ಎರಡೇ ಕಾರಣದಿಂದ ಸಮಾವೇಶ ಮುಂದೂಡಿದ್ದೇವೆ, ನಿಗದಿಯಂತೆ ಸೆ.10ರಂದು ‘ಜನಸ್ಪಂದನ’ ನಡೆಯಲಿದೆ: ಸಚಿವ ಡಾ.ಕೆ.ಸುಧಾಕರ್​

ಇಂದು (ಸೆ. 8) ರಂದು ನಡೆಯಬೇಕಿದ್ದ ಬಿಜೆಪಿಯ ಜನೋತ್ಸವ  ಕಾರ್ಯಕ್ರಮವನ್ನು ಭಾನುವಾರ (ಸೆ. 11) ಕ್ಕೆ ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಬೆಳಗಾವಿಯಲ್ಲಿ ಹೇಳಿದ್ದಾರೆ.

ಎರಡೇ ಕಾರಣದಿಂದ ಸಮಾವೇಶ ಮುಂದೂಡಿದ್ದೇವೆ, ನಿಗದಿಯಂತೆ ಸೆ.10ರಂದು ‘ಜನಸ್ಪಂದನ’ ನಡೆಯಲಿದೆ: ಸಚಿವ ಡಾ.ಕೆ.ಸುಧಾಕರ್​
ಸಚಿವ ಡಾ.ಕೆ.ಸುಧಾಕರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 08, 2022 | 11:08 AM

ಬೆಂಗಳೂರು: ಅನಿವಾರ್ಯ ಕಾರಣದಿಂದ ‘ಜನಸ್ಪಂದನ’ ಮುಂದೂಡಲಾಯ್ತು ಎಂದು ನಗರದಲ್ಲಿ ಟಿವಿ9ಗೆ ಸಚಿವ ಡಾ.ಕೆ.ಸುಧಾಕರ್​ ಹೇಳಿಕೆ ನೀಡಿದರು. ಜುಲೈ 28ರಂದು ನಮ್ಮ ಕಾರ್ಯಕರ್ತರ ಕೊಲೆಯಾಯ್ತು. ಸೆಪ್ಟೆಂಬರ್ 6 ರಂದು ಉಮೇಶ್ ಕತ್ತಿ ಅವರು ನಿಧನರಾದ್ರು. ಶೋಕದ ಕ್ಷಣದಲ್ಲಿ ಕಾರ್ಯಕ್ರಮ ಮಾಡುವುದು ಸರಿ ಅಲ್ಲ. ಸೆಪ್ಟೆಂಬರ್ 10ಕ್ಕೆ ನಿಗದಿಯಂತೆ ‘ಜನಸ್ಪಂದನ’ ನಡೆಯಲಿದೆ. ಕಾಂಗ್ರೆಸ್​ ಪಕ್ಷಕ್ಕೆ ಜನಸ್ನೇಹಿ ಎಂಬ ಪದವೇ ಗೊತ್ತಿಲ್ಲ. ಸೂತಕದ ಮನೆಯಲ್ಲಿ ಹುಟ್ಟುಹಬ್ಬವನ್ನ ಆಚರಿಸಿಕೊಂಡ್ರು. ನಾವು ಸೆನ್ಸಿಟಿವ್ ಇದ್ದೇವೆ, ಸೂಕ್ಷ್ಮವಾಗಿ ಸ್ಪಂದಿಸುತ್ತೇವೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ವ್ಯತ್ಯಾಸ ಇದೆ ಎಂದು ಸುಧಾಕರ್ ಹೇಳಿದರು.

