ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರ ಮುಷ್ಕರ: ಮಾ.20 ರಂದು ಬೆಂಗಳೂರಿನಲ್ಲಿ ಆಟೋ ಸಂಚಾರ ಬಂದ್

|

Updated on: Mar 19, 2023 | 11:27 AM

ನಾಳೆ(ಮಾ.20) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಟೋ ಸಂಚಾರ ಬಂದ್ ಆಗಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರ ಮುಷ್ಕರ: ಮಾ.20 ರಂದು ಬೆಂಗಳೂರಿನಲ್ಲಿ ಆಟೋ ಸಂಚಾರ ಬಂದ್
ಮಾ,20 ರಂದು ಬೆಂಗಳೂರಿನಲ್ಲಿ ಆಟೋ ಸಂಚಾರ ಬಂದ್​
Follow us on

ಬೆಂಗಳೂರು: ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರ್ಯಾಪಿಡೋ ಬೈಕ್​ ಟ್ಯಾಕ್ಸಿಯನ್ನು (Rapido bike taxi) ನಿಷೇಧಿಸಿ ಎಂದು ಆಟೋ ಚಾಲಕರು (Auto Drivers) ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಈಗ ಮತ್ತೆ ರ್ಯಾಪಿಡೋ ಬೈಕ್​ ಟ್ಯಾಕ್ಸಿಯನ್ನು ನಿಷೇಧಿಸುವಂತೆ ನಗರದ 21 ಆಟೋ ಚಾಲಕರ‌ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ (Karnataka Government) ಒತ್ತಾಯ ಮಾಡಿವೆ. ಈ ಹಿನ್ನಲೆ ನಾಳೆ(ಮಾ.20) ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ. ಇಂದು ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಮಧ್ಯರಾತ್ರಿಯವರೆಗೆ ಆಟೋ ಸಂಚಾರ ಸಂಪೂರ್ಣ ಬಂದ್ ಆಗಲಿದೆ.

ಮೂರು ದಿನ ಗಡುವು ನೀಡಿದ್ರು ಕ್ಯಾರೆ ಎನ್ನದ ಸರ್ಕಾರ

ರಾಜ್ಯದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ, ರಾಜ್ಯ ಸರ್ಕಾರಕ್ಕೆ 3 ದಿನಗಳ ಗಡುವು ನೀಡಿದ್ದರು. ಇಂದಿಗೆ ಸಾರಥಿಗಳು ನೀಡಿದ್ದ ಗಡುವ ಮುಗಿದಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 11ಗಂಟೆಗೆ ರೇಸ್​​​ ಕೋರ್ಸ್ ರಸ್ತೆಯಲ್ಲಿರುವ​ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಆಟೋ ಚಾಲಕರು ಪ್ಲಾನ್​ ಮಾಡಲಾಗಿದೆ. ಮೂರು ದಿನಗಳ ಕಾಲ ಆಟೋ ಚಾಲಕರು ಕಪ್ಪು ಪಟ್ಟಿ ಕಟ್ಟಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಸರ್ಕಾರ ಮಾತ್ರ ಈ ಕುರಿತು ಮಾತಾಡಿಲ್ಲ. ಈ ಕಾರಣ ಬೆಂಗಳೂರಿನ 21ಆಟೋ ಚಾಲಕರ‌ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದೆ.

ಇದನ್ನೂ ಓದಿ: ಮಾರ್ಚ್​ 24ರಂದು ರಾಜ್ಯದಲ್ಲಿ ಸಾರಿಗೆ ಸೇವೆ ಬಂದ್ ಆಗಲಿದೆ: KSRTC ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರು

ಒಟ್ಟೂ 2 ಲಕ್ಷದ 10 ಸಾವಿರ ಆಟೋಗಳ ಸಂಚಾರ ನಾಳೆ ಬಂದ್ ಆಗುತ್ತೆ ಎಂದು ಸಂಘದ ಮುಖಂಡರು ಹೇಳುತ್ತಿದ್ದಾರೆ. ಈಗಾಗಲೇ ಸಾರಿಗೆ ಸಚಿವ ಶ್ರೀರಾಮುಲು ಎಲೆಕ್ಷನ್ ಒಳಗೆ ಚಾಲಕರಿಗೆ ಸಿಹಿ ಸುದ್ದಿ ಕೊಡುತ್ತೇವೆ ಎಂಬ ಭರವಸೆ ನೀಡಿದ್ದರು. ಆರ್​ಟಿಓಯಿಂದ ರ್ಯಾಪಿಡೋ ಬ್ಯಾನ್ ಮಾಡಲು ವರದಿ ಕೇಳಿದ್ದೀನಿ. ವರದಿ ನನ್ನ ಕೈ ಸೇರಿದ್ದೆ ಚಾಲಕರಿಗೆ ಸಿಹಿ ಸುದ್ದಿ ಕೊಡುತ್ತೆನೆ ಎಂದಿದ್ದರು. ಇದರಿಂದ ಆಟೋ ಚಾಲಕರು ತುಂಬಾ ಸಂತೋಷದಲ್ಲಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:38 am, Sun, 19 March 23