ ದಿನಕ್ಕೆ ತಾರಕ್ಕೇರುತ್ತಿದೆ. ಮೊನ್ನೆ ಸ್ಥಳೀಯರು ಮತ್ತು ಪೊಲೀಸರ ನಡುವೆ ಕಾಳಗ ನಡೆದಿತ್ತು. ಇದೀಗ ಹಿಂದೂಪರ ಸಂಘಟನೆ, ಮೈದಾನ ವಿಚಾರವಾಗಿ ಪಾಲಿಕೆಗೆ ಡೆಡ್ ಲೈನ್ ಕೊಟ್ಟಿದ್ದು, ಇದೀಗ ಚಾಮರಾಜಪೇಟೆ ಮೈದಾನ ವಿವಾದಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮೈದಾನದ ಮೂಲ ದಾಖಲಾತಿಗಳು ಬಿಬಿಎಂಪಿ ಬಳಿ ಇಲ್ಲ.

ಮೈದಾನದ ವಿಚಾರವಾಗಿ ಈ ಹಿಂದೆ ಯಾರೋ ಖಾಸಗಿ ವ್ಯಕ್ತಿ ಇದು ನನ್ನ ಜಾಗ ಎಂದು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದರು. ಆಗ ಸುಪ್ರಿಂ ಕೋರ್ಟ್ ವರ್ಷದಲ್ಲಿ ಎರಡು ದಿನ ಪ್ರಾರ್ಥನೆಗೆ ಅವಕಾಶ ನೀಡಲು ಸೂಚಿಸಿದೆ. ಈ ಮೈದಾನದ ಮೂಲ ದಾಖಲೆಗಳು ಬಿಬಿಎಂಪಿ ಬಳಿ ಇಲ್ಲ. ಸದ್ಯ ಬಿಬಿಎಂಪಿ ಜಂಟಿ ಆಯುಕ್ತರು, ಸರ್ವೆ ಇಲಾಖೆಗೆ ತೆರಳಿ ಮೂಲ ದಾಖಲೆ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಮೈದಾನದಲ್ಲಿ ಕಾರ್ಯಕ್ರಮ ಮಾಡುವವರು ಮನವಿ ಪತ್ರ ನೀಡಲಿ. ಬಿಬಿಎಂಪಿ, ಪೊಲೀಸ್ ಇಲಾಖೆ ಜೊತೆ ಸಭೆ ನಡೆಸಿ ಅಂತಿಮ ತೀರ್ಮಾನ ಮಾಡಲಾಗುವುದು. ಆದರೆ ಇಂದೇ ಕಾರ್ಯಕ್ರಮಕ್ಕೆ ಅನುಮತಿ ನೀಡುವುದು ಅನುಮಾನ. ಹೀಗಾಗಿ ಮೂಲ ದಾಖಲೆ ಪತ್ರ ಸಿಕ್ಕ ಬಳಿಕ ಅನುಮತಿ ವಿಚಾರ ಚರ್ಚೆಯಾಗಲಿದೆ. ಇದನ್ನೂ ಓದಿ: ಚಿಕ್ಕಮಗಳೂರು: ಮುಸ್ಲಿಮರು ಪೂಜಿಸುತ್ತಿದ್ದ ದೇವರಕಟ್ಟೆಗೆ ಬೆಂಕಿ, ಕುರಾನ್, ಪೂಜಾ ಸಾಮಗ್ರಿಗಳಿಗೆ ಹಾನಿ

