7th Pay Commission: ಸರ್ಕಾರಿ ನೌಕರರ ಸಂಬಳ ಶೇ 27ರಷ್ಟು ಹೆಚ್ಚಳ, ಏನಿದು 7ನೇ ವೇತನ ಆಯೋಗ? ಇಲ್ಲಿದೆ ಮಾಹಿತಿ

7ನೇ ವೇತನ ಆಯೋಗ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸ್ತು ಎಂದಿದ್ದಾರೆ. ಸೋಮವಾರ ಟ್ವೀಟ್​ ಮೂಲಕ ಮಾಹಿತಿ ಹಂಚಿಕ್ಕೊಂಡಿದ್ದಾರೆ. 7ನೇ ವೇತನ ಆಯೋಗ ಆಗಸ್ಟ್​ 1 ರಿಂದ ಜಾರಿಯಾಗಲಿದೆ. ಹಾಕಿದ್ದರೆ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ? ಇಲ್ಲಿದೆ ಅಂಕಿ-ಅಂಶ.

7th Pay Commission: ಸರ್ಕಾರಿ ನೌಕರರ ಸಂಬಳ ಶೇ 27ರಷ್ಟು ಹೆಚ್ಚಳ, ಏನಿದು 7ನೇ ವೇತನ ಆಯೋಗ? ಇಲ್ಲಿದೆ ಮಾಹಿತಿ
7ನೇ ವೇತನ ಆಯೋಗ
Follow us
ವಿವೇಕ ಬಿರಾದಾರ
|

Updated on:Jul 16, 2024 | 2:44 PM

ಬೆಂಗಳೂರು, ಜುಲೈ 16: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು 7ನೇ ವೇತನ ಆಯೋಗ (7th Pay Commission) ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ತೀರ್ಮಾನ ಕೈಗೊಂಡಿದ್ದು, ಸರ್ಕಾರಿ ನೌಕರರಲ್ಲಿ ಸಂತಸ ಮೂಡಿದೆ. 7ನೇ ವೇತನ ಆಯೋಗದ ಶಿಫಾರಸುಗಳು ಆಗಸ್ಟ್​ 1ರಿಂದ ಜಾರಿಯಾಗಲಿದೆ. 7ನೇ ವೇತನ ಆಯೋಗ ಜಾರಿ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಕೊನೆಗೂ ಇಡೇರಿದೆ. ಹಾಗದರೆ, ಸರ್ಕಾರಿ ನೌಕರರ ಸಂಬಳ ಎಷ್ಟು ಹೆಚ್ಚಳವಾಗಲಿದೆ? ಇಲ್ಲಿದೆ ಅಂಕಿ-ಅಂಶ.

ಈ ಹಿಂದಿನ ಬಿಜೆಪಿ ಸರ್ಕಾರ ನೌಕರರ ವೇತನ ಪರಿಷ್ಕರಣೆಗೆ 2022ರ ನವೆಂಬರ್​ ತಿಂಗಳಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್​ ರಾವ್​ ಅಧ್ಯಕ್ಷತೆಯಲ್ಲಿ ವೇತನ ಆಯೋಗ ರಚನೆ ಮಾಡಿ, ಆರು ತಿಂಗಳಲ್ಲಿ ವರದಿ ನೀಡುವಂತೆ ಆದೇಶಿಸಿತ್ತು. ಆಯೋಗ ಸರ್ಕಾರಿ ನೌಕರರ ವೇತನವನ್ನು ಶೇ 27.5ರಷ್ಟು ಹೆಚ್ಚಳ ಮಾಡುವಂತೆ 244 ಪುಟಗಳ ವರದಿಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

ಆಯೋಗದ ಶಿಫಾರಸ್ಸಿನಂತೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ 2023ರ ಏಪ್ರಿಲ್​ 1ರಿಂದ ಅನ್ವಯವಾಗುವಂತೆ ಶೇ17ರಷ್ಟು ವೇತನವನ್ನು ಹೆಚ್ಚಳ ಮಾಡಿದ್ದರು. ಬಾಕಿ ಉಳಿದಿರುವ ಶೇ10.5 ರಷ್ಟು ವೇತನವನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀರ್ಮಾನಿಸಿದ್ದಾರೆ. ಇದು ಆಗಸ್ಟ್​ 1ರಿಂದ ಜಾರಿಯಾಗಲಿದೆ. ಈ ಮೂಲಕ ಶೇ 17 ಮತ್ತು ಶೇ 10.5 ರಷ್ಟು ಸೇರಿ ಒಟ್ಟು ಶೇ 27ರಷ್ಟು ವೇತನ ಹೆಚ್ಚಿಸಲಾಗುತ್ತದೆ. ಇದರಿಂದ ಆರಂಭಿಕ ನೌಕರರ ಕನಿಷ್ಠ ವೇತನ 17 ಸಾವಿರದಿಂದ 27 ಸಾವಿರಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: 7ನೇ ವೇತನ ಆಯೋಗ ಶಿಫಾರಸು ಜಾರಿಗೆ ಬಗ್ಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿಚ್ಚಿಟ್ಟ ಮಾಹಿತಿ

7ನೇ ವೇತನ ಆಯೋಗ ಜಾರಿಯಿಂದ 12ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಿದೆ. ಆದರೆ, ರಾಜ್ಯ ಸರ್ಕಾರದ ಬೊಕ್ಕಸಕ್ಕೆ 7,500 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ.

ಈ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ 7 ನೇ ವೇತನ ಆಯೋಗ ವರದಿ ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಯಾವುದೇ ನಿರ್ಧಾರವನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಂಡಿರಲಿಲ್ಲ. ಅಲ್ಲದೇ ಸಂಪನ್ಮೂಲ ಕೊರತೆ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಸಲಹೆ ಆಧರಿಸಿ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ತೀರ್ಮಾನವನ್ನು ರಾಜ್ಯ ಸರ್ಕಾರ ಮುಂದೂಡುತ್ತಾ ಬಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:30 am, Tue, 16 July 24