ಇಸ್ಪೀಟ್ ಕ್ಲಬ್​ಗೆ ಲೈಸೆನ್ಸ್ ಕೊಡಿಸುತ್ತೇನೆ ಎಂಬ ಆಡಿಯೋ ವೈರಲ್‌: ಪೊಲೀಸ್ ಆಯುಕ್ತ ಕಮಲ್‌ಪಂತ್ ಸ್ಪಷ್ಟನೆ

| Updated By: ಗಂಗಾಧರ​ ಬ. ಸಾಬೋಜಿ

Updated on: May 15, 2022 | 12:46 PM

ಸ್ಟೇಷನ್​ಗೆ ಹಾಗೂ ಪೊಲೀಸ್ ಮಾಮುಲಿ ಸೇರಿ 1.60 ಲಕ್ಷ ಹಣ ನೀಡುತ್ತೇವೆ. ಹಣ ಎಷ್ಟು ಬೇಕು ಪೊಲೀಸರಿಗೆ ಕೊಡಿ ಎಂದು ಹೇಳಿರುವ ಅಡಿಗ, 26 ಪೊಲೀಸರನ್ನ ಟ್ರಾನ್ಸ್​ವರ್ರ್​ ಮಾಡಿಸಿದ್ದೆವೆ ಎಂದಿದ್ದಾನೆ. 

ಇಸ್ಪೀಟ್ ಕ್ಲಬ್​ಗೆ ಲೈಸೆನ್ಸ್ ಕೊಡಿಸುತ್ತೇನೆ ಎಂಬ ಆಡಿಯೋ ವೈರಲ್‌: ಪೊಲೀಸ್ ಆಯುಕ್ತ ಕಮಲ್‌ಪಂತ್ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕ್ಲಬ್​​ಗೆ ಪರಮಿಷನ್​​ ಕೊಡಬೇಕು ಎನ್ನುವ ವಿಚಾರ ಚರ್ಚೆ ಆಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ. ಬಿಟಿಎಂ ಲೇಔಟ್​ 4 ನೇ ಸ್ಟೇಜ್​​ನ ಬಿಳೆಕಳ್ಳಿಯ ಕ್ಲಬಾಗಿದೆ. ಸಿಸಿಬಿ ಪೊಲೀಸರದ್ದೇ ಸಮಸ್ಯೆ ಎಂದು ಇಬ್ಬರ ನಡುವೆ ಮಾತು ಕತೆ ನಡೆಸಿರುವ ಆಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಡಿಗ ಎನ್ನುವ ವ್ಯಕ್ತಿಗೆ ಹೆಸರಿನ ಕ್ಲಾಬ್​ಗಳ ಮೇಲೆ ರೇಡ್​ ಮಾಡಲ್ಲ. ಕ್ಲಾಬ್​​ಗಳನ್ನ ನನ್ನ ಹೆಸರಿಗೆ ಅಗ್ರಿಮೆಂಟ್ ಮಾಡಿಕೊಡಿ. ಯಾವುದೇ ಡಿಸಿಪಿಗಳು ರೇಡ್ ಮಾಡಲ್ಲ ಎಂದು ಅಡಿಗ ಆಡಿಯೋದಲ್ಲಿ ಹೇಳಿದ್ದಾನೆ. ರಮಣ ಗುಪ್ತ ನಮ್ಮ ತಂಟೆಗೆ ಬಂದ್ರೆ ಅವನ ಪ್ಯಾಂಟ್​​ ಬಿಚ್ಚುತ್ತೆನೆ ಎಂದು ಕೂಡ ಅಡಿಗ ಎನ್ನುವ ವ್ಯಕ್ತಿ ಮಾತಾಡಿರುವ ಆಡಿಯೋ ವೈರಲ್ ಆಗಿದೆ. ಎಲ್ಲಾ ಪೊಲೀಸರು ನನ್ನ ಸ್ನೇಹಿತರೇ ಎಂದು ಹೇಳಿರುವ ಅಡಿಗ, ನನ್ನ ಹೆಸರಿಗೆ ಅಗ್ರಿಮೆಂಟ್ ಮಾಡಿಕೊಳ್ಳುತ್ತೆನೆ. ಸಿಸಿಬಿ ಪೊಲೀಸರಿಗೆ ಮೊದಲಿಗೆ ತಿಂಗಳಿಗೆ 10 ಸಾವಿರ. ಸ್ಟೇಷನ್​ಗೆ ಹಾಗೂ ಪೊಲೀಸ್ ಮಾಮುಲಿ ಸೇರಿ 1.60 ಲಕ್ಷ ಹಣ ನೀಡುತ್ತೇವೆ. ಹಣ ಎಷ್ಟು ಬೇಕು ಪೊಲೀಸರಿಗೆ ಕೊಡಿ ಎಂದು ಹೇಳಿರುವ ಅಡಿಗ, 26 ಪೊಲೀಸರನ್ನ ಟ್ರಾನ್ಸ್​ವರ್ರ್​ ಮಾಡಿಸಿದ್ದೆವೆ ಎಂದಿದ್ದಾನೆ.