ಜೂ.21ರಂದು ಯೋಗ ದಿನಾಚರಣೆಗೆ ಅನುಮತಿ ನೀಡುವಂತೆ ಮನವಿ
ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನವನ್ನು ಜೂ.21ರಂದು ಯೋಗ ದಿನಾಚರಣೆಗೆ ಅನುಮತಿ ನೀಡುವಂತೆ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ವಿಶ್ವ ಸನಾತನ ಹಿಂದೂ ಪರಿಷತ್ ಮನವಿ ಮಾಡಿದೆ. ​ಮೈದಾನದಲ್ಲಿ ನಮಗೆ ಅನುಮತಿ ಕೊಡಿ, ಕೊಡಲ್ಲ ಅಂತಾದ್ರೂ ಹೇಳಿ. ಮುಂದೆ ಏನು ಮಾಡಬೇಕೋ ನಾವು ನಿರ್ಣಯ ತೆಗೆದುಕೊಳ್ತೇವೆ ಎಂದಿದ್ದಾರೆ. ಅಲ್ಲದೆ ಕೋರ್ಟ್​ಗೆ ಹೋಗೋದಕ್ಕೆ ಸಿದ್ಧವೆಂದಿದ್ದ ಸನಾತನ ಹಿಂದೂ ಪರಿಷತ್ ಇವತ್ತು ಮಧ್ಯಾಹ್ನ 3 ಗಂಟೆವರೆಗೆ ಬಿಬಿಎಂಪಿಗೆ ಡೆಡ್​ಲೈನ್ ಕೊಟ್ಟಿದ್ದರು. ಆದರೆ ಬಿಬಿಎಂಪಿಯಿಂದ ಯಾವುದೇ ಗ್ರೀನ್ ಸಿಗ್ನಲ್ ಸಿಗದ ಹಿನ್ನೆಲೆ ಪಶ್ಚಿಮ ವಲಯದ ಜಂಟಿ ಆಯುಕ್ತರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ.

ಹೈ ಕೋರ್ಟ್ ಅಂಗಳಕ್ಕೆ ಹೋಗುತ್ತಾ ಈದ್ಗಾ ವಾರ್?
ಈ ವಿಚಾರಕ್ಕೆ ಸಂಬಂಧಿಸಿ ಮಗದೊಮ್ಮೆ ಕೋರ್ಟ್ ಕದ ತಟ್ಟಲು ಹಿಂದೂ ಸಂಘಟನೆ ಸಜ್ಜಾಗಿದೆ. ಬಿಬಿಎಂಪಿಗೆ ಮೂರು ದಿನದ ಡೆಡ್ ಲೈನ್ ನೀಡಲಾಗಿತ್ತು. ಯೋಗ ದಿನಾಚರಣೆಗೆ ಅವಕಾಶ ಕೊಡದೇ ಇದ್ರೇ, ಬಿಬಿಎಂಪಿ ಇದನ್ನು ಬಿಬಿಎಂಪಿ ಮೈದಾನ ಅಂತಾ ಘೋಷಿಸದೇ ಇದ್ರೇ ಹೈಕೋರ್ಟ್ ಮೊರೆ ಹೋಗುವುದಾಗಿ ಹಿಂದೂ ಸಂಘಟನೆ ತಿಳಿಸಿತ್ತು. ಸದ್ಯ ಬಿಬಿಎಂಪಿ ಕಾನೂನು ಕೋಶದ ಅಭಿಪ್ರಾಯ ಕೇಳಿದೆ. ಇನ್ನೂ ಕಾನೂನು ಕೋಶ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಈ ಮಧ್ಯೆ ಬಿಬಿಎಂಪಿಯ ವಿಳಂಬ ಧೋರಣೆಗೆ ಕೆರಳಿದ ಹಿಂದೂ ಸಂಘಟನೆಗಳು ಮತ್ತೆ ಮೂರು ದಿನದ ಡೆಡ್ ಲೈನ್ ಕೊಟ್ಟಿವೆ. ಇದನ್ನೂ ಓದಿ:ತಾಳಿ ಕಟ್ಟದೆ ಬಸವ ತತ್ವದ ಅಡಿಯಲ್ಲಿ ಮಠಾಧೀಶರ ಸಮ್ಮುಖದಲ್ಲಿ ನಡೆದ ವಿಶಿಷ್ಟ ಮದುವೆ

ವಕ್ಫ್ ಬೋರ್ಡ್​ಗೆ ಬಿಬಿಎಂಪಿಯಿಂದ ನೋಟಿಸ್ ಜಾರಿ
ನಿಮ್ಮ ಆಸ್ತಿ ಅನ್ನೋದಾದ್ರೆ ದಾಖಲೆ ನೀಡುವಂತೆ ವಕ್ಫ್ ಬೋರ್ಡ್​ಗೆ ಬಿಬಿಎಂಪಿ ನೋಟಿಸ್ ನೀಡಿದೆ. ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶ್ರೀನಿವಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:06 pm, Tue, 14 June 22