ಎರಡೇ ಕಾರಣದಿಂದ ಸಮಾವೇಶವನ್ನ ಮುಂದೂಡಿದ್ದೇವೆ. ಸೆ.10ರಂದು ನಿಗದಿಯಂತೆ ‘ಜನಸ್ಪಂದನ’ ನಡೆಯಲಿದೆ. ಯಾವುದೇ ಕಾರಣಕ್ಕೂ ಕಾರ್ಯಕ್ರಮ ಮುಂದೆ ಹೋಗಲ್ಲ. ನಮ್ಮ ಸಂಘಟನೆ ಎಲ್ಲಿ ಕಡಿಮೆ ಇದೆ ಅಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ನಾವು ಏನ್ಮಾಡಿದ್ದೇವೆಂದು ತೋರಿಸಲು ಈ ಕಾರ್ಯಕ್ರಮ. ಕಾಂಗ್ರೆಸ್​​ನವರು ಕೂಡ ಆತ್ಮಾವಲೋಕನ ಮಾಡಿಕೊಳ್ಳಲಿ. ಅವರ ಕಾರ್ಯಕ್ರಮ ಚೆನ್ನಾಗಿದ್ದಿದ್ರೆ ಏಕೆ ಸೋಲಿಸುತ್ತಿದ್ದರು? ಯಾಕೆ ಕಾಂಗ್ರೆಸ್​ನ 50ಕ್ಕೂ ಹೆಚ್ಚು ಶಾಸಕರು ಸೋತರು? ಸುಮ್ಮನೇ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಮಳೆ ಬಂದಾಗ ನಾವು ಜನರ ಜೊತೆಗಿದ್ದೇವೆ. ಸ್ಥಳ ಪರಿಶೀಲನೆ ಮಾಡಿದ್ದೇವೆ, ಕಾಂಗ್ರೆಸ್​ ಅನಗತ್ಯ ಆರೋಪ ಮಾಡಲಾಗುತ್ತಿದೆ ಎಂದು ಸಚಿವ ಸುಧಾಕರ್ ಹೇಳಿದರು.

ಜನೋತ್ಸವ ಭಾನುವಾರಕ್ಕೆ ಮುಂದೂಡಿಕೆ: ಸಿಎಂ ಬೊಮ್ಮಾಯಿ

ಇಂದು (ಸೆ. 8) ರಂದು ನಡೆಯಬೇಕಿದ್ದ ಬಿಜೆಪಿಯ ಜನೋತ್ಸವ  ಕಾರ್ಯಕ್ರಮವನ್ನು ಭಾನುವಾರ (ಸೆ. 11) ಕ್ಕೆ ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಬೆಳಗಾವಿಯಲ್ಲಿ ಹೇಳಿದ್ದಾರೆ. ದೊಡ್ಡಬಳ್ಳಾಪುರ ಪಟ್ಟಣದಲ್ಲಿ ನಿಗದಿಯಾಗಿದ್ದ ಬಿಜೆಪಿಯ ಜನೋತ್ಸವ ಕಾರ್ಯಕ್ರಮವನ್ನು, ಅರಣ್ಯ ಸಚಿವ ಉಮೇಶ್ ಕತ್ತಿ ನಿಧನರಾದ ಹಿನ್ನೆಲೆ ಮುಂದೂಡಲಾಗಿದೆ ಎಂದು ಹೇಳಿದರು.

ಹೃದಯಾಘಾತದಿಂದ ಅರಣ್ಯ ಸಚಿವ ಉಮೇಶ್ ಕತ್ತಿ(61) ನಿಧನವಾದ ಹಿನ್ನೆಲೆ ರಾಜ್ಯಾದ್ಯಂತ 3 ದಿನಗಳ ಕಾಲ ಶೋಕಾಚರಣೆಗೆ ನಿರ್ಧರಿಸಿದ್ದೇವೆ. ಶೋಕಾಚರಣೆ ಹಿನ್ನೆಲೆ ಯಾವುದೇ ಸರ್ಕಾರ ಕಾರ್ಯಕ್ರಮವಿರುವುದಿಲ್ಲ. ತುರ್ತಾಗಿ ಪ್ರವಾಹ ನಿರ್ವಹಣೆ ಬಿಟ್ಟರೆ ಸರ್ಕಾರದ ಕಾರ್ಯಕ್ರಮವಿಲ್ಲ ಎಂದರು.

ಉಮೇಶ್ ಕತ್ತಿ ಆತ್ಮಿಯ ಸ್ನೇಹಿತ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿ ರಾಜ್ಯ ಕಂಡ ಧಿಂಮತ ನಾಯಕರಾಗಿದ್ದರು. ನಾನು ಭಾರದ ಹೃದಯದಿಂದ ಬೆಳಗಾವಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ಹೆಚ್ಚು ಮಾತನಾಡಲ್ಲ. ಅಂತ್ಯಕ್ರಿಯೆಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ, ಅಂತಿಮ ದರ್ಶನಕ್ಕೂ ವ್ಯವಸ್ಥೆ ಇದೆ. ಜನರು ದೊಡ್ಡ ಪ್ರಮಾಣದಲ್ಲಿ ಬಂದಿದ್ದಾರೆ, ಜನ ಸಹಕಾರ ಮಾಡಬೇಕು. ರಾಜ್ಯ ಸರ್ಕಾರದಿಂದ ಗೌರವ ಸಲ್ಲಿಕೆ ಮಾಡುತ್ತೆವೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.