ಈ ವಿಚಾರವಾಗಿ ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಸ್ಪಷ್ಟನೆ ನೀಡಿದ್ದಾರೆ. ಈ ಆಡಿಯೋ ವೈರಲ್‌ವಿಚಾರ ನನ್ನ ಗಮನಕ್ಕೆ ಬಂದಿದೆ. ಸೋಷಿಯಲ್ ಮೀಡಿಯಾ ಅಂದ ಮೇಲೆ‌ ಸಾಕಷ್ಟು ಜನ ಏನೇನೋ ಮಾತಾಡಿ ಹಾಕುತ್ತಾರೆ. ಅದಕ್ಕೆಲ್ಲ ಪ್ರತಿಕ್ರಿಯೆ ಕೋಡೋಕೆ ಆಗುತ್ತಾ ಹೇಳಿ. ಈ ಆಡಿಯೋ ವೈರಲ್ ಗಮನಕ್ಕೆ ಬಂದಿದೆ. ನಾನು ಈ ಬಗ್ಗೆ ಆಕ್ಷನ್‌ತಗೋಳಿ ಅಂತ ಸೂಚನೆ‌ ನೀಡಿದ್ದೇನೆ. ಆತ ಯಾರೇ ಆದರೂ ಅವನ ವಿರುದ್ಧ ಕ್ರಮ ತೆಗೆದುಕೊಳ್ತೆವೆ. ನಾಳೆ‌ ನೂರು ಜ‌ನ ನೂರು ಥರಾ ಮಾತಾಡ್ತಾರೆ ಅದಕ್ಕೆಲ್ಲಾ ರಿಯಾಕ್ಟ್ ಮಾಡೋಕೆ ಆಗುತ್ತಾ..? ಈ ಬಗ್ಗೆ ನಮ್‌ಪೊಲೀಸರು ಆಕ್ಷನ್ ತಗೋತಾರೆ ನನ್ನ ಗಮನಕ್ಕೂ ಆಡಿಯೋ ವೈರಲ್ ವಿಚಾರ ಬಂದಿದೆ. ಕಾನೂನಾತ್ಮಕವಾಗಿ ನಾವು ಯಾವ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇಬ್ಬರು ರೌಡಿ ಶೀಟರ್‌ಗಳು, 8 ಮಂದಿ ಸಹಚರರನ್ನು ಬಂಧಿಸಿದ ಸಿಸಿಬಿ ಪೊಲೀಸರು

ಬೆಂಗಳೂರು: ಹನುಮಂತನಗರ ಪಿಎಸ್ ವ್ಯಾಪ್ತಿಯಲ್ಲಿ ಇಬ್ಬರು ರೌಡಿ ಶೀಟರ್‌ಗಳು ಹಾಗೂ ಅವರ ಎಂಟು ಜನ ಸಹಚರರನ್ನು ಸಿಸಿಬಿ ಪೊಲೀಸರು(CCB Police) ಬಂಧಿಸಿದ್ದಾರೆ. ದರೋಡೆಗೆ ಸಂಚು ರೂಪಿಸಿದ್ದಕ್ಕಾಗಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಇವರಿಂದ ಮಾರಕಾಸ್ತ್ರಗಳು ಮತ್ತು ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ನಗರ ಪೊಲೀಸ್‌ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಇಬ್ಬರು ರೌಡಿ ಶೀಟರ್‌ಗಳು ಮತ್ತು ಅವರ ಎಂಟು ಸಹಚರರನ್ನು ಬಂಧಿಸಿದೆ ಎಂದು ಅಪರಾಧ ವಿಭಾಗದ ನಗರದ ಜಂಟಿ ಪೊಲೀಸ್ ಕಮಿಷನರ್ ರಮಣ್ ಗುಪ್ತಾ ಟ್ವೀಟ್ ಮೂಲಕ ತಿಳಿಸಿದ್ದಾರೆ. ನಗರದಲ್ಲಿ ದರೋಡೆಗೆ ಸಂಚು ರೂಪಿಸಿದ್ದಕ್ಕಾಗಿ ಎಲ್ಲಾ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಗುಪ್ತಾ ಹೇಳಿದರು. ಆರೋಪಿಯಿಂದ ಮಾರಕಾಸ್ತ್ರಗಳು ಹಾಗೂ ಎರಡು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.