Bengaluru: ಕೆ.ಜಿ ಹಳ್ಳಿಯ 15 ಪಿಎಫ್ಐ ಕಾರ್ಯಕರ್ತರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ

ಬಂಧಿತ ಕೆ.ಜಿ ಹಳ್ಳಿಯ ಪಿಎಫ್ಐ ಕಾರ್ಯಕರ್ತರ ವಿರುದ್ಧ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ, ಕೆ ಜಿ ಹಳ್ಳಿ ಪೊಲೀಸರು 10,196 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ.

Bengaluru: ಕೆ.ಜಿ ಹಳ್ಳಿಯ 15 ಪಿಎಫ್ಐ ಕಾರ್ಯಕರ್ತರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ
ಕೆಜಿ ಹಳ್ಳಿ ಪೊಲೀಸ್​ ಠಾಣೆ
Follow us
ವಿವೇಕ ಬಿರಾದಾರ
|

Updated on:Mar 19, 2023 | 8:57 AM

ಬೆಂಗಳೂರು: ಬಂಧಿತ ಕೆ.ಜಿ ಹಳ್ಳಿಯ (KG Halli) ಪಿಎಫ್ಐ ಕಾರ್ಯಕರ್ತರ ವಿರುದ್ಧ ರಾಷ್ಟ್ರೀಯ ತನಿಖಾ ಏಜೆನ್ಸಿಯ (NIA) ವಿಶೇಷ ನ್ಯಾಯಾಲಯಕ್ಕೆ, ಕೆ ಜಿ ಹಳ್ಳಿ ಪೊಲೀಸರು 10,196 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. PFI ಅಧ್ಯಕ್ಷ ನಾಸೀರ್ ಪಾಷಾ ಸೇರಿ 15 ಜನರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಲಾಗಿದೆ. 9 ಕಾರ್ಯಕರ್ತರ ಮೇಲೆ UAPA ಅಡಿ ಕೇಸ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಉಳಿದ ಐವರ ಮೇಲೆ ಐಪಿಸಿ 153 A ಅಡಿಯಲ್ಲಿ ಚಾರ್ಜ್​ಶೀಟ್​​​ ಸಲ್ಲಿಸಲಾಗಿದೆ. ಪೊಲೀಸರು ಪಿಎಫ್​ಐ ಕಾರ್ಯಕರ್ತರ ತರಬೇತಿ, ಸಭೆ, ಹಣ ಸಂಗ್ರಹದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಚಾರ್ಜ್​ಶೀಟ್​​​ನಲ್ಲಿ ಪಿಎಫ್​ಐ ಕಾರ್ಯಕರ್ತರ ಹಲವು ಚಟುವಟಿಗಳು ಉಲ್ಲೇಖ

ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲೆಯ ಮಿಟ್ಟೂರಿನಲ್ಲಿ, ಮಿಟ್ಟೂರು ಫ್ರೀಡಂ ಚಾರಿಟೇಬಲ್​​​​​ ಟ್ರಸ್ಟ್ ಎಂಬ​ ಹೆಸರಲ್ಲಿ ಸರಣಿ ಸಭೆ ನಡೆಸುತ್ತಿದ್ದರು. ಸಭೆಯಲ್ಲಿ ಕಾರ್ಯಕರ್ತರ ಕಾರ್ಯತಂತ್ರ ವಿಸ್ತರಣೆ, ಚಟುವಟಿಕೆಗಳ ಬಗ್ಗೆ ಚರ್ಚಿಸುತ್ತಿದ್ದರು. ಈ ಟ್ರಸ್ಟ್​ಗೆ ದೇಶದ ಹಲವೆಡೆಯಿಂದ 10 ವರ್ಷಗಳಲ್ಲಿ 4 ರಿಂದ  5 ಕೋಟಿ ಹಣ ಬಂದಿದೆ. ಬಂದ ಹಣವನ್ನು ಮಕ್ಕಳ ಶಿಕ್ಷಣ ಸೇರಿ ಹಲವು ಕಾರ್ಯಗಳಿಗೆ ಬಳಕೆ ಮಾಡಿದ್ದಾರೆ. ಅಲ್ಲದೆ ಕಾರ್ಯಕರ್ತರು ಬೆಂಗಳೂರಿನ ಬೆನ್ಸ್​​ನ್​ ಟೌನ್​​ನಲ್ಲೂ ಸಭೆ ನಡೆಸಿದ್ದರು.

