Automatic Pani Puri Kiosk: ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್‌ಗೆ ಕಾಲಿಟ್ಟಿದೆ ಪಾನಿಪುರಿ ವೆಂಡಿಂಗ್ ಮಷಿನ್
ಬೆಂಗಳೂರಿನ ಹೆಎಚ್‌ಎಸ್‌ಆರ್ ಲೇಔಟ್‌ಗೆ ಸ್ವಯಂಚಾಲಿತ ಪಾನಿ ಪುರಿ ವೆಂಡಿಂಗ್ ಮಷಿನ್ ಕಾಲಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮಷಿನ್ಗೆ WTF - ವಾಟ್ ದಿ ಫ್ಲೇವರ್ಸ್ ಎಂದು ಹೆಸರಿಟ್ಟಿದ್ದಾರೆ. ಇಂತಹ ವೆಂಡಿಂಗ್ ಮೆಷಿನ್‌ಗಳು ಬೆಂಗಳೂರಿನಲ್ಲಿ ಸಾಮಾನ್ಯವಾಗಿದ್ದರೂ, ಸ್ಟಾಲ್‌ನ ಹೆಸರು ಸಾಮಾಜಿಕ ಜಾಲತಾಣದಲ್ಲಿ ಹೈಪ್ ಮಾಡಿದೆ.
ಬೆಂಗಳೂರು, ಜುಲೈ 16: ಪಾನಿಪುರಿ (Panipuri) ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಪಾನಿಪುರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಬೆಂಗಳೂರಿನ (Bengaluru) ಹೆಎಚ್‌ಎಸ್‌ಆರ್ ಲೇಔಟ್‌ಗೆ (HSR Layout) ಸ್ವಯಂಚಾಲಿತ ಪಾನಿಪುರಿ ವೆಂಡಿಂಗ್ ಮಷಿನ್ (Panipuri Vending Machine) ಕಾಲಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂತಹ ವೆಂಡಿಂಗ್ ಮೆಷಿನ್‌ಗಳು ಬೆಂಗಳೂರಿನಲ್ಲಿ ಸಾಮಾನ್ಯವಾಗಿದ್ದರೂ, ಸ್ಟಾಲ್‌ನ ಹೆಸರು ಸಾಮಾಜಿಕ ಜಾಲತಾಣದಲ್ಲಿ ಹೈಪ್ ಮಾಡಿದೆ.
ಬೆನೆಡಿಕ್ಟ್ ಎಂಬ ಎಕ್ಸ್ ಖಾತೆ ಬಳಕೆದಾರರು ಟ್ವೀಟ್ ಮಾಡಿದ್ದು, ಪಾನಿಪುರಿ ಅಂಗಡಿ ಮಾಲಿಕರು “WTF – ವಾಟ್ ದಿ ಫ್ಲೇವರ್ಸ್” ಎಂದು ಹೆಸರಿಟ್ಟಿದ್ದು ಪಾನಿಪುರಿ ಪ್ರೀಯರನ್ನು ಆಕರ್ಷಿಸುತ್ತಿದೆ. ಈ ಮೂಲಕ ಹೆಚ್ಎಸ್ಆರ್ ಈಗಲನೇ 2050 ವರ್ಷಕ್ಕೆ ಕಾಲಿಟ್ಟಿದೆ ಎಂದು ಬೆನೆಡಿಕ್ಟ್ ಶಿರ್ಷಿಕೆ ನೀಡಿದ್ದಾರೆ.
ಕೆಲವು ಬಳಕೆದಾರರು ಸ್ವಯಂಚಾಲಿತ ವೆಂಡಿಂಗ್ ಮಷಿನ್ ಬಗ್ಗೆ ಸಂದೇಹ ವ್ಯಕ್ತಪಡಿಸಿದರು. ವೆಂಡಿಂಗ್ ಮಷಿನ್ ಬಂದಿರುವುದು ನನ್ನ ಅಭಿಪ್ರಾಯದಲ್ಲಿ ಆಕರ್ಷಕವಾಗಿಲ್ಲ ಎಂದು ಓರ್ವ ಎಕ್ಸ್ ಖಾತೆದಾರರು ಕಾಮೆಂಟ್ ಮಾಡಿದ್ದಾರೆ. ಪ್ರದೀಪ್ ಎಂಬುವರು ಬಿನ್ನಿ ಪೆಟ್‌ನಲ್ಲಿರುವ ಇಟಿಎ ಮಾಲ್‌ನಲ್ಲಿ ಐದು ವರ್ಷಗಳ ಹಿಂದೆಯೇ ವಂಡಿಂಗ್ ಮಷಿನ್ ಬಂದಿದೆ. ಇದು ಯಾಕೆ ವೈರಲ್ ಆಗಿಲ್ಲ? ಈಗ ಏಕೆ ಹೆಚ್ಎಸ್ಆರ್ಗೆ ಬಂದ ವೆಂಡಿಂಗ್ ಮಷಿನ್ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
HSR is living in 2050 @peakbengaluru pic.twitter.com/XzYpxoGWrX
— Benedict (@benedictgershom) July 14, 2024
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಪಾನಿಪುರಿಗೆ ಬಳಸುವ ಸಾಸ್, ಮೀಟಾ ಖಾರದ ಪುಡಿ ಸೇರಿದಂತೆ ಐದು ಬಗೆಯ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿತ್ತು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿನ ಪಾನಿಪುರಿ ಮಾದರಿಗಳನ್ನ ಸಂಗ್ರಹಿಸಿ ಪರಿಶೀಲನೆ ನಡೆಸಿದೆ. ಪರಿಶೀಲನೆ ವೇಳೆ ಪಾನಿಪೂರಿ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದು ಪತ್ತೆಯಾಗಿತ್ತು.
ಪರೀಕ್ಷಿತ 260 ಮಾದರಿಗಳಲ್ಲಿ, 41 ರಲ್ಲಿ ಕೃತಕ ಬಣ್ಣಗಳು ಮತ್ತು ಕ್ಯಾನ್ಸರ್ ಉಂಟುಮಾಡುವ ಕಾರ್ಸಿನೋಜೆನಿಕ್ ಏಜೆಂಟ್ ಅಂಶ ಸಂಶೋಧನೆಯಲ್ಲಿ ಪತ್ತೆಯಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:20 am, Tue, 16 July 24