ಇದನ್ನೂ ಓದಿ: ಬಿಹಾರದಲ್ಲಿ ಪಿಎಫ್​​ಐ ಚಟುವಟಿಕೆ; ದಕ್ಷಿಣ ಕನ್ನಡ, ಕಾಸರಗೋಡಿನಲ್ಲಿ ಐವರು ಪಿಎಫ್​ಐ ಕಾರ್ಯಕರ್ತರ ಬಂಧಿಸಿದ ಎನ್​ಐಎ

ಕಾರ್ಯಕರ್ತರು ಯೋಗದ ಕೆಲವು ಆಯ್ದ ಆಸನಗಳನ್ನು ತರಬೇತಿ ಪಡೆಯುತ್ತಿದ್ದರು. ಇದಕ್ಕೆ ಆಸಕ್ತಿಯುಳ್ಳ ಯುವಕರನ್ನು ಆಯ್ಕೆ ಮಾಡುತ್ತಿದ್ದರು. ಬುಕ್-1, ಬುಕ್-2, ಬುಕ್-3 ಎಂಬ ಹೆಸರಲ್ಲಿ ತರಬೇತಿ ನೀಡಲಾಗುತ್ತಿತ್ತು. ಮೊದಲ 2 ವಿಭಾಗದಲ್ಲಿ ಮಾನಸಿಕ ದೃಢತೆ ಕಾಪಾಡಲು ತರಬೇತಿ ನೀಡಿದರೇ, ಬುಕ್-3 ವಿಭಾಗದಲ್ಲಿ ಶಸ್ತ್ರಾಸ್ತ್ರ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ಆದರೆ ಪೊಲೀಸರ ತನಿಖೆ ವೇಳೆ ಯಾವುದೇ ಶಸ್ತ್ರಾಸ್ತ್ರ ಪತ್ತೆಯಾಗಿಲ್ಲ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.

17 ವಿವಿಧ ಪ್ರದೇಶಗಳಲ್ಲಿ ದಾಳಿ ಮಾಡಿ 15 ಜನರ ಬಂಧನ

ಕಳೆದ ವರ್ಷ 2022 ಸೆಪ್ಟೆಂಬರ್​ 24 ರಂದು ಕೆ.ಜಿ.ಹಳ್ಳಿ ಪೊಲೀಸರು ಪಿಎಫ್​​ಐ ನಾಯಕರು ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಖಾಸಗಿ ಮಾಹಿತಿ ಆಧಾರದ ಮೇಲೆ 17 ವಿವಿಧ ಪ್ರದೇಶಗಳಲ್ಲಿ ದಾಳಿ ಮಾಡಿ 15 ಜನರನ್ನು ವಶಕ್ಕೆ ಪಡೆದಿದ್ದರು.

ಆರೋಪಿಗಳು ಪಿಎಫ್ ಐ ಕಚೇರಿಗಳಿಗೆ ಹಾಗೂ ಪಿಎಫ್ ಐ ಹಿರಿಯ ನಾಯಕರುಗಳಿಗೆ ನೇರ ಲಿಂಕ್ ಇರುವುದು ಪತ್ತೆಯಾಗಿತ್ತು. ಕಚೇರಿಯಲ್ಲಿ ಕೆಲಸ ಮಾಡುವವರು ಕರ್ನಾಟಕದಾದ್ಯಂತ ನೆಟ್ ವರ್ಕ್ ಹೊಂದಿರೋದು ಪತ್ತೆಯಾಗಿತ್ತು. ಬೃಹತ್ ಪ್ರಮಾಣದಲ್ಲಿ ಮುಸ್ಲೀಂ ಯುವಕರನ್ನ ಸೆಳೆದು ಸಮಾಜ ಘಾತುಕ ಚಟುವಟಿಕೆಗಳಿಗೆ ಪ್ರಚೋದನೆ ಮಾಡಿ ಸಮಾಜದಲ್ಲಿ ಧರ್ಮ ಧರ್ಮಗಳ ನಡುವೆ ಗಲಭೆ ಸೃಷ್ಠಿಸಲು ಯತ್ನಿಸಿರುವುದು ಬಹಿರಂಗವಾಗಿತ್ತು. ದೇಶದ ಒಳಗೆ ಕ್ರೂರ ಕೃತ್ಯಗಳನ್ನು ನಡೆಸುವುದು, ದೇಶದ ವಿರುದ್ಧ ಸಮರ ಸಾರುವುದು. ಅನ್ಲೈನ್ ನಲ್ಲಿ ಹಾಗೂ ನೇರವಾಗಿ ಪ್ರಚೋದನೆ ನೀಡುವುದು. ಪ್ರಚೋದನಕಾರಿ ವಿಡಿಯೋ ಮಾಡುತ್ತಿದ್ದರು ಎಂದು  ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ (DCP Bhimashankar) ಗುಳೇದ್​ ತಿಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:27 am, Sun, 19 March 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್